Wimbeldon 2023: ಫ್ರೆಂಚ್ ಓಪನ್ ಫೈನಲ್ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ; ಕ್ಯಾಸ್ಪರ್ ರೂಡ್
ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ ಎಂದು ವಿಶ್ವದ ನಾಲ್ಕನೇ ಶ್ರೇಯಾಂಕಿತ ಕ್ಯಾಸ್ಪರ್ ರೂಡ್ ಹೇಳಿದ್ದಾರೆ.
2023ರ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತ ನಂತರ ಕ್ಯಾಸ್ಪರ್ ರೂಡ್ 2023ರ ರೋಲನ್ ಗ್ಯಾರೋಸ್‌ನಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.

ಯೂರೋ ಸ್ಪೋರ್ಟ್‌ನೊಂದಿಗೆ ಮಾತನಾಡಿದ ಕ್ಯಾಸ್ಪರ್ ರೂಡ್, ತಾನು ಆಟಕ್ಕೆ ಎಲ್ಲವನ್ನೂ ನೀಡಿದ್ದೇನೆ ಮತ್ತು ಫ್ರೆಂಚ್ ಓಪನ್ ಫೈನಲ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ಫ್ರೆಂಚ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಕ್ಯಾಸ್ಪರ್ ರುಡ್ ಅವರು 7-6, 6-3, 7-5 ಸೆಟ್‌ಗಳಿಂದ ಪರಾಭವಗೊಂಡರು. ನೊವಾಕ್ ಜೊಕೊವಿಕ್ ಅವರು ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ನಾರ್ವೇಜಿಯನ್ ಟೆನಿಸ್ ತಾರೆ ಅವರು ಗ್ರ್ಯಾಂಡ್ ಸ್ಲಾಮ್‌ಗಳ ಎರಡನೇ ಸುತ್ತಿನಲ್ಲಿ ಹೊರಗುಳಿಯುವುದಕ್ಕಿಂತ ಫೈನಲ್‌ನಲ್ಲಿ ಸೋಲುವುದು ಉತ್ತಮ ಎಂದು ಹೇಳಿದರು. ಕ್ಯಾಸ್ಪರ್ ರೂಡ್ ಈಗ ಮೂರು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳನ್ನು (2022ರ ಫ್ರೆಂಚ್ ಓಪನ್, 2022ರ ಯುಎಸ್ ಓಪನ್, ಮತ್ತು 2023ರ ಫ್ರೆಂಚ್ ಓಪನ್) ಸೋತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications