ಯುಎಸ್ ಓಪನ್: ನೊವಾಕ್ ಜೊಕೊವಿಕ್‌ಗೆ ಮೊದಲ ಸುತ್ತಿನಲ್ಲಿ ಗೆಲುವು: ಅಗ್ರ ಶ್ರೇಯಾಂಕಕ್ಕೆ ಮರಳಿದ ದಿಗ್ಗಜ
ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ಗೆ ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ. ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಫ್ರಾನ್ಸ್‌ನ ಅಲೆಗ್ಸಾಂಡರ್ ಮುಲ್ಲರ್ ಅವರನ್ನು ಎದುರಿಸಿದ್ದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಿಂದಿಗೆ ಎಟಿಪಿ ಶ್ರೇಯಾಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಗಳಿಸಿದ್ದಾರೆ ಸರ್ಬಿಯಾದ ದಿಗ್ಗಜ ಟೆನಿಸಿಗ.
ಯುಎಸ್ ಓಪನ್ 2021ರ ಫೈನಲ್‌ನಲ್ಲಿ ಡೇನಿಲ್ ಮಡ್ವೆಡೇವ್ ವಿರುದ್ಧ ಸೋತು ಕ್ಯಾಲೆಂಡರ್ ಈಯರ್ ಗ್ರ್ಯಾಂಡ್‌ಸ್ಲ್ಯಾಮ್ ಅವಕಾಶ ಕಳೆದುಕೊಂಡ ಬಳಿಕ ಯುಎಸ್ ಓಪನ್‌ನಲ್ಲಿ ಜೊಕೊವಿಕ್ ಮೊದಲ ಪಂದ್ಯವನ್ನು ಆಡಿದರು. ಈ ಸೆಣೆಸಾಟದಲ್ಲಿ ಆಕ್ರಮಣಕಾರಿಯಾಗಿ ಕಂಡ ಅನುಭವಿ ಆಟಗಾರ ಜೊಕೊವಿಕ್ 6-0, 6-2, 6-3 ಅಂತರದಿಂದ ಎದುರಾಳಿ ಮುಲ್ಲರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಸೆಣೆಸಾಟದಲ್ಲಿ ಜೊಕೊವಿಕ್ ಅವರ ಪ್ರಾಬಲ್ಯ ಅತ್ಯಂತ ಸ್ಪಷ್ಟವಾಗಿತ್ತು. ಈ ಮುಖಾಮುಖಿಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಚೆಲ್ ಒಬಾಮಾ ಸಾಕ್ಷಿಯಾಗಿದ್ದರು.

ಜೊಕೊವಿಕ್ ಅವರ ಈ ಪಂದ್ಯದ ಗೆಲುವಿನೊಂದಿಗೆ ಹಾಲಿ ಯುಎಸ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರಿಂದ ಸೆಪ್ಟೆಂಬರ್ 11 ರಂದು ನಂ.1 ಶ್ರೇಯಾಂಕವನ್ನು ಮರಳಿ ಪಡೆಯುವುದು ಖಚಿತವಾಗಿದೆ. ಈ ಮೂಲಕ ಜೊಕೊವಿಕ್ 390ನೇ ವಾರವನ್ನು ಅಗ್ರಸ್ಥಾನದಲ್ಲಿ ಮುಂದುವರಿಸಲಿದ್ದಾರೆ.
ಇನ್ನು ಯುಎಸ್ ಓಪನ್ 2023ರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 4ನೇ ಶ್ರೇಯಾಂಕದ ಹೋಲ್ಗರ್ ರೂನ್ ಆಘಾತಕಾರಿಯಾಗಿ ಸೋತು ನಿರ್ಗಮಿಸಿದ್ದಾರೆ. ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ವಿರುದ್ಧ ರೂನ್ ಸೋಲು ಕಂಡಿದ್ದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದಾರೆ. ಎರಡು ಗಂಟೆ 42 ನಿಮಿಷಗಳಲ್ಲಿ ನಡೆದ ಈ ಸೆಣೆಸಾಟದಲ್ಲಿ ಸ್ಪೇನ್ ಆಟಗಾರ 6-3, 4-6, 6-3, 6-2 ಸೆಟ್‌ಗಳ ಅಂತರದಿಂದ ಗೆದ್ದಿದ್ದಾರೆ. ಎಟಿಪಿ ಸರ್ಕ್ಯೂಟ್‌ನಲ್ಲಿ ಬೇನಾ ಅಗ್ರ 10 ಶ್ರೇಯಾಂಕಿತರ ವಿರುದ್ಧ ಗೆಲುವು ಸಾಧಿಸಿರುವುದು ಇದೇ ಮೊದಲು.
ಮತ್ತೊಂದೆಡೆ ಕಳೆದ ವರ್ಷ ಯುಎಸ್ ಓಪನ್‌ನಲ್ಲಿ ರಾಫೆಲ್ ನಡಾಲ್‌ಗೆ ಸೋಲಿನ ರುಚಿ ತೋರಿಸಿದ್ದ ಫ್ರಾನ್ಸಿಸ್ ಟಿಯಾಫೋ ಮೊದಲ ಸುತ್ತಿನಲ್ಲಿ 17 ವರ್ಷದ ಲರ್ನರ್ ಟಿಯೆನ್ ಅವರನ್ನು 6-2, 7-5, 6-1 ಅಂತರದಿಂದ ಮಣಿಸಿದ್ದಾರೆ. ಈ ಸೆಣೆಸಾಟದಲ್ಲಿ ಗೆಲುವು ಸಾಧಿಸಲು ಅಮೆರಿಕನ್ ಆಟಗಾರ ಎರಡು ಗಂಟೆ ಎಂಟು ನಿಮಿಷಗಳನ್ನು ತೆಗೆದುಕೊಂಡರು. ಟಿಯೆನ್ ಕೂಡ ಅದ್ಭುತ ಹೋರಾಟ ಪ್ರದರ್ಶಿಸಿದರಾದರೂ ಟಿಯಾಫೋನ ಸಾಮರ್ಥ್ಯದ ಮುಂದೆ ಗೆಲುವು ಅಸಾಧ್ಯವಾಗಿತ್ತು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೀಟ್ರಿಜ್ ಹಡ್ಡಾಡ್ ಮಾಯಾ ಎರಡು ಗಂಟೆ 57 ನಿಮಿಷಗಳ ಕಾದಾಟದಲ್ಲಿ ಸ್ಲೋನ್ ಸ್ಟೀಫನ್ಸ್‌ರನ್ನು ಮಣಿಸಿದ್ದಾರೆ. 6-2, 5-7, 6-4 ಸೆಟ್‌ಗಳ ಅಂತರದಿಂದ ಗೆದ್ದ ಬೀಟ್ರಿಜ್ ಹಡ್ಡಾಡ್ ಮಾಯಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ವರ್ಷದ ವಿಂಬಲ್ಡನ್‌ನಲ್ಲಿ ಹಡ್ಡಾಡ್ ಮಾಯಾ ಗಾಯದಿಂದ ನಿರ್ವೃತ್ತರಾಗಿದ್ದರು. ಮುಂದಿನ ಸುತ್ತಿನಲ್ಲಿ ಅವರಿಗೆ ಯುಎಸ್‌ಎನ ಟೇಲರ್ ಟೌನ್‌ಸೆಂಡ್ ಸವಾಲೊಡ್ಡಲಿದ್ದಾರೆ.
ಟಿಯಾಫೊ 37 ವಿನ್ನರ್ಸ್‌ಗಳನ್ನು ಈ ಪಂದ್ಯದಲ್ಲಿ ಬಾರಿಸುವ ಮೂಲಕ ಪಂದ್ಯದಲ್ಲಿ ಹಿಡಿತವನ್ನು ಸಾಧಿಸಿದ್ದರು. ಆದರೆ 41 ಅನಗತ್ಯ ತಪ್ಪುಗಳಿನ್ನು ಮಾಡಿದ್ದು ಇದರಲ್ಲಿ ಸುಧಾರಣೆ ಕಾಣಬೇಕಿದೆ. ಟಿಯಾಫೋ ಮುಂದಿನ ಸುತ್ತಿನಲ್ಲಿ ಪೋರ್ಚುಗಲ್‌ನ ನುನೊ ಬೋರ್ಗೆಸ್ ವಿರುದ್ಧ ಗೆದ್ದ ಸೀಬಾಸ್ಟಿಯನ್ ಓಫ್ನರ್ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications