Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ : ಹಾಲಿ ಚಾಂಪಿಯನ್ ಫೆಡರರ್ ಗೆ ಸೋಲಿನ ಆಘಾತ

ಹಾಲಿ ಚಾಂಪಿಯನ್ ಫೆಡರರ್ ಗೆ ಸೋಲಿನ ಆಘಾತ | Oneindia Kannada
Wimbledon 2018: Roger Federer stunned by Kevin Anderson in five-set thriller

ಲಂಡನ್, ಜುಲೈ 11: ವಿಂಬಲ್ಡನ್ 2018 ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದ ಸ್ವಿಟ್ಜರ್ಲೆಂಡ್ ನ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಗೆ ಬುಧವಾರದಂದು ಆಘಾತ ಕಾದಿತ್ತು. ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್ ಆಂಡರ್ಸನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ, ಟೂರ್ನಮೆಂಟಿನಿಂದ ನಿರ್ಗಮಿಸಿದ್ದಾರೆ.

ಎರಡು ಸೆಟ್ ಮುನ್ನಡೆ, ಮ್ಯಾಚ್ ಪಾಯಿಂಟ್ ಹಾಳುಗೆಡವಿಕೊಂಡ ರೋಜರ್ ಫೆಡರರ್ ಕೊನೆಗೆ 2-6, 6-7(5/7). 7-5, 6-4, 13-11ರಲ್ಲಿ ಕೆವಿನ್ ಗೆ ಶರಣಾದರು.

9ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗುವ ಕನಸು ಹೊತ್ತಿದ್ದ ಫೆಡರರ್ ಅವರನ್ನು ನಾಲ್ಕು ಗಂಟೆ 13 ನಿಮಿಷಗಳ ಹೋರಾಟದಲ್ಲಿ ಸೋಲಿಸಿದ ಎಂಟನೇ ಸೀಡೆಡ್ ಆಟಗಾರ ಕೆವಿನ್ ದೈತ್ಯ ಸಂಹಾರಿ ಎನಿಸಿಕೊಂಡರು.

2013ರಲ್ಲಿ ಸೆರ್ಗಿಯ್ ಸ್ಟಾಖೋವಸ್ಕಿ ವಿರುದ್ಧ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದ ರೋಜರ್, ಆನಂತರ ಕಳಪೆ ಪ್ರದರ್ಶನ ತೋರಿರಲಿಲ್ಲ.

ಕಳೆದ ವರ್ಷ ಯುಎಸ್ ಓಪನ್ ನಲ್ಲಿ ನಡಾಲ್ ವಿರುದ್ಧ ಸೋಲಿನ ಮೂಲಕ ಗ್ರ್ಯಾನ್ ಸ್ಲಾಮ್ ಅಖಾಡಕ್ಕೆ ಇಳಿದ 32 ವರ್ಷ ವಯಸ್ಸಿನ ಕೆವಿನ್ ಅವರು ಮಿಲೋಸ್ ರೋನಿಕ್ ಅಥವಾ ಜಾನ್ ಇಸ್ನಾರ್ ಅವರನ್ನು ಶುಕ್ರವಾರದಂದು ನಡೆಯಲಿರುವ ಸೆಮಿಫೈನಲ್ ನಲ್ಲಿ ಎದುರಿಸಲಿದ್ದಾರೆ.

Story first published: Wednesday, July 11, 2018, 23:38 [IST]
Other articles published on Jul 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+