ವಿಂಬಲ್ಡನ್ 2022 ಫೈನಲ್: ಏಳನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಜೊಕೊವಿಕ್

ವಿಶ್ವದ ಅಗ್ರ ಶ್ರೇಯಾಂಕದ ಟೆನಿಸ್ ಕ್ರೀಡಾಪಟು ನೊವಾಕ್ ಜೊಕೊವಿಕ್ ಸತತ ನಾಲ್ಕನೇ ಬಾರಿಗೆ ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜೊಕೊವಿಕ್ ಭಾನುವಾರ ( ಜುಲೈ 10 ) ನಡೆದ ಈ ಬಾರಿಯ ವಿಂಬಲ್ಡನ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಕ್ ಕಿರ್ಗಿಯೋಸ್ ಅವರ ವಿರುದ್ಧ ಸೆಣಸಾಟವನ್ನು ನಡೆಸಿದರು.
ಮೊದಲ ಸೆಟ್‌ನಲ್ಲಿ ಹಿನ್ನೆಡೆ ಅನುಭವಿಸುವುದರ ಮೂಲಕ ಸೆಣಸಾಟವನ್ನು ಆರಂಭಿಸಿದ ನೊವಾಕ್ ಜೊಕೊವಿಕ್ ನಂತರದ ಎಲ್ಲಾ ಸೆಟ್‌ನಲ್ಲೂ ನಿಕ್ ಕಿರ್ಗಿಯೋಸ್ ಮೇಲೆ ಪ್ರಭಾವ ಹಿಡಿತವನ್ನು ಸಾಧಿಸಿದರು. ಜೊಕೊವಿಕ್ 4-6, 6-3, 6-4, 7-6 ( 3 ) ಸೆಟ್‌ಗಳ ಅಂತರದಿಂದ ಗೆದ್ದು ತಮ್ಮ ಏಳನೇ ವಿಂಬಲ್ಡನ್ ಪ್ರಶಸ್ತಿ ಹಾಗೂ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.
2011, 2014 ಮತ್ತು 2015ನೇ ಸಾಲಿನ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ನೊವಾಕ್ ಜೊಕೊವಿಕ್ ನಂತರ ನಡೆದಿರುವ ಸತತ 4 ವಿಂಬಲ್ಡನ್ ಟೂರ್ನಿಗಳಲ್ಲಿ ಟ್ರೋಫಿಯನ್ನು ಗೆದ್ದಿದ್ದಾರೆ. 2018, 2019, 2021 ಮತ್ತು ಈ ಬಾರಿಯ ವಿಂಬಲ್ಡನ್ ಟ್ರೋಫಿಗಳನ್ನು ಗೆದ್ದಿರುವ ನೊವಾಕ್ ಜೊಕೊವಿಕ್ ಸತತ 4ನೇ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡರು. ( ಕೊರೋನಾವೈರಸ್ ಕಾರಣದಿಂದಾಗಿ 2020ರಲ್ಲಿ ವಿಂಬಲ್ಡನ್ ಪಂದ್ಯಾವಳಿ ನಡೆದಿರಲಿಲ್ಲ )
ಇನ್ನು ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಸೆಮಿಫೈನಲ್ ಪಂದ್ಯದಲ್ಲಿ ಕಿಂಗ್ ಆಫ್ ಕ್ಲೇ ಎಂದೇ ಕರೆಯಲ್ಪಡುವ ರಾಫೆಲ್ ನಡಾಲ್ ವಿರುದ್ಧ ಸೆಣಸಾಟ ನಡೆಸಬೇಕಿತ್ತು. ಆದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಫೆಲ್ ನಡಾಲ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ನಿಕ್ ಕಿರ್ಗಿಯೋಸ್ ನೇರವಾಗಿ ಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications