Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

US Open 2023: ಪುರುಷರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ ಬೋಪಣ್ಣ-ಎಬ್ಡೆನ್ ಜೋಡಿ; ದಾಖಲೆ ಬರೆದ ಭಾರತೀಯ!

ಗುರುವಾರ, ಸೆಪ್ಟೆಂಬರ್ 7ರಂದು ನ್ಯೂಯಾರ್ಕ್‌ನಲ್ಲಿ ನಡೆದ 2023ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ತಲುಪಿದರು.

ತಮ್ಮ ಗೆಲುವಿನ ಓಟವನ್ನು ಮುಂದುವರೆಸಿರುವ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ ನೇರ ಸೆಟ್‌ಗಳ ಜಯಭೇರಿ ಬಾರಿಸಿದರು.

ಇದು ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರೋಹನ್ ಬೋಪಣ್ಣ ಅವರ ಎರಡನೇ ಪಂದ್ಯವಾಗಿದೆ. ಈ ವರ್ಷದ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಆರನೇ ಶ್ರೇಯಾಂಕದ ಭಾರತ-ಆಸ್ಟ್ರೇಲಿಯನ್ ಜೋಡಿ, ಹಾರ್ಡ್ ಕೋರ್ಟ್ ಮೇಜರ್‌ನ ಸೆಮಿಫೈನಲ್‌ನಲ್ಲಿ ಫ್ರೆಂಚ್ ಜೋಡಿಯನ್ನು 7-6 (7-3), 6-2 ಸೆಟ್‌ಗಳಿಂದ ಸೋಲಿಸಿದರು.

US Open 2023: Rohan Bopanna And Matthew Ebden Duo Reach Mens Doubles Final

ಈ ಸಾಧನೆಯೊಂದಿಗೆ 43 ವರ್ಷ 6 ತಿಂಗಳ ಭಾರತೀಯ ತಾರೆ ರೋಹನ್ ಬೋಪಣ್ಣ ಓಪನ್ ಟೆನ್ನಿಸ್ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರೋಹನ್ ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡುವ ಮೂಲಕ ಈ ಹಿಂದೆ 43 ವರ್ಷ ಮತ್ತು 4 ತಿಂಗಳುಗಳಾಗಿದ್ದಾಗ ಆಡಿದ್ದ ಕೆನಡಾದ ಡೇನಿಯಲ್ ನೆಸ್ಟರ್ ಅವರ ದಾಖಲೆಯನ್ನು ಎರಡು ತಿಂಗಳುಗಳಿಂದ ಮೀರಿಸಿದರು.

ಗಮನಾರ್ಹವಾಗಿ, ಯುಎಸ್ ಓಪನ್‌ನಲ್ಲಿ ರೋಹನ್ ಬೋಪಣ್ಣ 2010ರಲ್ಲಿ ಪಾಕಿಸ್ತಾನಿ ಜೊತೆಗಾರ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡಿದ್ದರು.

ಇನ್ನು 2023ರ ಯುಎಸ್ ಓಪನ್ ಫೈನಲ್‌ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ಅಮೆರಿಕದ ರಾಜೀವ್ ರಾಮ್-ಜೋ ಸಾಲಿಸ್‌ಬರಿ ಮತ್ತು ಕ್ರೊಯೇಷಿಯನ್-ಅಮೆರಿಕನ್ ಜೋಡಿಯಾದ ಇವಾನ್ ಡೋಡಿಗ್-ಆಸ್ಟಿನ್ ಕ್ರಾಜಿಸೆಕ್ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಭಾರತೀಯ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಅವರು ಇಂಡೋನೇಷ್ಯಾದ ಜೊತೆಗಾರ್ತಿ ಅಲ್ದಿಲಾ ಸುಟ್ಜಿಯಾಡಿ ಅವರೊಂದಿಗೆ ಎರಡನೇ ಸುತ್ತಿನಲ್ಲಿ ಸೋಲುವ ಮೂಲಕ ಮಿಶ್ರ ಡಬಲ್ಸ್ ಪಂದ್ಯಾವಳಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ.

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು 2023ರ ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನಲ್ಲೊ ಕನಿಷ್ಠ ರನ್ನರ್-ಅಪ್ ಸ್ಥಾನವನ್ನು ಖಚಿತಪಡಿಸಿದ್ದಾರೆ.

Story first published: Friday, September 8, 2023, 1:20 [IST]
Other articles published on Sep 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+