US Open 2023: ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಇಗಾ ಸ್ವಿಯಾಟೆಕ್, 16ರ ಸುತ್ತಿಗೆ ಮುನ್ನಡೆದ ಬೋಪಣ್ಣ-ಎಬ್ಡೆನ್ ಜೋಡಿ
ಶುಕ್ರವಾರ, ಸೆಪ್ಟೆಂಬರ್ 1ರಂದು ನಡೆದ 2023ರ ಯುಎಸ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಕಜಕಿಸ್ತಾನ ಜೋಡಿ ಆಂಡ್ರೆ ಗೊಲುಬೆವ್ ಮತ್ತು ರೋಮನ್ ಸಫಿಯುಲಿನ್ ಸೋಲಿಸುವ ಮೂಲಕ 16ರ ಸುತ್ತಿಗೆ ಮುನ್ನಡೆ ಪಡೆದರು.
ಬೋಪಣ್ಣ ಮತ್ತು ಎಬ್ಡೆನ್ ಜೋಡಿ ನೇರ ಸೆಟ್‌ಗಳಲ್ಲಿ ಗೊಲುಬೆವ್ ಮತ್ತು ಸಫಿಯುಲಿನ್ ಅವರನ್ನು ಸೋಲಿಸುವ ಮೂಲಕ 16ನೇ ಸುತ್ತು ಪ್ರವೇಶಿಸಿದರು.

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ 2023ರ ಯುಎಸ್ ಓಪನ್‌ನ ಎರಡನೇ ಸುತ್ತಿನಲ್ಲಿ ಕಜಕಿಸ್ತಾನ ಜೋಡಿಯನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದರು.
ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಅವರು ಆಸ್ಟ್ರೇಲಿಯದ ಕ್ರಿಸ್ಟೋಫರ್ ಓ'ಕಾನ್ನೆಲ್ ಮತ್ತು ಅಲೆಕ್ಸಾಂಡರ್ ವುಕಿಕ್ ಜೋಡಿಯನ್ನು ಸೋಲಿಸಿದ್ದರು.
43 ವರ್ಷದ ಭಾರತೀಯ ಅನುಭವಿ ರೋಹನ್ ಬೋಪಣ್ಣ ಇತ್ತೀಚೆಗೆ ವಿಂಬಲ್ಡನ್ 2023ರ ಸೆಮಿಫೈನಲ್‌ಗೆ ಎಬ್ಡೆನ್ ಅವರೊಂದಿಗೆ ಅತ್ಯುತ್ತಮ ಪ್ರದರ್ಶಣ ನೀಡಿದ ನಂತರ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಏರಿದರು.

ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ರೋಹನ್ ಬೋಪಣ್ಣ ಏಳನೇ ಸ್ಥಾನಕ್ಕೆ ಏರಿದ್ದು ಸುಮಾರು 10 ವರ್ಷಗಳ ನಂತರ ಇದೇ ಮೊದಲಾಗಿದೆ.
ಪ್ರಶಸ್ತಿ ಉಳಿಸಿಕೊಳ್ಳುವತ್ತ ದೃಷ್ಟಿ ನೆಟ್ಟ ಇಗಾ ಸ್ವಿಯಾಟೆಕ್
ವಿಶ್ವ ನಂಬರ್ 1 ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಟೆಕ್ ನೇರ ಸೆಟ್‌ಗಳಲ್ಲಿ ಕಾಜಾ ಜುವಾನ್‌ರನ್ನು ಸೋಲಿಸುವ ಮೂಲಕ ಯುಎಸ್ ಓಪನ್ ಪ್ರಶಸ್ತಿ ರಕ್ಷಣೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
ಕೇವಲ 49 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಇಗಾ ಸ್ವಿಯಾಟೆಕ್ 6-0, 6-1 ಸೆಟ್‌ಗಳಿಂದ ಸ್ಲೊವೇನಿಯಾದ ತನ್ನ ಆತ್ಮೀಯ ಸ್ನೇಹಿತೆ ಮತ್ತು ಅರ್ಹತಾ ಆಟಗಾರ್ತಿ ಕಾಜಾ ಜುವಾನ್‌ರನ್ನು ಸೋಲಿಸಿ ನಾಲ್ಕನೇ ಸುತ್ತಿಗೆ ಮುನ್ನಡೆದರು. ಸ್ವಿಯಾಟೆಕ್ ಮತ್ತು ಜುವಾನ್ ಬಾಲ್ಯದ ಸ್ನೇಹಿತೆಯರಾಗಿದ್ದು ಮತ್ತು ಒಟ್ಟಿಗೆ ಜೂನಿಯರ್ ಟೆನ್ನಿಸ್ ಆಡುತ್ತಿದ್ದರು.
ಪಂದ್ಯದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ ಇಗಾ ಸ್ವಿಯಾಟೆಕ್ ಆರಂಭಿಕ ಸೆಟ್ ಅನ್ನು ಸುಲಭವಾಗಿ ಗೆದ್ದರು.
ಸರ್ವ್ ಮಾಡುವಾಗ ಕೇವಲ ಮೂರು ಅಂಕಗಳನ್ನು ಕಳೆದುಕೊಂಡರು ಮತ್ತು ತನ್ನ ಮೂರು ಬ್ರೇಕ್ ಪಾಯಿಂಟ್‌ಗಳನ್ನು ಯಶಸ್ವಿಯಾಗಿ ಪರಿವರ್ತಿಸಿದರು. ಎರಡನೇ ಸೆಟ್ ಇದೇ ಮಾದರಿಯನ್ನು ಅನುಸರಿಸಿ ಇಗಾ ಸ್ವಿಯಾಟೆಕ್ ಮೊದಲ 11 ಅಂಕಗಳನ್ನು ಅವಿರೋಧವಾಗಿ ಪಡೆದರು.
ಪಂದ್ಯದಲ್ಲಿ 40 ನಿಮಿಷಗಳ ಕಾಲ ಆಟವಾಡಿದ ನಂತರ, ಕಾಜಾ ಜುವಾನ್ ಸ್ಕೋರ್ ಮಾಡುವಲ್ಲಿ ಯಶಸ್ವಿಯಾದರು. ಅದಕ್ಕೆ ಅವರು ತಮಾಷೆಯಾಗಿ ಇಗಾ ಸ್ವಿಯಾಟೆಕ್ ಅವರತ್ತ ನಗೆ ಬೀರಿದರು.
ಆದಾಗ್ಯೂ, ಇಗಾ ಸ್ವಿಯಾಟೆಕ್ ಅವರು ಅತ್ಯುತ್ತಮ ಸರ್ವಿಸ್ ಹಿಡಿತದೊಂದಿಗೆ ಪಂದ್ಯವನ್ನು ಮುಕ್ತಾಯಗೊಳಿಸಿದರು. ನಂತರ ಇಬ್ಬರು ಆಟಗಾರ್ತಿಯರು ನೆಟ್‌ನಲ್ಲಿ ಪರಸ್ಪರ ಪ್ರೀತಿಯಿಂದ ತಬ್ಬಿಕೊಂಡರು.
ತನ್ನ ಗೆಲುವಿನ ನಂತರ ಮಾತನಾಡಿದ ಇಗಾ ಸ್ವಿಯಾಟೆಕ್, ಇದು ತನ್ನ ಸಹೋದರಿಯ ವಿರುದ್ಧ ಆಡಿದಂತಿದೆ ಎಂದು ಹೇಳಿದರು. ಅವಳು ತನ್ನ ಗಮನವನ್ನು ಆಟದಲ್ಲಿ ಇಟ್ಟುಕೊಳ್ಳಬೇಕು ಮತ್ತು ತಮ್ಮ ಸ್ನೇಹದ ಬಗ್ಗೆ ಯೋಚಿಸಬಾರದು ಎಂದು ಕಿವಿಮಾತು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications