ಯುಎಸ್ ಓಪನ್ 2018ರ ಚಾಂಪಿಯನ್ ಜೊಕೋವಿಕ್ ಸಾಧನೆಗಳ ಸುತ್ತ

ನ್ಯೂಯಾರ್ಕ್, ಸೆಪ್ಟೆಂಬರ್ 10: ನ್ಯೂಯಾರ್ಕ್ ನಲ್ಲಿ ನಡೆದ ಯುಎಸ್ ಓಪನ್ 2018 ಟೆನಿಸ್ ಪಂದ್ಯಾಟದಲ್ಲಿ ನೊವಾಕ್ ಜೊಕೋವಿಕ್ ಅವರು ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಕ್, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಮಣಿಸಿದರು.
ಸೆಪ್ಟೆಂಬರ್ 9ರ ಭಾನುವಾರ ನಡೆದ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಸರ್ಬಿಯಾ ಆಟಗಾರ ಜೊಕೋವಿಕ್ ಅವರು ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ಅವರನ್ನು 6-3, 7-6 (7/4) ಅಂತರದಿಂದ ಹಿಮ್ಮೆಟ್ಟಿಸಿದರು.
ಎಂಟನೇ ಬಾರಿಗೆ ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದ ನೊವಾಕ್ ಗೆ ದೊರೆಯುತ್ತಿರುವ 14ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಿದು. ವಿಶ್ವ ರ್ಯಾಂಕಿಂಗ್ ನಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಜೊಕೋವಿಕ್ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

8ನೇ ಬಾರಿಯ ಫೈನಲ್
ಯುಎಸ್ ಓಪನ್ ಪುರುಷರ ಫೈನಲ್ ನಲ್ಲಿ ಜೊಕೋವಿಕ್ ಸ್ಪರ್ಧಿಸಿದ್ದು ಇದು 8ನೇ ಬಾರಿ. ಇದರಲ್ಲಿ ನೊವಾಕ್ 3 ಬಾರಿ ಚಾಂಪಿಯನ್ ಎನಿಸಿಕೊಂಡಂತಾಗಿದೆ. 2011 ಮತ್ತು 2015ರಲ್ಲೂ ಜೊಕೋವಿಕ್ ಚಾಂಪಿಯನ್ ಆಗಿದ್ದರು. ಒಟ್ಟಿಗೆ 14ನೇ ಗ್ರ್ಯಾಂಡ್ ಸ್ಲ್ಯಾಮ್ ಸಾಧನೆಗೆ ಜೊಕೋವಿಕ್ ಪಾತ್ರರಾಗಿದ್ದಾರೆ.

ಕಳೆದ ಬಾರಿ ಗಾಯಾಳು
31ರ ಜೊಕೋವಿಕ್ ಕಳೆದ ಬಾರಿ ಮೊಣಕೈ ಗಾಯದಿಂದಾಗಿ ಯುಎಸ್ ಓಪನ್ ಪಂದ್ಯದಿಂದ ಜೊಕೋವಿಕ್ ಪ್ರಶಸ್ತಿಯನ್ನು ಕಳೆದುಕೊಂಡಿದ್ದರು. ಈ ಬಾರಿ ಡೆಲ್ ಪೊಟ್ರೊ ಅವರ ಎದುರು ಸಿಕ್ಕ ಗೆಲುವು 15ನೇಯದ್ದು. ಅರ್ಜೆಂಟೀನಾ ಆಟಗಾರ ಜೊಕೋವಿಕ್ ಗೆ 15 ಬಾರಿ ಶರಣಾದಂತಾಗಿದೆ.

ಮತ್ತೆ ಮಿಂಚಿದ ಜೊಕೋವಿಕ್
ಯುಎಸ್ ಓಪನ್ ನ ಈ ಗೆಲುವಿನ ಬಳಿಕ ಜೊಕೋವಿಕ್ ವಿಶ್ವ 50ನೇ ಶ್ರೇಯಾಂಕಿರಲ್ಲಿ ಬಲಾಡ್ಯ ನಾಲ್ವರ ಜೊತೆ ಸೇರಿಕೊಂಡಿದ್ದಾರೆ. ಬಲಿಷ್ಟ ನಾಲ್ವರ ಸಾಲಿನಲ್ಲಿ ಈಗ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೋವಿಕ್ ಮತ್ತು ಡೆಲ್ ಪೊಟ್ರೋ ಇದ್ದಾರೆ.

ರ್ಯಾಂಕಿಂಗ್ ನಲ್ಲಿ ಜಿಗಿತ
ಯುಎಸ್ ಓಪನ್ ಫೈನಲ್ ಗೂ ಮುನ್ನ ಜೊಕೋವಿಕ್ 6ನೇ ಶ್ರೇಯಾಂಕದಲ್ಲಿದ್ದರು. ಫೈನಲ್ ಬಳಿಕ 3ನೇ ರ್ಯಾಂಕ್ ಗೆ ಜಿಗಿದಿದ್ದಾರೆ. ಮೊದಲ ಸ್ಥಾನದಲ್ಲಿ ನಡಾಲ್, ದ್ವಿತೀಯ ಸ್ಥಾನದಲ್ಲಿ ಫೆಡರರ್ ಇದ್ದಾರೆ. ಜೊಕೋವಿಕ್ ಅವರು ಉಳಿದ ಆಟಗಾರರಿಗೆ ಹೋಲಿಸಿದರೆ ಸರಳ ಮತ್ತು ಫನ್ನಿ ಸ್ವಭಾವದವರು. ಜೊಕೋವಿಕ್ ಇಷ್ಟವಾಗೋದು ಇಂಥ ಕೆಲ ವಿಚಾರಗಳಿಗಾಗಿಯೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications