Wimbeldon 2023: ಈತ ವಿಂಬಲ್ಡನ್ ಗೆಲ್ಲುವ ಫೇವರಿಟ್ ಆಟಗಾರ ಎಂದ ನಂ.1 ಟೆನ್ನಿಸ್ ತಾರೆ
ಸೋಮವಾರ, ಜುಲೈ 3ರಿಂದ ಇಂಗ್ಲೆಂಡ್‌ನ ಲಂಡನ್‌ನಲ್ಲಿ 2023ರ ವಿಂಬಲ್ಡನ್ ಪಂದ್ಯಾವಳಿ ಆರಂಭವಾಗಲಿದ್ದು, ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಮ್ ಗೆಲ್ಲಲು ವಿಶ್ವದ ಪ್ರಮುಖ ಟೆನ್ನಿಸ್ ಆಟಗಾರರು ಎದುರು ನೋಡುತ್ತಿದ್ದಾರೆ.
ಜೂನ್ 25ರ ಭಾನುವಾರದಂದು ಪ್ರತಿಷ್ಠಿತ ಕ್ವೀನ್ಸ್ ಕ್ಲಬ್ ಎಟಿಪಿ 250 ಟೂರ್ನಿಯಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು ತಮ್ಮ 3ನೇ ಪಂದ್ಯಾವಳಿಯಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದರು.

ಪ್ರತಿಷ್ಠಿತ 2023ರ ವಿಂಬಲ್ಡನ್ ಪೂರ್ವ ಅಭ್ಯಾಸ ಸ್ಪರ್ಧೆಯಲ್ಲಿನ ಪ್ರಶಸ್ತಿಯು ಕಾರ್ಲೋಸ್ ಅಲ್ಕರಾಜ್ ಅವರಿಗೆ ನಂ.1 ಶ್ರೇಯಾಂಕವನ್ನು ಮರಳಿ ಪಡೆಯಲು ನೆರವಾಯಿತು.
ಆದರೆ, ಮಾಜಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರು ಈ ವರ್ಷ ಗ್ರಾಸ್-ಕೋರ್ಟ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎಂದು ಭವಿಷ್ಯ ನುಡಿದರು.
ಇದೇ ವೇಳೆ ನಂ.1 ಶ್ರೇಯಾಂಕಿತ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಉಳಿದ ಆಟಗಾರರಿಗೆ ಎಚ್ಚರಿಕೆ ನೀಡಿದರು. 20 ವರ್ಷದ ಆಟಗಾರ ಅಲ್ಕರಾಜ್ ಕಳೆದ ವರ್ಷ ವಿಂಬಲ್ಡನ್‌ನಲ್ಲಿ 4ನೇ ಸುತ್ತಿನಲ್ಲಿ ನಿರ್ಗಮಿಸಿದರು.
ಬಲಿಷ್ಠ ಆಟಗಾರ ಆರ್ಥರ್ ರಿಂಡರ್ಕ್ನೆಚ್ ನಂತರ, ಗ್ರಿಗರ್ ಡಿಮಿಟ್ರೋವ್ ಮತ್ತು ಸೆಬಾಸ್ಟಿಯನ್ ಕೊರ್ಡಾ ಅವರಂತಹ ಎದುರಾಳಿಗಳನ್ನು ಕಾರ್ಲೋಸ್ ಅಲ್ಕರಾಜ್ ಹಿಂದಿಕ್ಕಿದ್ದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ 6-4, 6-4 ಸೆಟ್‌ಗಳಿಂದ ವಿಶ್ವದ ನಂ.18ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಅವರನ್ನು ಸೋಲಿಸಿ ಗ್ರಾಸ್ ಕೋರ್ಟ್‌ನಲ್ಲಿ ಪ್ರಶಸ್ತಿ ನಿರೀಕ್ಷೆಯನ್ನು ಪೂರ್ಣಗೊಳಿಸಿದರು.
ಕಳೆದ ವರ್ಷ ಯುಎಸ್ ಓಪನ್ ಗೆದ್ದಿದ್ದ ಕಾರ್ಲೋಸ್ ಅಲ್ಕರಾಜ್, ಈ ವರ್ಷದ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಹಂತ ತಲುಪುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ನೊವಾಕ್ ಜೊಕೊವಿಕ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿ ನಂ.1 ಶ್ರೇಯಾಂಕದ ನಂತರ ಲಂಡನ್‌ನಲ್ಲಿ ಸೋಮವಾರದಿದ ಅಭಿಯಾನವನ್ನು ಆರಂಭಿಸಲಿದ್ದಾರೆ.
ವರ್ಷದ ಮೊದಲ ಎರಡು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದಿರುವ ಕಾರ್ಲೋಸ್ ಅಲ್ಕರಾಜ್, ಈ ವರ್ಷ ಹುಲ್ಲಿನ ಮೇಲೆ ಸ್ಪರ್ಧಾತ್ಮಕ ಪಂದ್ಯವನ್ನು ಆಡದೆ ವಿಂಬಲ್ಡನ್ ಪಂದ್ಯಾವಳಿಗೆ ಬರುತ್ತಿದ್ದಾರೆ. ಆದರೆ, ನೊವಾಕ್ ಜೊಕೊವಿಕ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಗೆಲ್ಲುವ ನೆಚ್ಚಿನ ವ್ಯಕ್ತಿಯಾಗುತ್ತಾರೆ ಎಂದು ತಿಳಿಸಿದ್ದಾರೆ.
"ನೋವಾಕ್ ಜೊಕೊವಿಕ್ ವಿಂಬಲ್ಡನ್‌ನಲ್ಲಿ ಇತರ ಟಾಪ್ 20 ಆಟಗಾರರಿಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ ಎಂಬ ಅಂಕಿಅಂಶವನ್ನು ನಾನು ನೋಡಿದ್ದೇನೆ. ಅದರ ಬಗ್ಗೆ ನಾನು ಏನು ಹೇಳಬಲ್ಲೆ? ಅಂದರೆ, ವಿಂಬಲ್ಡನ್ ಗೆಲ್ಲಲು ನೊವಾಕ್ ಜೊಕೊವಿಕ್ ಫೇವರಿಟ್ ಆಗಿದ್ದಾರೆ," ಎಂದು ಕಾರ್ಲೋಸ್ ಅಲ್ಕರಾಜ್ ಹೇಳಿದರು.
"ಆದರೆ ನಾನು ಈ ಮಟ್ಟದಲ್ಲಿ ಆಡಲು ಪ್ರಯತ್ನಿಸುತ್ತೇನೆ, ಅವರನ್ನು ಸೋಲಿಸಲು ಮತ್ತು ವಿಂಬಲ್ಡನ್‌ನ ಫೈನಲ್ ಹಂತ ತಲುಪುವ ಅವಕಾಶಗಳನ್ನು ಪಡೆಯುತ್ತೇನೆ," ಎಂದರು.
ಜುಲೈ 3ರಿಂದ ಪ್ರಾರಂಭವಾಗುವ ವಿಂಬಲ್ಡನ್ ಪಂದ್ಯಾವಳಿಗೂ ಮುನ್ನ ತನ್ನ ಉದ್ದೇಶವನ್ನು ಸೂಚಿಸಿದ ಕಾರ್ಲೋಸ್ ಅಲ್ಕರಾಜ್, ಕಳೆದ ಕೆಲವು ಪಂದ್ಯಗಳಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications