For Quick Alerts
ALLOW NOTIFICATIONS  
For Daily Alerts

US Open 2023: ಸ್ಮರಣೀಯ ಪಂದ್ಯದಲ್ಲಿ ತಮ್ಮ 36ನೇ ಗ್ರ್ಯಾಂಡ್ ಸ್ಲಾಮ್ ಫೈನಲ್‌ ತಲುಪಿದ ನೊವಾಕ್ ಜೊಕೊವಿಕ್!

ಶುಕ್ರವಾರ, ಸೆಪ್ಟೆಂಬರ್ 8ರಂದು ನ್ಯೂಯಾರ್ಕ್ ನಗರದಲ್ಲಿ ನಡೆದ 2023ರ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರು ಬೆನ್ ಶೆಲ್ಟನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಅಂತಿಮ ಘಟ್ಟವನ್ನು ಪ್ರವೇಶಿಸಿದರು.

ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯವನ್ನು ಬೆನ್ ಶೆಲ್ಟನ್ ವಿರುದ್ಧ 6-3, 6-2, 7-6 (6-4) ಸೆಟ್‌ಗಗಳ ಅಂತರದಲ್ಲಿ ಗೆಲ್ಲಲು ಸರ್ಬಿಯಾದ ಲೆಜೆಂಡ್ ನೊವಾಕ್ ಜೊಕೊವಿಕ್ 2 ಗಂಟೆ 41 ನಿಮಿಷಗಳನ್ನು ತೆಗೆದುಕೊಂಡರು.

ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಕ್ ಅವರು ತಮ್ಮ 36ನೇ ಗ್ರ್ಯಾಂಡ್ ಸ್ಲಾಮ್ ಫೈನಲ್‌ ತಲುಪಿದರು ಮತ್ತು ಇದು ಓಪನ್ ಟೆನ್ನಿಸ್ ಯುಗದಲ್ಲಿ ಯಾವುದೇ ಆಟಗಾರನಿಗಿಂತ ಅತಿ ಹೆಚ್ಚು ಆಗಿದೆ.

US Open 2023: Novak Djokovic Defeated Ben Shelton To Enter The Final

ಅಲ್ಲದೆ, ನೊವಾಕ್ ಜೊಕೊವಿಕ್ ಅವರು ಯುಎಸ್ ಓಪನ್‌ ಪಂದ್ಯಾವಳಿಯಲ್ಲಿ ತಮ್ಮ 100ನೇ ಪಂದ್ಯವನ್ನು ಆಡಿದರು. ಇಲ್ಲಿ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಸ್ಮರಣೀಯವಾಗಿಸಿಕೊಂಡರು. ಇದು ಫ್ಲಶಿಂಗ್ ಮೆಡೋಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಅವರ 87ನೇ ಗೆಲುವಾಗಿದೆ.

ಇನ್ನು ಡೇನಿಯಲ್ ಮೆಡ್ವೆಡೆವ್ ಮತ್ತು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ನಡುವಿನ ಇನ್ನೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಭಾನುವಾರ ನಡೆಯುವ 2023ರ ಯುಎಸ್ ಓಪನ್‌ ಫೈನಲ್‌ ಪಂದ್ಯದಲ್ಲಿ ಎದುರಿಸಲು ಸರ್ಬಿಯಾದ ನೊವಾಕ್ ಜೊಕೊವಿಕ್ ಎದುರು ನೋಡುತ್ತಿದ್ದಾರೆ.

ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರು ಕಾರ್ಲೋಸ್ ಅಲ್ಕರಾಝ್ ಅವರನ್ನು ಎದುರಿಸಿದರೆ, ಅದು 2023ರ ವಿಂಬಲ್ಡನ್ ಫೈನಲ್‌ನ ಪುನರಾವರ್ತನೆಯಾಗಲಿದೆ. ಅಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅವರು ಸರ್ಬಿಯಾ ಟೆನ್ನಿಸ್ ತಾರೆ ವಿರುದ್ಧ ರೋಚಕ ಐದು-ಸೆಟ್‌‌ಗಳಲ್ಲಿ ಸೋಲಿಸಿದ್ದರು.

US Open 2023: Novak Djokovic Defeated Ben Shelton To Enter The Final

ಶುಕ್ರವಾರ ನಡೆದ ಯುಎಸ್ ಓಪನ್‌ನ ಸೆಮಿಫೈನಲ್‌ನಲ್ಲಿ ಗೆದ್ದ ನಂತರ, ನೊವಾಕ್ ಜೊಕೊವಿಕ್ ಅವರು ಅಮೆರಿಕದ ಬೆನ್ ಶೆಲ್ಟನ್ ಅವರ 'ಫೋನ್' ಸಂಭ್ರಮಾಚರಣೆಯನ್ನು ಅನುಕರಿಸಿದರು. ಈ ಬಗ್ಗೆ ಮಾತನಾಡಿದ ಜೊಕೊವಿಕ್, "ನಾನು ಬೆನ್ ಶೆಲ್ಟನ್ ಅವರ ಸಂಭ್ರಮಾಚರಣೆಯನ್ನು ಪ್ರೀತಿಸುತ್ತೇನೆ. ಇದು ತುಂಬಾ ಓರಿಜಿನಲ್ ಎಂದು ನಾನು ಭಾವಿಸಿದೆ. ನಾನು ಅವರನ್ನು ನಕಲಿಸಿದೆ. ನಾನು ಅವರ ಸಂಭ್ರಮಾಚರಣೆಯನ್ನು ಕದ್ದಿದ್ದೇನೆ," ಎಂದು ತಿಳಿಸಿದರು.

ಬೆನ್ ಶೆಲ್ಟನ್ ವಿರುದ್ಧ ಪ್ರಾಬಲ್ಯ ಸಾಧಿಸಿದ ನೊವಾಕ್ ಜೊಕೊವಿಕ್
ಸೆಮಿಫೈನಲ್ ಪಂದ್ಯದಲ್ಲಿ ಬೆನ್ ಶೆಲ್ಟನ್ ವಿರುದ್ಧ ನೊವಾಕ್ ಜೊಕೊವಿಕ್ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದರು. ಶೆಲ್ಟನ್ ಆಕ್ರಮಣಕಾರಿ ಮಾರ್ಗವನ್ನು ಹಿಡಿಯಲು ಪ್ರಯತ್ನಿಸಿದರೂ, ಜೊಕೊವಿಕ್ ಅವರನ್ನು ತಡೆಯಲು ಅದು ಸಾಕಾಗಲಿಲ್ಲ.

ಆರಂಭಿಕ ಸೆಟ್‌ನಲ್ಲಿ ನೊವಾಕ್ ಜೊಕೊವಿಕ್ 6-3 ಅಂತರದಲ್ಲಿ ಗೆದ್ದರೆ, ನಂತರದ ಸೆಟ್‌ನಲ್ಲಿ 6-2 ಮತ್ತು ಮೂರನೇ ಸೆಟ್ ಅನ್ನು 7-6 (6-4) ಗೆಲ್ಲುವ ಮೂಲಕ ದಾಖಲೆಯ ಫೈನಲ್‌ಗೆ ದಾರಿಮಾಡಿಕೊಂಡರು.

Story first published: Saturday, September 9, 2023, 8:30 [IST]
Other articles published on Sep 9, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+