Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

US Open 2023: ಪ್ರಶಸ್ತಿ ಉಳಿಸಿಕೊಳ್ಳುವತ್ತ ಮುನ್ನಡೆದ ಕಾರ್ಲೋಸ್ ಅಲ್ಕರಾಝ್; ಹೊರಬಿದ್ದ ಕ್ಯಾಮರೂನ್ ನಾರ್ರಿ

ಶನಿವಾರ, ಸೆಪ್ಟೆಂಬರ್ 2ರಂದು ನಡೆದ 2023ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ಅವರು ಡೇನಿಯಲ್ ಇವಾನ್ಸ್ ವಿರುದ್ಧ ಗೆಲುವು ಸಾಧಿಸಿ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮುನ್ನಡೆ ಪಡೆದರು.

ಹಾಲಿ ಯುಎಸ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಡೇನಿಯಲ್ ಇವಾನ್ಸ್ ವಿರುದ್ಧ ಮೂರನೇ ಸುತ್ತಿನ ಗೆಲುವಿನೊಂದಿಗೆ ತಮ್ಮ ಪ್ರಶಸ್ತಿಯ ರಕ್ಷಣೆಯನ್ನು ಮುಂದುವರೆಸಿದರು.

ಕಾರ್ಲೋಸ್ ಅಲ್ಕರಾಝ್ ಅವರು 6-2, 6-3, 4-6, 6-3 ಅಂತರದಲ್ಲಿ ಡೇನಿಯಲ್ ಇವಾನ್ಸ್ ಅವರನ್ನು ಸೋಲಿಸಿ 2023ರ ಯುಎಸ್ ಓಪನ್‌ನ 16ರ ಹಂತಕ್ಕೆ ಪ್ರವೇಶಿಸಿದರು.

US Open 2023: Carlos Alcaraz Enters to Round 4; Cameron Norrie Out Of The Grand Slam

ಈ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಝ್ ಸತತ ಮೂರನೇ ವರ್ಷ ಯುಎಸ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು. ಮೂರು ಗಂಟೆ 10 ನಿಮಿಷಗಳ ಪೈಪೋಟಿಯ ನಂತರ ಅಗ್ರಸ್ಥಾನಕ್ಕೆ ಬರಲು ಸ್ಪೇನ್‌ನ ಅಲ್ಕಾರಾಝ್ ಅತ್ಯುತ್ತಮವಾಗಿ ಆಡಿದರು.

ಪಂದ್ಯದ ನಂತರ ಮಾತನಾಡಿದ ಕಾರ್ಲೋಸ್ ಅಲ್ಕರಾಝ್, ಡೇನಿಯಲ್ ಇವಾನ್ಸ್ ಅವರನ್ನು ಕಠಿಣ ಎದುರಾಳಿ ಎಂದು ಕರೆದರು. ತಾವು ಮತ್ತೊಮ್ಮೆ ಯುಎಸ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಆಡುತ್ತಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದರು.

"ಡೇನಿಯಲ್ ಇವಾನ್ಸ್ ಟ್ರಿಕಿ ಎದುರಾಳಿ. ಆತ ಯಾವಾಗಲೂ ನೆಟ್‌ಗೆ ಹೋಗಲು ಬಯಸುತ್ತಾನೆ. ಇಂದು ನನ್ನ ಆಟ ಎಂದು ನಾನು ಭಾವಿಸುತ್ತೇನೆ. ನಾವು ಉತ್ತಮ ಪಂದ್ಯವನ್ನು ಆಡಿದ್ದೇವೆ. ಜನರು ಅದನ್ನು ಇಷ್ಟಪಟ್ಟಿದ್ದಾರೆ ಎಂದು ಭಾವಿಸುತ್ತೇನೆ. ನಾವು ಇತರ ಪಂದ್ಯಗಳಿಗಿಂತ ಬಹುಶಃ ಉತ್ತಮ ಅಂಕಗಳು, ಉತ್ತಮ ಹೊಡೆತಗಳು, ಸಾಕಷ್ಟು ವಿಭಿನ್ನ ಸನ್ನಿವೇಶಗಳನ್ನು ಸೃಷ್ಟಿ ಮಾಡಿದ್ದೇವೆ. ಯುಎಸ್ ಓಪನ್‌ನಲ್ಲಿ ಮತ್ತೆ ನಾಲ್ಕನೇ ಸುತ್ತನ್ನು ಪ್ರವೇಶಿಸಲು ನನಗೆ ನಿಜವಾಗಿಯೂ ಸಂತೋಷವಾಗಿದೆ," ಎಂದು ಕಾರ್ಲೋಸ್ ಅಲ್ಕರಾಝ್ ತಿಳಿಸಿದರು.

ಕಾರ್ಲೋಸ್ ಅಲ್ಕರಾಝ್ ಮೊದಲ ಸುತ್ತಿನಲ್ಲಿ ಜರ್ಮನಿಯ ಡೊಮಿನಿಕ್ ಕೊಯೆಫರ್ ವಿರುದ್ಧದ ಪಂದ್ಯದಲ್ಲಿ ವಾಕ್ ಓವರ್ ಪಡೆದಿದ್ದರು. ನಂತರ ಅಲ್ಕರಾಝ್ ಎರಡನೇ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು.

ಶನಿವಾರದಂದು ಗ್ರೇಟ್ ಬ್ರಿಟನ್‌ನ ಕ್ಯಾಮರೂನ್ ನಾರ್ರಿ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಅವರನ್ನು 20 ವರ್ಷದ ಅಲ್ಕರಾಝ್ ಇದೀಗ ಅಂತಿಮ-16 ಘಟ್ಟದಲ್ಲಿ ಎದುರಿಸಲಿದ್ದಾರೆ.

US Open 2023: Carlos Alcaraz Enters to Round 4; Cameron Norrie Out Of The Grand Slam

ಯುಎಸ್ ಓಪನ್‌ನಿಂದ ಹೊರಬಿದ್ದ ಕ್ಯಾಮರೂನ್ ನಾರ್ರಿ
ಸದ್ಯ ನಡೆಯುತ್ತಿರುವ 2023ರ ಯುಎಸ್ ಓಪನ್‌ನಲ್ಲಿ ಕೋರ್ಟ್ 17ರಲ್ಲಿ ಮ್ಯಾಟಿಯೊ ಅರ್ನಾಲ್ಡಿ ಅವರ ವಿರುದ್ಧ ಕ್ಯಾಮರೂನ್ ನಾರ್ರಿ ನೇರ ಸೆಟ್‌ಗಳಿಂದ ಸೋತು ಹೊರಬಿದ್ದರು. ಅರ್ನಾಲ್ಡಿ ಮೂರನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್ ನಾರ್ರಿ ಅವರನ್ನು 6-3, 6-4, 6-3 ಸೆಟ್‌ಗಳಿಂದ ಸೋಲಿಸಿದರು.

ವಿಶ್ವದ 61ನೇ ಶ್ರೇಯಾಂಕದ ಮ್ಯಾಟಿಯೊ ಅರ್ನಾಲ್ಡಿ, ಫ್ಲಶಿಂಗ್ ಮೆಡೋಸ್‌ನಲ್ಲಿ ತನ್ನ ಮೊದಲ ಮುಖ್ಯ ಪ್ರದರ್ಶನವನ್ನು ಮಾಡುತ್ತಿದ್ದಾನೆ.

ಕ್ಯಾಮರೂನ್ ನಾರ್ರಿ ವಿರುದ್ಧ ಗೆಲುವು ಸಾಧಿಸಿದ ನಂತರ, ಯಾವುದೇ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಮೊದಲ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದಂತಾಗಿದೆ. ವಾಸ್ತವವಾಗಿ, ಈ ವರ್ಷದ ಯುಎಸ್ ಓಪನ್ ಇಟಲಿಯ ಆಟಗಾರ ಆಡಿದ ಮೂರನೇ ಪ್ರಮುಖ ಗ್ರ್ಯಾಂಡ್ ಸ್ಲಾಮ್ ಆಗಿದೆ.

Story first published: Sunday, September 3, 2023, 7:45 [IST]
Other articles published on Sep 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+