Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

US Open 2023: ಕ್ವಾರ್ಟರ್-ಫೈನಲ್‌ ಪ್ರವೇಶಿಸಿದ ನೊವಾಕ್ ಜೊಕೊವಿಕ್, ಟೇಲರ್ ಫ್ರಿಟ್ಜ್

ಭಾನುವಾರ, ಸೆಪ್ಟೆಂಬರ್ 3ರಂದು ನಡೆದ 2023ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನಲ್ಲಿ ನೊವಾಕ್ ಜೊಕೊವಿಕ್ ಅವರು ಬೋರ್ನಾ ಗಜಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿದರು.

ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಅನುಭವಿ ಆಟಗಾರ ಜೊಕೊವಿಕ್ ಅವರು 6-2, 7-5, 6-4 ಅಂತರದಿಂದ 2 ಗಂಟೆ 26 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.

US Open 2023: Novak Djokovic And Taylor Fritz Reaches Quarter-finals

ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ತಮ್ಮ 13ನೇ ಕ್ವಾರ್ಟರ್-ಫೈನಲ್‌ಗೆ ಮುನ್ನಡೆ ಪಡೆದರು. ಈ ವೇಳೆ ಟೆನ್ನಿಸ್ ದಂತಕಥೆ ರೋಜರ್ ಫೆಡರರ್ ಮತ್ತು ಆಂಡ್ರೆ ಅಗಾಸ್ಸಿ ಅವರ ದಾಖಲೆಯನ್ನು ಸರಿಗಟ್ಟಿದರು.

ಇನ್ನು ಸರ್ಬಿಯಾದ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಇದೀಗ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ರಾತ್ರಿ ಪಂದ್ಯಗಳಲ್ಲಿ 37 ಗೆಲುವುಗಳನ್ನು ಹೊಂದಿದ್ದಾರೆ, ಇದು ಯಾವುದೇ ಆಟಗಾರನಿಗಿಂತ ಹೆಚ್ಚಾಗಿದೆ.

ನೊವಾಕ್ ಜೊಕೊವಿಕ್ ಅವರು ತಮ್ಮ ಮೊದಲ ಸರ್ವ್‌ಗಳಲ್ಲಿ ಅತ್ಯದ್ಭುತವಾಗಿ ಅಡಿದರು. ಇದರಿಂದ ಅವರು ಶೇ.88ರಷ್ಟು ಅಂಕಗಳನ್ನು (51ರಲ್ಲಿ 45) ಗಳಿಸಿದರು. ಅವರು ತಮ್ಮ 13 ಬ್ರೇಕ್ ಪಾಯಿಂಟ್‌ಗಳಲ್ಲಿ ಐದನ್ನು ಅಂಕಗಳಾಗಿ ಪರಿವರ್ತಿಸಿದರು.

ಅಲ್ಲದೆ, ಜೊಕೊವಿಕ್ ಅವರು 26 ವಿನ್ನಿಂಗ್ ಶಾಟ್ ಆಡಿದರು, ಇದು ಬೋರ್ನಾ ಗೊಜೊಗಿಂತ 14 ಕಡಿಮೆ ಆಗಿತ್ತು. ಆದರೆ ಗೊಜೊ ಅವರ 40 ಅನಗತ್ಯ ದೋಷಗಳಿಂದ ಫಲಿತಾಂಶದಲ್ಲಿ ವ್ಯತ್ಯಾಸವನ್ನು ಮಾಡಿತು. ಮತ್ತೊಂದೆಡೆ, ನೊವಾಕ್ ಜೊಕೊವಿಕ್ ಕೇವಲ 12 ಅನಗತ್ಯ ತಪ್ಪುಗಳನ್ನು ಮಾಡಿದರು.

US Open 2023: Novak Djokovic And Taylor Fritz Reaches Quarter-finals

ಇನ್ನು ಜೊಕೊವಿಕ್ ಮುಂದಿನ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಸೆಣಸಲಿದ್ದಾರೆ. ಫ್ರಿಟ್ಜ್ ಹಿಂದಿನ ದಿನದ 16ನೇ ಸುತ್ತಿನ ಪಂದ್ಯದಲ್ಲಿ ಡೊಮಿನಿಕ್ ಸ್ಟ್ರೈಕರ್ ಅವರನ್ನು ಸೋಲಿಸಿದರು.

ಡೊಮಿನಿಕ್ ಸ್ಟ್ರೈಕರ್ ವಿರುದ್ಧ ಗೆದ್ದ ಟೇಲರ್ ಫ್ರಿಟ್ಜ್

ಸುಮಾರು 2 ಗಂಟೆ 13 ನಿಮಿಷಗಳಲ್ಲಿ ನಡೆದ ಪಂದ್ಯದಲ್ಲಿ ಟೇಲರ್ ಫ್ರಿಟ್ಜ್ 7-6 (7-4), 6-4, 6-4 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಸ್ಟ್ರೈಕರ್ ಒಂದೂ ಸೆಟ್ ಗೆಲ್ಲದೆ, ಎಲ್ಲಾ ಮೂರು ಸೆಟ್‌ಗಳನ್ನು ಟೇಲರ್ ಫ್ರಿಟ್ಜ್‌ಗೆ ಬಿಟ್ಟುಕೊಟ್ಟರು. ಹೀಗಾಗಿ ಅಮೆರಿಕದ ಟೆನ್ನಿಸ್ ತಾರೆ ಪ್ರತಿ ಬಾರಿಯೂ ಆಟವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಟೇಲರ್ ಫ್ರಿಟ್ಜ್ ಅದ್ಭುತ ಮೊದಲ ಸರ್ವ್ ಗೆಲುವಿನ ಶೇಕಡಾವಾರು 83 (54 ರಲ್ಲಿ 45) ಮತ್ತು ಅವರು 17 ಏಸ್‌ಗಳನ್ನು ಬಾರಿಸಿದರು. ಫ್ರಿಟ್ಜ್ ತಮ್ಮ ನಾಲ್ಕು ಬ್ರೇಕ್ ಪಾಯಿಂಟ್‌ಗಳಲ್ಲಿ ಮೂರನ್ನೂ ಪರಿವರ್ತಿಸಿದರು.

Story first published: Monday, September 4, 2023, 8:45 [IST]
Other articles published on Sep 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+