ಇಂದಿನಿಂದ ಯುಎಸ್ ಓಪನ್: ಭಾರತಕ್ಕೆ ಸಿಂಗಲ್ಸ್‌ನಲ್ಲಿ ನಿರಾಸೆ, ಡಬಲ್ಸ್ ಭರವಸೆ
ಪ್ರತಿಷ್ಠಿತ ಟೆನಿಸ್ ಗ್ರ್ಯಾಂಡ್‌ಸ್ಲ್ಯಾಮ್ ಯುಎಸ್ ಓಪನ್ ಇಂದಿನಿಂದ ಆರಂಭಗುತ್ತಿದೆ. ಹೀಗಾಗಿ ಟೆನಿಸ್ ಪ್ರೇಮಿಗಳ ಚಿತ್ತ ಈಗ ಯುಎಸ್ ಓಪನ್ ಮೇಲೆ ನೆಟ್ಟಿದೆ. ಭಾರತದಲ್ಲಿ ಕೂಡ ಕೋಟ್ಯಂತರ ಟೆನಿಸ್ ಅಭಿಮಾನಿಗಳು ಈ ಪ್ರತಿಷ್ಠಿತ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ. ಆದರೆ ಸಿಂಗಲ್ಸ್ ವಿಭಾಗದಲ್ಲಿ ಭಾರತದಿಂದ ಯಾವುದೇ ಸ್ಪರ್ಧಿ ಯುಎಸ್ ಓಪನ್‌ನ ಮುಖ್ಯ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಗಿರುವುದು ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸಿಂಗಲ್ಸ್ ವಿಭಾಗದಲ್ಲಿ ಭಾರತದಿಂದ ಮೂವರು ಟೆನಿಸ್ ಆಟಗಾರರು ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಆದರೆ ಮೂವರು ಕೂಡ ಮುಖ್ಯ ಸುತ್ತಿಗೆ ಪ್ರವೇಶಿಸಲು ವಿಫಲವಾಗಿದ್ದರೆ. ಆದರೆ ಡಬಲ್ಸ್‌ನಲ್ಲಿ ಇಬ್ಬರು ಭಾರತದ ಆಟಗಾರರು ಆಡಲಿದ್ದು ಕುತೂಹಲ ಮೂಡಿಸಿದೆ.

ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಕನ್ನಡಿಗ ರೋಹನ್ ಬೋಪಣ್ಣ
ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಯುಎಸ್ ಓಪನ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರಿಗೆ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಸಾಥ್ ನೀಡಲಿದ್ದು ಐದನೇ ಸೀಡೆಟ್ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಮೇಲೆ ನಿರೀಕ್ಷೆಯಿದ್ದು ಬಲಿಷ್ಠ ಜೋಡಿಗಳಿಗೆ ಪೈಪೋಟಿ ನೀಡುವ ವಿಶ್ವಾಸ ಮೂಡಿಸಿದ್ದಾರೆ. ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದ ಈ ಜೋಡಿ ನೆದರ್ಲ್ಯಾಂಡ್ಸ್ನ ವೆಸ್ಲಿ ಕೂಲ್ಹೋಫ್ ಮತ್ತು ಗ್ರೇಟ್ ಬ್ರಿಟನ್ನ ನೀಲ್ ಸ್ಕುಪ್ಸ್ಕ್ ಜೋಡಿಯ ವಿರುದ್ಧ ಸೋಲು ಕಂಡಿದ್ದರು. ಯುಎಸ್ ಓಪನ್‌ನಲ್ಲಿ ಅದಕ್ಕಿಂತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದಾರೆ.
ಯುಕಿ ಭಾಂಬ್ರಿ- ಪುರುಷರ ಡಬಲ್ಸ್
ಆಸ್ಟ್ರೇಲಿಯನ್ ಓಪನ್ ಜೂನಿಯರ್ ಚಾಂಪಿಯನ್ ಆಗಿರುವ ಯುಕಿ ಭಾಂಬ್ರಿ ಯುಎಸ್ ಓಪನ್‌ನ ಬಲಿಷ್ಠ ಕೋರ್ಟ್‌ನಲ್ಲಿ ಹೇಗೆ ಆಡಬೇಕು ಎನ್ನುವ ಅರುವಿ ಹೊಂದಿದ್ದಾರೆ. ಯುಎಸ್ ಓಪನ್‌ನಲ್ಲಿ ಡಬಲ್ಸ್ ಮೂಲಕ ಚೊಚ್ಚಲ ಪ್ರವೇಶ ಮಾಡಿದ ಯೂಕಿ, ಅನುಭವಿ ಡಬಲ್ಸ್ ಆಟಗಾರರಾಗಿರುವ ಬ್ರೆಜಿಲಿಯನ್ ಮಾರ್ಸೆಲೊ ಡೆಮೊಲಿನರ್ ಅವರೊಂದಿಗೆ ಜೊತೆಗಾರನಾಗಿ ಕಣಕ್ಕಿಳಿಯಲಿದ್ದಾರೆ. ಆಗಾಗ ಗಾಯಕ್ಕೆ ತುತ್ತಾಗಿರುವ ಕಾರಣ ಯೂಕಿ ಭಾಂಬ್ರಿ ತಮ್ಮ ಸಿಂಗಲ್ಸ್ ವೃತ್ತಿಜೀವನವನ್ನು ತ್ಯಜಿಸಬೇಕಾಯಿತು ಮತ್ತು ಈಗ ಪೂರ್ಣ ಪ್ರಮಾಣದಲ್ಲಿ ಡಬಲ್ಸ್ ಆಟಗಾರನಾಗಿ ಆಡುತ್ತಿದ್ದಾರೆ.
ಅರ್ಹತಾ ಸುತ್ತಿಗೆ ಅಂತ್ಯವಾಯಿತು ಸಿಂಗಲ್ಸ್ ಹೋರಾಟ
ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮೂವರು ಆಟಗಾರರು ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದರು. ಸುಮಿತ್ ನಗಲ್ ಅರ್ಹತಾ ಸುತ್ತಿನಲ್ಲಿ ಆಡಿದ್ದು ಮೊದಲ ಸಿತ್ತಿನಲ್ಲಿಯೇ ನಿರ್ಗಮಿಸಿದರು. ನಂತರ ಕರ್ಮಾನ್ ಕೌರ್ ತಾಂಡಿ ಕೂಡ ಮಹಿಳೆಯರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೊದಲ ಸುತ್ತಿನಲ್ಲಿ ಆಡಿ ನಿರ್ಗಮಿಸಿದರು. ಇನ್ನು ಭಾರತದ ನಂಬರ್ 1 ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿರುವ ಅಂಕಿತಾ ರೈನಾ ಅರ್ಹತಾ ಸುತ್ತಿನ ಫೈನಲ್ ಹಂತಕ್ಕೆ ಪ್ರವೇಶಿಸಿದ್ದರು. ಆದರೆ ಮುಖ್ಯ ಸುತ್ತಿಗೆ ಪ್ರವೇಶ ಪಡಯಲು ಅವರು ಕೂಡ ವಿಫಕವಾಗುವ ಮೂಲಕ ಭಾರತದ ಸಿಂಗಲ್ಸ್ ವಿಭಾಗದ ಹೋರಾಟ ಅಲ್ಲಿಗೆ ಅಂತ್ಯವಾದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications