ವೆಸ್ಟರ್ನ್ & ಸದರ್ನ್ ಓಪನ್: ಸೆಮಿಫೈನಲ್‌ನಿಂದ ಹಿಂದೆ ಸರಿದ ಒಸಾಕಾ

ಕೊಲಂಬಸ್: ಯುನೈಟೆಡ್ ಸ್ಟೇಟ್ಸ್‌ನ ಓಹಿಯೋದಲ್ಲಿ ನಡೆಯುತ್ತಿರುವ ವೆಸ್ಟರ್ನ್ & ಸದರ್ನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಿಂದ ನವೋಮಿ ಒಸಾಕಾ ಹಿಂದೆ ಸರಿದಿದ್ದಾರೆ. ಜನಾಂಗೀಯ ಅನ್ಯಾಯದ ವಿರುದ್ಧದ ಪ್ರತಿಭಟನೆಯಾಗಿ ಒಸಾಕಾ ಈ ನಿರ್ಧಾರ ತಾಳಿದ್ದಾರೆ.
ಎರಡು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ನವೋಮಿ ಒಸಾಕಾ ವೆಸ್ಟರ್ನ್ & ಸದರ್ನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು. ಆಗಸ್ಟ್ 26ರ ಬುಧವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಎಸ್ಟೋನಿಯಾ ಆಟಗಾರ್ತಿ ಆನೆಟ್ ಕಾಂಟಾವಿಟ್ ವಿರುದ್ಧ ಒಸಾಕಾ 4-6, 6-2, 7-5ರ ಗೆಲುವು ದಾಖಲಿಸಿದ್ದರು.
ಯುಎಸ್ ಸ್ಟೇಟ್‌ನ ವಿಸ್ಕಾನ್ಸಿನ್‌ನಲ್ಲಿ ಪೊಲೀಸ್ ಒಬ್ಬ ಜಾಕೋಬ್ ಬ್ಲೇಕ್ ಎನ್ನುವ ಕಪ್ಪು ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದ. ಇದರ ವಿರುದ್ಧ ನ್ಯಾಷನಲ್ ಬಾಸ್ಕೆಟ್ ಬಾಲ್ ಅಥ್ಲೀಟ್‌ಗಳು ಪ್ರತಿಭಟನೆ ನಡೆಸಿದ್ದರು. 22ರ ಹರೆಯದ ಜಪಾನ್ ಆಟಗಾರ್ತಿ ಒಸಾಕಾ ಕೂಡ ಟೂರ್ನಿಯಿಂದ ಹಿಂದೆ ಸರಿಯುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಗುರುವಾರ (ಆಗಸ್ಟ್ 27) ನಡೆಯಲಿದ್ದ ಸೆಮಿಫೈನಲ್‌ನಲ್ಲಿ ಒಸಾಕಾ ಅವರು ಬೆಲ್ಜಿಯಂನ ಎಲೈಸ್ ಮೆರ್ಟೆನ್ಸ್ ವಿರುದ್ಧ ಕಾದಾಡಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications