Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಸ್ ಓಪನ್ 2023: 2ನೇ ಸುತ್ತಿಗೆ ಪ್ರವೇಶಿಸಿದ ಮೆಡ್ವೆಡೆವ್, ಜ್ವೆರೆವ್ ಕ್ರೂಸ್, ಓನ್ಸ್ ಜಬೇರ್

ಮಂಗಳವಾರ, ಆಗಸ್ಟ್ 29ರಂದು ನಡೆದ 2023ರ ಯುಎಸ್ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರು 2ನೇ ಸುತ್ತು ಪ್ರವೇಶಿಸಿದರು.

ಇದೇ ವೇಳೆ ಯುಎಸ್ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಮಹಿಳಾ ಪಂದ್ಯಾವಳಿಯಲ್ಲಿ 5ನೇ ಶ್ರೇಯಾಂಕದ ಓನ್ಸ್ ಜಬೇರ್ ಅವರು ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಕ್ಯಾಮಿಲಾ ಒಸೊರಿಯೊ ವಿರುದ್ಧ ಜಯಗಳಿಸಿದರು.

US Open 2023: Daniil Medvedev, Alexander Zverev Cruise and Ons Jaber Enters 2nd Round

ರಷ್ಯಾದ ಟೆನಿಸ್ ತಾರೆ ಡೇನಿಯಲ್ ಮೆಡ್ವೆಡೆವ್ ಅವರು ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಹಂಗೇರಿಯ ಅಟಿಲಾ ಬಾಲಾಜ್‌ರನ್ನು 1 ಒಂದು ಗಂಟೆ 16 ನಿಮಿಷಗಳಲ್ಲಿ 6-1 6-1 6-0 ಅಂತರದಲ್ಲಿ ಸೋಲಿಸಿದರು.

ಡೇನಿಯಲ್ ಮೆಡ್ವೆಡೆವ್ ಇದೀಗ ಯುಎಸ್ ಓಪನ್‌ನಲ್ಲಿ 24-5 ದಾಖಲೆಯನ್ನು ಹೊಂದಿದ್ದಾರೆ. ಈ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಇತರ ಮೂರು ಮೇಜರ್‌ ಪಂದ್ಯಾವಳಿಗಳಿಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ 21 ಗೆಲುವುಗಳು, ವಿಂಬಲ್ಡನ್‌ನಲ್ಲಿ 13 ಗೆಲುವುಗಳು ಮತ್ತು ಫ್ರೆಂಚ್ ಓಪನ್‌ನಲ್ಲಿ 7 ಗೆಲುವು ದಾಖಲಿಸಿದ್ದಾರೆ.

ವುಕಿಕ್ ಸೋಲಿಸಿ 2ನೇ ಪ್ರವೇಶಿಸಿದ ಅಲೆಕ್ಸಾಂಡರ್ ಜ್ವೆರೆವ್

ಇನ್ನು, ವಿಶ್ವದ 12ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಅವರು 2 ಗಂಟೆ 11 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಕ್ ಅವರನ್ನು 6-4, 6-4, 6-4 ಸೆಟ್‌ಗಳಿಂದ ಸೋಲಿಸಿದರು.

US Open 2023: Daniil Medvedev, Alexander Zverev Cruise and Ons Jaber Enters 2nd Round

2020ರಲ್ಲಿ ಯುಎಸ್ ಓಪನ್ ಫೈನಲ್ ತಲುಪಿದ್ದ 26 ವರ್ಷದ ಅಲೆಕ್ಸಾಂಡರ್ ಜ್ವೆರೆವ್ ತಮ್ಮ ಮೊದಲ-ಸರ್ವ್ ಪಾಯಿಂಟ್‌ಗಳಲ್ಲಿ ಶೇಕಡಾ 86 (50/58) ಗಳಿಸಿ ಮುಂದಿನ ಸುತ್ತಿಗೆ ಮುನ್ನಡೆ ಪಡೆದರು.

ಈ ಪಂದ್ಯದಲ್ಲಿ ಗೆದ್ದ ನಂತರ, ಅಲೆಕ್ಸಾಂಡರ್ ಜ್ವೆರೆವ್ ಅವರ ಪ್ರಮುಖ ಪಂದ್ಯಾವಳಿಯಲ್ಲಿ ಇದು 80ನೇ ಗೆಲುವಾಗಿದೆ. ತಮ್ಮ ಮುಂದಿನ ಹಣಾಹಣಿಯಲ್ಲಿ ಡೇನಿಯಲ್ ಆಲ್ಟ್‌ಮೇಯರ್ ಅಥವಾ ಕಾನ್‌ಸ್ಟೆಂಟ್ ಲೆಸ್ಟಿಯೆನ್ನೆಯನ್ನು ಎದುರಿಸಲಿದ್ದಾರೆ.

ಕ್ಯಾಮಿಲಾ ಒಸೊರಿಯೊ ವಿರುದ್ಧ ಹೋರಾಡಿ ಗೆದ್ದ ಓನ್ಸ್ ಜಬೇರ್

ವಿಶ್ವದ 5ನೇ ಶ್ರೇಯಾಂಕದ ಓನ್ಸ್ ಜಬೇರ್ ಅವರು 7-5 7-6(4) ಅಂತರದಲ್ಲಿ ಕ್ಯಾಮಿಲಾ ಒಸೊರಿಯೊ ವಿರುದ್ಧ ಜಯಗಳಿಸಿ 2023ರ ಯುಎಸ್ ಓಪನ್‌ನ ಮಹಿಳಾ ಪಂದ್ಯದಲ್ಲಿ 2ನೇ ಸುತ್ತಿಗೆ ಅರ್ಹತೆ ಪಡೆದರು.

ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ಎರಡು ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಟ್ಯುನಿಷಿಯಾದ ಜಬೇರ್ ಉಸಿರಾಟದ ತೊಂದರೆಗಳನ್ನು ಎದುರಿಸಬೇಕಾಯಿತು.

ಗೆಲುವಿನ ಬಳಿಕ ಮಾತನಾಡಿದ ಓನ್ಸ್ ಜಬೇರ್ ಅವರು ಕ್ಯಾಮಿಲಾ ಒಸೊರಿಯೊ ವಿರುದ್ಧದ ಪಂದ್ಯವು ಸುಲಭವಲ್ಲ ಎಂದು ಒಪ್ಪಿಕೊಂಡರು. ಮುಂದಿನ ಸುತ್ತಿನಲ್ಲಿ ಶ್ರೇಯಾಂಕ ರಹಿತ ಜೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ ವಿರುದ್ಧ ಆಡಲಿದ್ದಾರೆ.

2022ರ ಯುಎಸ್ ಓಪನ್ ಮತ್ತು 2023ರ ವಿಂಬಲ್ಡನ್‌ನಲ್ಲಿ ಎಡವಿದ ನಂತರ ಓನ್ಸ್ ಜಬೇರ್ ತನ್ನ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.

Story first published: Wednesday, August 30, 2023, 6:39 [IST]
Other articles published on Aug 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+