Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ 2019: ರೋಚಕ ಕಾಳಗದಲ್ಲಿ ನಡಾಲ್ ಕೆಡವಿದ ರೋಜರ್ ಫೆಡರರ್

Wimbledon 2019: Roger Federer beats Rafael Nadal to reach 12th Wimbledon final

ಲಂಡನ್‌, ಜುಲೈ 13: ಸ್ವಿಸ್ ಟೆನಿಸ್ ದೈತ್ಯ ರೋಜರ್ ಫೆಡರರ್ ಶುಕ್ರವಾರ (ಜುಲೈ 12) 12ನೇ ಬಾರಿಗೆ ವಿಂಬಲ್ಡನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸುಮಾರು 11 ವರ್ಷಗಳಿಗೆ ಹಿಂದೆ, ಅಂದರೆ 2008ರ ವಿಂಬಲ್ಡನ್ ಫೈನಲ್‌ಲ್ಲಿ ಸೋಲಿಸಿದ್ದ ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್ ಅವರನ್ನು ಈ ಬಾರಿ ಫೆಡರರ್ ಸೆಮಿಫೈನಲ್‌ನಲ್ಲೇ ಹೊರಗಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ಸೆಮಿಫೈನಲ್ ಸ್ಪರ್ಧೆಯಲ್ಲಿ 37ರ ಹರೆಯದ ಫೆಡರರ್, ನಡಾಲ್ ಎದುರು 7-6 (7/3), 1-6, 6-3, 6-4ರ ರೋಚಕ ಹಣಾಹಣಿಯೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಇದು ನಾಡಾಲ್ ಮತ್ತು ಫೆಡರರ್ ಜೋಡಿಯ ವೃತ್ತಿ ಜೀವನದ 40ನೇ ಮುಖಾಮುಖಿಯಾಗಿತ್ತು.

ಈ ಗೆಲುವಿನೊಂದಿಗೆ ರೋಜರ್ ತನ್ನ ವೃತ್ತಿ ಜೀವನದ 31ನೇ ಗ್ರ್ಯಾಂಡ್‌ಸ್ಲ್ಯಾಮ್ ಫೈನಲ್‌ಗೆ ಪ್ರವೇಶಿಸಿದಂತಾಗಿದೆ. ಪ್ರಶಸ್ತಿ ಸುತ್ತಿನಲ್ಲಿ ಫೆಡರರ್, ಸರ್ಬಿಯನ್ ದೈತ್ಯ ನೊವಾಕ್ ಜೊಕೋವಿಕ್ ಅವರನ್ನು ಎದುರಿಸಲಿದ್ದಾರೆ. ಜೊಕೋವಿಕ್, ಸೆಮಿಫೈನಲ್‌ನಲ್ಲಿ ಸ್ಪೇನ್‌ ಆಟಗಾರ ರಾಬರ್ಟೊ ಬೌಟಿಸ್ಟಾ ಅಗುಟ್ ಅವರನ್ನು 6-2, 4-6, 6-3, 6-2ರ ಅಂತರದಿಂದ ಮಣಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

ಶುಕ್ರವಾರ ವಿಂಬಲ್ಡನ್ ಸೆಮಿಫೈನಲ್ ಗೆಲುವಿನೊಂದಿಗೆ ಫೆಡರರ್, ಗ್ರ್ಯಾಂಡ್‌ಸ್ಲ್ಯಾಮ್ ಫೈನಲ್ ಪ್ರವೇಶಿಸಿದ ಎರಡನೇ ಅತೀ ಹಿರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 39ರ ಹರೆಯದವರಾಗಿದ್ದ ಆಸ್ಟ್ರೇಲಿಯಾದ ಕೆನ್ ರೋಸ್‌ವಾಲ್ 1974ರ ವಿಂಬಲ್ಡನ್ ಮತ್ತು ಯುಎಸ್ ಓಪನ್‌ ಫೈನಲ್‌ನಲ್ಲಿ ಸ್ಪರ್ಧಿಸಿದ್ದರು.

Story first published: Saturday, July 13, 2019, 14:43 [IST]
Other articles published on Jul 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+