Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿದ ಅಲೆಕ್ಸಾಂಡರ್ ಝ್ವೆರೇವ್

US Open: World No. 2 Alexander Zverev withdraws from US Open because of injury

ಜರ್ಮನಿಯ ಟೆನಿಸ್ ಆಟಗಾರ, ವಿಶ್ವದ ನಂಬರ್ 2 ಶ್ರೇಯಾಂಕಿತ ಅಲೆಕ್ಸಾಂಡರ್ ಝ್ವೆರೇವ್ ಮುಂಬರುವ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಅಲೆಕ್ಸಾಂಡರ್ ಝ್ವೆರೇವ್ ನಿರೀಕ್ಷಿತ ಸಮಯದೊಳಗೆ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

25ರ ಹರೆಯದ ಅಲೆಕ್ಸಾಂಡರ್ ಝ್ವೆರೇವ್ ಕಳೆದ ಜೂನ್‌ ತಿಂಗಳಿನಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಭಾಗಿಯಾಗಿದ್ದರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ತಲುಪಿದ್ದ ಅವರು ರಾಫೆಲ್ ನಡಾಲ್ ವಿರುದ್ಧ ನಡೆದ ನಾಲ್ಕರ ಘಟ್ಟದ ಕದನದಲ್ಲಿ ಗಾಯಗೊಂಡು ಆಡಲು ಅಸಮರ್ಥರಾಗಿದ್ದರು.

2015ರಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ಗೆ ಪದಾರ್ಪಣೆ ಮಾಡಿದ ಬಳಿಕ ಅಲೆಕ್ಸಾಂಡರ್ ಝ್ವೆರೇವ್ ಸತತ 27 ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಆಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಈ ಬಾರಿಯ ವಿಂಬಲ್ಡನ್‌ನಲ್ಲಿ ಆಡುವುದರಿಂದ ತಪ್ಪಿಸಿಕೊಂಡಿದ್ದರು. ಇದೀಗ ಯುಎಸ್ ಓಪ್‌ನಿಂದಲೂ ಹೊರಗುಳಿಯಲಿದ್ದಾರೆ.

ಝ್ವೆರೆವ್ ಯುಎಸ್ ಓಪನ್‌ನಲ್ಲಿ ಭಾಗವಹಿಸದಿರುವ ಕಾರಣ ಅಮೇರಿಕನ್ ಸ್ಟೀಫನ್ ಕೊಜ್ಲೋವ್ ಅವರ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. 24 ವರ್ಷ ವಯಸ್ಸಿನ ಫ್ಲೋರಿಡಾದ ಈ ಆಟಗಾರ ಹಿಂದಿನ ಆರು ಸಂದರ್ಭಗಳಲ್ಲಿ ಅರ್ಹತಾ ಸುತ್ತಿನಿಂದ ಹೊರಬಿದ್ದ ನಂತರ ಯುಎಸ್ ಓಪನ್ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.

ಮತ್ತೊಂದೆಡೆ ನಿರಂತರ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಜರ್ ಫೆಡರರ್ ಕೂಡ ಯುಎಸ್ ಓಪನ್‌ನಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ ಸ್ಟಾರ್‌ಗಳ ಅಲಭ್ಯತೆಯಿಂದ ಈ ಬಾರಿಯ ಯುಎಸ್ ಓಪನ್ ನಿರಾಸೆ ಮೂಡಿಸಿದೆ. 21 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರು ಲಸಿಕೆ ಹಾಕದ ಕಾರಣ ಈ ಟೂರ್ನಿಯಲ್ಲಿ ಭಾಗವಹಿಸುವುದು ಅಸಾಧ್ಯ ಎನ್ನಲಾಗುತ್ತಿದೆ.

Story first published: Monday, August 22, 2022, 23:57 [IST]
Other articles published on Aug 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+