For Quick Alerts
ALLOW NOTIFICATIONS  
For Daily Alerts

US Open 2023: ಕೊಕೊ ಗೌಫ್ ಮುಡಿಗೇರಿದ ಚಾಂಪಿಯನ್ ಪಟ್ಟ: ಸಬಲೆಂಕಾ ರನ್ನರ್‌ಅಪ್

ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅರಿನಾ ಸಬಲೆಂಕಾ ವಿರುದ್ಧ ರೋಚಕ ಕಾದಾಟದಲ್ಲಿ ಗೆದ್ದು ಕೊಕೊ ಗೌಫ್ ಚೊಚಚಲ ಬಾರಿಗೆ ಯುಎಸ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ. ಇದು ಅಮೆರಿಕಾದ ಟೆನಿಸ್ ಆಟಗಾರ್ತಿಯ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್‌ ಕೂಡ ಹೌದು ಎನ್ನುವುದು ಗಮನಾರ್ಹ. 2 ಗಂಟೆ 6 ನಿಮಿಷಗಳ ಕಾಲ ನಡೆದ ಈ ರೋಚಕ ಕಾದಾಟದಲ್ಲಿ 2-6, 6-3, 6-2 ಅಂತರದಿಂದ ಕೊಕೊ ಗೌಫ್ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಕೊಕೊ ಗೌಫ್, ಸೆರೆನಾ ವಿಲಿಯಮ್ಸ್ ನಂತರ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. 1999ರಲ್ಲಿ ಸೆರೆನಾ 18 ವರ್ಷ ವಯಸ್ಸಿನವರಾಗಿದ್ದಾಗ ಫೈನಲ್‌ನಲ್ಲಿ ಮಾರ್ಟಿನಾ ಹಿಂಗಿಸ್ ಅವರನ್ನು 6-3, 7-6 (7-4) ಮಣಿಸಿ ಈ ಸಾಧನೆ ಮಾಡಿದ್ದರು.

US Open 2023: Coco Gauff new champion, lift maiden Grand Slam title after win against Aryna Sabalenka

ಆರಂಭಿಕ ಸೆಟ್ ಬಹುತೇಕ ಏಕಪಕ್ಷೀಯವಾಗಿ ಮುಕ್ತಾಯವಾಗಿತ್ತು. ಮೊದಲ ಸೆಟ್‌ನ ಈ ಸೆಣೆಸಾಟವನ್ನು ತನ್ನ ವಶಕ್ಕೆ ಪಡೆಯಲು ಸಬಲೆಂಕಾ ಕೇವಲ 40 ನಿಮಿಷಗಳನ್ನು ತೆಗೆದುಕೊಂಡಿದ್ದರು. ಸರ್ವ್ ಬ್ರೇಕ್ ಮಾಡುವ ಮೂಲಕ ಪಂದ್ಯ ಆಂಭಿಸಿದ ಅವರು ಆರಂಭದಿಂದಲೇ ಗೌಫ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.

ಎರಡನೇ ಸೆಟ್‌ನಲ್ಲಿ ಗೌಫ್ ಆರಂಭಿಕ ಆಟದಲ್ಲಿ ಸರ್ವ್ ತಮ್ಮದಾಗಿಸಿಕೊಂಡರು. ಆದರೆ ಈ ಸಮಯದಲ್ಲಿಯೂ ಕೂಡ ಗೌಫ್ ಬ್ರೇಕ್ ಪಾಯಿಂಟ್ ಅನ್ನು ಎದುರಿಸಿದರು. ಆದರೆ ಸಬಲೆಂಕಾ ಅವರ ಎರಡು ಬಲವಂತದ ತಪ್ಪುಗಳು ಗೌಫ್‌ಗೆ ವರದಾನವಾಯಿತು.

ಈ ನಡುವೆ ಹಿನ್ನಡೆಯಿಂದ ಚೇತರಿಸಿಕೊಂಡ ಸಬಲೆಂಕಾ ತನ್ನ ಸರ್ವ್‌ಗಳನ್ನು ಹಿಡಿದಿಟ್ಟುಕೊಂಡು ಎರಡನೇ ಸೆಟ್‌ನಲ್ಲಿ 1-1 ಸಮಬಲ ಕಂಡುಕೊಂಡರು. ಈ ಸಮಯದಲ್ಲಿ ಗೌಫ್ 3-1 ಅಂತರ ಪಡೆದುಕೊಳ್ಳುವ ಮೂಲಕ ಮೊದಲ ಬಾರಿಗೆ ಮುನ್ನಡೆ ಸಾಧಿಸಿದರು. ನಂತರ ಈ ಅಂತರ 4-1ಕ್ಕೆ ಏರಿಕೆಯಾಯಿತು. ಈ ಮೂಲಕ ಪಂದ್ಯದಲ್ಲಿ ಮೊದಲ ಬಾರಿಗೆ ಸಬಲೆಂಕಾ ಹಿಡಿತ ಕಳೆದುಕೊಂಡಂತಾದರು.

ಅದಾದ ಬಳಿಕ ಗೌಫ್ ಎದುರಾಳಿ ಸಬಲೆಂಕಾಗೆ ಎರಡನೇ ಸೆಟ್‌ನಲ್ಲಿ ಕಮ್‌ಬ್ಯಾಕ್ ಮಾಡಲು ಸಣ್ಣ ಅವಕಾಶವನ್ನು ಕೂಡ ನೀಡಲೇ ಇಲ್ಲ. ಕೊಕೊ ಗೌಫ್ ಸಬಲೆಂಕಾ ಅವರ ಅನಗತ್ಯ ದೋಷದ ನಂತರ 44 ನಿಮಿಷಗಳಲ್ಲಿ ಸೆಟ್ ಅನ್ನು ಮುಗಿಸಿದರು. ಹೀಗಾಗಿ ಎರಡನೇ ಸೆಟ್‌ನ ಅಂತ್ಯದ ವೇಳೆಗೆ ಪಂದ್ಯ ರೋಚಕ ಹಣಾಹಣಿಗೆ ಸಿದ್ಧವಾಗಿತ್ತು.

ಕೊಕೊ ಗೌಫ್ ಕೊನೆಯ ನಿರ್ಣಾಯಕ ಸೆಟ್ ಅನ್ನು ಅದ್ಭುತವಾಗಿ ಆರಂಭಿಸಿದರು. ಆರಂಭಿಕ ಹಂತದಲ್ಲಿ ಅದ್ಭುತ ಫೋರ್‌ಹ್ಯಾಂಡ್ ಮೂಲಕ ಬಹುತೇಕ ಅಂಕಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ವಿರಾಮದ ವೇಳೆಗೆ 3-0 ಅಂತರದಿಂದ ಮುನ್ನಡೆಯಲ್ಲಿದ್ದರು ಗೌಫ್. ನಂತರ ಸಬಲೆಂಕಾ ಅಂಕವನ್ನು ಪಡೆದುಕೊಂಡರಾದರೂ ಮುಂದಿನ ಗೇಮ್‌ನಲ್ಲಿ ಮತ್ತೆ ಅಂಕವನ್ನು ತಮ್ಮದಾಗಿಸಿಕೊಂಡರು ಗೌಪ್. ಹೀಗಾಗಿ ಸಬಲೆಂಕಾಗೆ ಅವಕಾಶವೇ ದೊರೆಯಲಿಲ್ಲ. ಅಂತಿಮವಾಗಿ ಕೊನೆಯ ಸೆಟ್ ಕೂಡ ಕೊಕೊ ಗೌಫ್ ವಶವಾಗುವ ಮೂಲಕ ಇದೇ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲ್ಯಾಮ್ ಎತ್ತಿ ಹಿಡಿಯುವ ಅವಕಾಶ ಪಡೆದುಕೊಂಡರು ಅಮೆರಿಕಾದ ಯುವ ಆಟಗಾರ್ತಿ ಕೊಕೊ ಗೌಫ್.

Story first published: Sunday, September 10, 2023, 9:10 [IST]
Other articles published on Sep 10, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+