ಯುಎಸ್ ಓಪನ್ ಟೆನ್ನಿಸ್‌ನಲ್ಲಿ ಮಹತ್ವದ ಸಾಧನೆ ಮಾಡಿದ ಸುಮಿತ್ ನಗಾಲ್

ಯುಎಸ್ ಓಪನ್ ಟೆನ್ನಿಸ್‌ನಲ್ಲಿ ಭಾರತದ ಸುಮಿತ್ ನಗಾಲ್ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಕಳೆದ 7 ವರ್ಷಗಳಲ್ಲಿ ಯುಎಸ್ ಓಪನ್‌ನಲ್ಲಿ ಮೊದಲ ಬಾರಿಗೆ ಪ್ರಧಾನ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಜಯಶಾಲಿಯಾದ ಮೊದಲ ಆಟಗಾರ ಎಂಬ ಸಾಧನೆಯನ್ನು ಮಾಡಿದ್ದಾರೆ.
ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್‌ಗೆ ಭಾರಿ ದೊಡ್ಡ ಸವಾಲು ಎದುರಾಗಿದೆ. ಮುಂದಿನ ಸುತ್ತಿನಲ್ಲಿ ನಗಾಲ್ 3ನೇ ಶ್ರೇಯಾಂಕದ ಆಟಗಾರ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಸವಾಲನ್ನು ನಗಾಲ್ ಯಾವ ರೀತಿ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್ ಅಮೆರಿಕಾದ ಬ್ರಾಡ್ಲಿ ಕ್ಲಾನ್‌ರನ್ನು 6-1, 6-3, 3-6, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಫಲಿತಾಂಶದೊಂದಿಗೆ ನಗಾಲ್ ಏಳು ವರ್ಷಗಳ ಬಳಿಕ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯವನ್ನು ಜಯಿಸಿದ ಮೊದಲ ಆಟಗಾರ ಎನಿಸಿಕೊಂಡರು.
ಈ ಹಿಂದೆ ಯುಎಸ್ ಓಪನ್‌ನ ಸಿಂಗಲ್ಸ್‌ನಲ್ಲಿ ಈ ಸಾಧನೆಯನ್ನು 2013ರಲ್ಲಿ ಸೋಮ್‌ದೇವ್ ದೇವ್‌ವರ್ಮನ್ ಮಾಡಿದ್ದರು. ದೇವ್‌ವರ್ಮನ್ ಯುಎಸ್ ಓಪನ್ ಮಾತ್ರವಲ್ಲದೆ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್‌ನಲ್ಲೂ ಎರಡನೇ ಸುತ್ತು ಪ್ರವೇಶಿಸಿದ ಭಾರತದ ಆಟಗಾರನಾಗಿದ್ದಾರೆ.
ಈ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ನಗಾಲ್ ನಾನು ಇಲ್ಲಿ 2013ರ ಜ್ಯೂನಿಯರ್ ಸ್ಲ್ಯಾಮ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದೆ. ಬಳಿಕ ಪುರುಷದ ವಿಭಾಗದಲ್ಲೂ ಅವಕಾಶವನ್ನು ಪಡೆದು ಈಗ ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications