For Quick Alerts
ALLOW NOTIFICATIONS  
For Daily Alerts

US Open: ಸೆಮಿಫೈನಲ್‌ಗೆ ಪ್ರವೇಶಿಸಿದ ಬೋಪಣ್ಣ- ಎಡ್ಬೆನ್ ಜೋಡಿ

ಭಾರತದ ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಯುಎಸ್ ಓಪನ್‌ 2023ರ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಹತ್ತಿರದಲ್ಲಿದ್ದಾರೆ. 2010ರ ಯುಎಸ್ ಓಪನ್‌ನಲ್ಲಿ ರೋಹನ್ ಬೋಪಣ್ಣ ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜೊತೆಗೆ ಡಬಲ್ಸ್‌ನಲ್ಲಿ ಆಡಿ ಏಕೈಕ ಬಾರಿ ಉಎಸ್ ಓಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಸಾಧನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂಥಾ ಮಹತ್ವದ ಸಾಧನೆಯ ಸನಿಹದಲ್ಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಯುಎಸ್ ಓಪನ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜೊತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮಂಗಳವಾರ ತಮ್ಮ ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ಪ್ರಸ್ತುತ ಆರನೇ ಸೀಡ್‌ನ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

US Open 2023: Rohan Bopanna and Matt Ebden pair enter mens doubles semi-finals with straight-sets victory

ಮತ್ತು ಈ ಹಿಂದೆ ವಿಂಬಲ್ಡನ್ 2021 ನಲ್ಲಿ ಸೆಮಿ-ಫೈನಲ್ ತಲುಪಿದ ಜೋಡಿ, 15 ನೇ ಶ್ರೇಯಾಂಕದ ಅಮೇರಿಕನ್ ತಂಡವಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ಸೆಟ್‌ಗಳಿಂದ ಸೋಲಿಸಿದರು.

ಈ ಪಂದ್ಯ ಒಂದು ಗಂಟೆ 28 ನಿಮಿಷಗಳ ಕಾಲ ರೋಚಕವಾಗಿ ನಡೆದ ಈ ಪಂದ್ಯ ಆಟದ ಪೈಪೊಟಿಗೆ ಸಾಕ್ಷಿಯಾಗಿತ್ತು. ಲ್ಯಾಮನ್ಸ್ ಮತ್ತು ವಿಥ್ರೋ ಈ ಹಿಂದಿನ ಸುತ್ತಿನಲ್ಲಿ ವಿಂಬಲ್ಡನ್ ಚಾಂಪಿಯನ್‌ಗಳು ಮತ್ತು ಅಗ್ರ ಶ್ರೇಯಾಂಕದ ಜೋಡಿಯಾದ ವೆಸ್ಲಿ ಕೂಹ್ಲೋಫ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಮಣಿಸಿ ಹೊರದಬ್ಬಿದ್ದರು.

ಬೋಪಣ್ಣ-ಎಬ್ಡೆನ್ ಜೋಡಿಯು ಫ್ಲಶಿಂಗ್ ಮೆಡೋಸ್‌ನಲ್ಲಿ ತಮ್ಮ ಅಭಿಯಾನವನ್ನು ಗೆಲುವಿನ ಮೂಲಕ ಶುಭಾರಂಭ ಮಾಡಿದ್ದರು. ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಓ'ಕಾನ್ನೆಲ್ ಮತ್ತು ಅಲೆಕ್ಸಾಂಡರ್ ವುಕಿಕ್ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿ ಮುಂದಿನ ಹಂತಕ್ಕೇರಿದ್ದರು. ಅದಾದ ಬಳಿಕ ಆಂಡ್ರೆ ಗೊಲುಬೆವ್ ಮತ್ತು ರೋಮನ್ ಸಫಿಯುಲಿನ್ ಜೋಡಿಯ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ ಜೂಲಿಯನ್ ಕ್ಯಾಶ್ - ಹೆನ್ರಿ ಪ್ಯಾಟನ್ ವಿರುದ್ಧ ಜಯ ಗಳಿಸಿದ್ದು ಪ್ರಶಸ್ತಿ ಮೇಲೆ ಬಲವಾಗಿ ತಮ್ಮ ಚಿತ್ತ ನೆಟ್ಟಿದ್ದಾರೆ.

ಈ ಭಾರತ-ಆಸ್ಟ್ರೇಲಿಯನ್ ಜೋಡಿ ಈ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ ರೋಟರ್‌ಡ್ಯಾಮ್ ಮತ್ತು ಮ್ಯಾಡ್ರಿಡ್‌ನಲ್ಲಿಯೂ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಅವರು ಎಟಿಪಿ ಫೈನಲ್ಸ್‌ನ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ನವೆಂಬರ್ 12 ರಿಂದ 19 ರವರೆಗೆ ನಡೆಯಲಿರುವ ಪ್ರತಿಷ್ಠಿತ ಸ್ಪರ್ಧೆಯಾಗಿದ್ದು ಅಲ್ಲಿ ವರ್ಷದ ಅಗ್ರ ಎಂಟು ಜೋಡಿಗಳು ಸ್ಪರ್ಧಿಸಲಿದ್ದಾರೆ.

Story first published: Wednesday, September 6, 2023, 9:40 [IST]
Other articles published on Sep 6, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+