Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಸ್ ಓಪನ್: ಡ್ಜುಮ್ಹೂರ್ ಮಣಿಸಿದ ಜೊಕೋವಿಕ್ ದ್ವಿತೀಯ ಸುತ್ತಿಗೆ ಲಗ್ಗೆ

US Open: Novak Djokovic rolls into second round

ನ್ಯೂಯಾರ್ಕ್: ಯುಎಸ್ ಓಪನ್‌ನಲ್ಲಿ ಸ್ಪರ್ಧೆಗಿಳಿದಿರುವ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ 4ನೇ ಯುಎಸ್ ಓಪನ್ ಗೆಲ್ಲುವತ್ತ ಮತ್ತು 18ನೇ ಗ್ರ್ಯಾಂಡ್‌ಸ್ಲ್ಯಾಮ್ ಜಯದತ್ತ ಮುನ್ನುಗ್ಗುತ್ತಿದ್ದಾರೆ. ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ಜೊಕೋವಿಕ್ ಮುನ್ನಡೆ ಸಾಧಿಸಿದ್ದಾರೆ.

ಯುಎಸ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಜೊಕೋವಿಕ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ ಆಟಗಾರ ದಮೀರ್ ಡ್ಜುಮ್ಹೂರ್ ವಿರುದ್ಧ 6-1, 6-4, 6-1ರ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಆರ್ಥರ್ ಆ್ಯಷ್ ಸ್ಟೇಡಿಯಂ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ 28ರ ಹರೆಯದ ಡ್ಜುಮ್ಹೂರ್ ಮೊದಲ ಸೆಟ್‌ನಲ್ಲಿ ತಪ್ಪುಗಳನ್ನೆಸಗಿ ಆರಂಭದಲ್ಲೇ 0-3ಯ ಹಿನ್ನೆಡೆ ಅನುಭವಿಸಿದರು. ದ್ವಿತೀಯ ಸೆಟ್‌ನಲ್ಲಿ ಡ್ಜುಮ್ಹೂರ್ ಕೊಂಚ ಪ್ರಬಲ ಪೈಪೋಟಿ ನೀಡಿದರು.

ಆದರೆ ವಿಶ್ವ ನಂ.1 ಶ್ರೇಯಾಂಕಿತ ಜೊಕೋವಿಕ್ ದಿಟ್ಟ ಪ್ರದರ್ಶನದೊಂದಿಗೆ ಗೆಲುವು ತನ್ನದಾಗಿಸಿಕೊಂಡರು. ಮುಂದಿನ ಸುತ್ತಿನಲ್ಲಿ ಜೊಕೋವಿಕ್, ಬ್ರಿಟಿಷ್ ಆಟಗಾರ ಕೈಲಿ ಎಡ್ಮಂಡ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, September 2, 2020, 9:58 [IST]
Other articles published on Sep 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+