ವಿಂಬಲ್ಡನ್ : 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಫೆಡರರ್
ವಿಂಬಲ್ಡನ್, ಜುಲೈ 11: ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು ಗ್ರ್ಯಾನ್ ಸ್ಲ್ಯಾಮ್ ನ ಲ್ಲಿ 50ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಇದು ರೋಜರ್ ಅವರು 15ನೇ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಕೂಡಾ ಆಗಿದೆ.
ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ರೋಜರ್, ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 6-4, 6-2, 6-4ರಲ್ಲಿ ಗ್ರಿಗೊರ್ ಡಿಮಿಟ್ರೊವ್ ಅವರನ್ನು ಸೋಲಿಸಿದರು.

ಮೂರನೇ ಸೀಡೆಡ್ ಆಟಗಾರ, 35 ವರ್ಷ ವಯಸ್ಸಿನ ರೋಜರ್ ಅವರು ಡಿಮಿಟ್ರೋವ್ ವಿರುದ್ಧ ಸತತ 6ನೇ ಬಾರಿಗೆ ಜಯ ದಾಖಲಿಸಿದ್ದಾರೆ. ದಾಖಲೆಯ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಜರ್ ಅವರು ಕೆನಡಾದ ಮಿಲೋಸ್ ರೋನಿಕ್(6ನೇ ಸೀಡೆಡ್ ಆಟಗಾರ) ವಿರುದ್ಧ ಮುಂದಿನ ಪಂದ್ಯವನ್ನಾಡಲಿದ್ದಾರೆ.
ರೋಜರ್ ಫೆಡರರ್ ಅವರು 35ನೇ ವಯಸ್ಸಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪುವ ಮೂಲಕ ಟೂರ್ನಮೆಂಟ್ ನ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಸಾರ್ವಕಾಲಿಕ ದಾಖಲೆ ಕೆನ್ ರೊಸ್ ವಾಲ್ ಹೆಸರಿನಲ್ಲಿದೆ. 1971ರಲ್ಲಿ ರೊಸ್ ವಾಲ್ ಅವರು ತಮ್ಮ 39ನೇ ವಯಸ್ಸಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ ಸಾಧನೆ ಮಾಡಿದ್ದರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Federer enters Wimbledon quarterfinals
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications