ಯುಎಸ್ ಓಪನ್ 2023: ಐತಿಹಾಸಿಕ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ನೊವಾಕ್ ಜೊಕೊವಿಕ್
US ಓಪನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಡೇನಿಲ್ ಮಡ್ವೆಡೇವ್ ವಿರುದ್ಧ ನೊವಾಕ್ ಜೊಕೊವಿಕ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫ್ಲಶಿಂಗ್ ಮೆಡೋಸ್‌ನಲ್ಲಿ ಇದು ಅವರ ನಾಲ್ಕನೇ ಪ್ರಶಸ್ತಿಯಾಗಿದ್ದರೆ ಒಟ್ಟಾರೆಯಾಗಿ ಅವರು ಗೆದ್ದಿರುವ ಐತಿಹಾಸಿಕ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಆಗಿದೆ.
ಈ ಮೂಲಕ ಓಪನ್ ಎರಾದಲ್ಲಿ ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೆರೆನಾ ವಿಲಿಯಮ್ಸನ್ ಅವರನ್ನು ಕೂಡ ಜೊಕೊವಿಕ್ ಈಗ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. 6-3, 7-6 (7-5), 6-3 ಅಂತರದಿಂದ ಡೇನಿಲ್ ಮಡ್ವೆಡೇವ್ ಅವರನ್ನು ಮಣಿಸಿ ಈ ಸರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಅವರು ಅತ್ಯಂತ ಪ್ರಮುಖ ಸಿಂಗಲ್ಸ್ ಪ್ರಶಸ್ತಿಗಳ ದಂತಕಥೆ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಿದರು. ಇದಲ್ಲದೆ, ಜೊಕೊವಿಕ್ ಓಪನ್ ಯುಗದಲ್ಲಿ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಮೂರು ಗಂಟೆ 16 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಸರ್ಬಿಯಾದ ದಂತಕಥೆ ತನ್ನ ವೃತ್ತಿಜೀವನದ 36ನೇ ಫೈನಲ್‌ನಲ್ಲಿ ಆಡಿ 24 ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ತನ್ನ 10 ನೇ ಯುಎಸ್ ಓಪನ್ ಫೈನಲ್‌ನಲ್ಲಿ ಆಡಿದ ಜೊಕೊವಿಕ್ ಆರಂಭಿಕ ಮೇಲುಗೈ ಸಾಧಿಸಿದ್ದರು. ಆರಂಭದಲ್ಲಿ 3-0 ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಅದಾದ ಬಳಿಕ ಅನುಭವಿ ಆಟಗಾರ ಹಿಂತಿರುಗಿ ನೋಡಲಿಲ್ಲ. 48 ನಿಮಿಷಗಳಲ್ಲಿ ಮೊದಲ ಸೆಟ್ಟನ್ನು ಅಂತ್ಯಗೊಳಿಸಿದರು. ಎರಡನೇ ಸೆಟ್‌ನಲ್ಲಿ ಅತ್ಯಂತ ಜಿದ್ದಾಜಿದ್ಗದಿನ ಹೋರಾಟ ಕಂಡು ಬಂದಿತ್ತು. ಇನ್ನು ಕೊನೆಯ ಸೆಟ್ಟನ್ನು ಕೂಡ ಜೊಕೊವಿಕ್ ತನ್ನ ವಶಕ್ಕೆ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಐತಿಹಾಸಿಕ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಬಳಿಕ ಮಾತನಾಡಿರುವ ಜೊಕೊವಿಕ್ "ಈ ಕ್ರೀಡೆಯಲ್ಲಿ ನೂತನ ಇತಿಹಾಸ ರಚನೆ ಮಾಡಿರುವುದು ನಿಜಕ್ಕೂ ವಿಶೇಷ ಹಾಗೂ ಅದ್ಭುತವಾದ ಅನುಭವ ನೀಡಿದೆ. ಖಂಡಿತವಾಗಿಯೂ ಇದು ವಿಶೇಷವಾದ ಗೆಲುವು. ಈ ಗೆಲುವನ್ನು ವರ್ಣಿಸಲು ಪದಗಳಿಂದ ಸಾಧ್ಯವಾಗುವುದಿಲ್ಲ. ನಾನು ನನ್ನ ಬಾಲ್ಯದಲ್ಲಿ 7-8 ವಯಸ್ಸಿನಲ್ಲಿದ್ದಾಗ ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರನಾಗಬೇಕು ಎಂಬ ಕನಸು ಕಂಡಿದ್ದೆ ಮತ್ತು ವಿಂಬಲ್ಡನ್ ಟ್ರೋಫಿ ಗೆಲ್ಲಬೇಕು ಎನಿಸಿಕೊಂಡಿದ್ದೆ. ನಾನು ಅದನ್ನು ಮಾತ್ರವೇ ಬಯಸಿದ್ದೆ. ಆದರೆ ನಾನು ಆಟವನ್ನು ಆರಂಭಿಸಿದಾಗ ಅರ್ಥವಾಗಿ ಹೊಸ ಕನಸುಗಳನ್ನು ಕಾಣಲು ಆರಂಭಿಸಿದೆ. ಹೊಸ ಗುರಿಗಳನ್ನು ಹೊಂದಿದೆ"
"ನಾನು ಇಲ್ಲಿ ನಿಂತು 24 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದ ಬಗ್ಗೆ ಮಾತಮಾಡುತ್ತೇನೆ ಎಂದು ಯಾವತ್ತೂ ಊಹೆ ಮಾಡಿರಲಿಲ್ಲ. ಇದು ನಿಜವಾಗಲಿದೆ ಎಂದು ನಾನು ನಿರೀಕ್ಷೆ ಮಾಡಿರಲೇ ಇಲ್ಲ. ಆದರೆ ಕಳೆದ ಕೆಲ ವರ್ಷಗಳಲ್ಲಿ ಇದು ಸಾಧ್ಯವಿದೆ ಎನಿಸಿತ್ತು. ಇತಿಹಾಸದ ಸನಿಹದಲ್ಲಿದ್ದಾಗ ಅದನ್ನು ಯಾಕೆ ಬಾಚಿಕೊಳ್ಳಬಾರದು ಎನಿಸಿತ್ತು" ಎಂದಿದ್ದಾರೆ ನಿವಾಕ್ ಜೊಕೊವಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications