For Quick Alerts
ALLOW NOTIFICATIONS  
For Daily Alerts

Wimbledon 2023: 2ನೇ ಸುತ್ತಿನಲ್ಲಿ ಲಿಯಾಮ್ ಬ್ರಾಡಿ ವಿರುದ್ಧ ಸೋತ 4ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್

ಗುರುವಾರ, ಜುಲೈ 6ರಂದು ನಡೆದ 2023ರ ವಿಂಬಲ್ಡನ್‌ನ ಎರಡನೇ ಸುತ್ತಿನಲ್ಲಿ ವಿಶ್ವದ 4ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಅವರು ಬ್ರಿಟಿಷ್ ವೈಲ್ಡ್‌ಕಾರ್ಡ್ ಎಂಟ್ರಿ ಲಿಯಾಮ್ ಬ್ರಾಡಿ ವಿರುದ್ಧ ಸೋತು ಹೊರಬಿದ್ದರು.

ಫ್ರೆಂಚ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರುಡ್ ವಿರುದ್ಧ ಎರಡು ಸೆಟ್‌ಗಳ ಹಿನ್ನಡೆಯಲ್ಲಿದ್ದಾಗ ಲಿಯಾಮ್ ಬ್ರಾಡಿ ಅವರು ಮತ್ತೊಮ್ಮೆ ಮುನ್ನಡೆ ಸಾಧಿಸಿ, ಸೆಂಟರ್ ಕೋರ್ಟ್ ಪಂದ್ಯವನ್ನು 6-4, 3-6, 4-6, 6-3, 6-0 ಸೆಟ್‌ಗಳಿಂದ ಗೆದ್ದು ಬೀಗಿದರು.

ಕಳೆದ ಎರಡು ವರ್ಷಗಳಲ್ಲಿ ಫ್ರೆಂಚ್ ಓಪನ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ರನ್ನರ್ ಅಪ್ ಆಗಿದ್ದ ನಾರ್ವೆಯ ಕ್ಯಾಸ್ಪರ್ ರುಡ್, ಕಳೆದ ವರ್ಷ ಯುಎಸ್ ಓಪನ್‌ನಲ್ಲಿಯೂ ಸೋತ ಫೈನಲಿಸ್ಟ್ ಆಗಿದ್ದರು.

Wimbledon 2023

24 ವರ್ಷ ವಯಸ್ಸಿನ ಫ್ರೆಂಚ್ ಓಪನ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಎರಡನೇ ಸುತ್ತನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ. ಲಿಯಾಮ್ ಬ್ರಾಡಿ ಅವರು ವಿಶ್ವ ಶ್ರೇಯಾಂಕದಲ್ಲಿ 142 ಸ್ಥಾನದಲ್ಲಿದ್ದಾರೆ. ನಾಲ್ಕನೇ ಸೆಟ್‌ನ ಕೊನೆಯಲ್ಲಿ ತನ್ನ ಮಣಿಕಟ್ಟಿನ ಬ್ಯಾಂಡೇಜ್ ಬದಲಾಯಿಸಲು ವೈದ್ಯಕೀಯ ಸಮಯವನ್ನು ತೆಗೆದುಕೊಂಡರು.

29 ವರ್ಷದ ಲಿಯಾಮ್ ಬ್ರಾಡಿ ಫಿಟ್ ಆಗಿ ಮೈದಾನಕ್ಕಿಳಿದರು ಮತ್ತು ಕ್ಯಾಸ್ಪರ್ ರುಡ್ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ತವರಿನ ಪ್ರೇಕ್ಷಕರಿಂದ ಚಪ್ಪಾಳೆಗಳನ್ನು ಗಿಟ್ಟಿಸುವ ಮೊದಲು ಕ್ಯಾಸ್ಪರ್ ರುಡ್ ಅವರನ್ನು 6-0 ರಲ್ಲಿ ಸೋಲಿಸಿದರು.

"ನಾನು ಕ್ಯಾಸ್ಪರ್ ರುಡ್ ಅವರನ್ಉ ಮನೆಗೆ ಹಿಂದಿರುಗಿಸಲು ಇಷ್ಟಪಡುತ್ತಿದ್ದೆ. ಆದರೆ ಸೆಂಟರ್ ಕೋರ್ಟ್‌ನಲ್ಲಿ ವಿಂಬಲ್ಡನ್ ಗೆಲ್ಲುತ್ತೇನೆ," ಎಂದು ಲಿಯಾಮ್ ಬ್ರಾಡಿ ಹೇಳಿದರು.

"ನಾನು ನಿನ್ನೆ ರಾತ್ರಿ ಮಲಗುವ ಮುನ್ನ, ಪಂದ್ಯವನ್ನು ಗೆದ್ದರೆ ನಾನು ಏನು ಹೇಳಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಈಗ ನಾನು ಇಲ್ಲಿದ್ದೇನೆ, ಏನು ಹೇಳಬೇಕೆಂದು ನನಗೆ ತಿಳಿದಿಲ್ಲ," ಎಂದರು.

"ನಾನು ಇಂದು ಬೆಳಿಗ್ಗೆ ನನ್ನ ಅಮ್ಮನಿಗೆ ಹೇಳಿದೆ, ಅವಳು ಆಟವನ್ನು ನೋಡುವುದನ್ನು ಇಷ್ಟಪಡುವುದಿಲ್ಲ. ಆದರೆ ನಾನು ಈಗಾಗಲೇ ಈ ವಾರ 102,000 ಡಾಲರ್ ಗೆದ್ದಿದ್ದೇನೆ. ಆದ್ದರಿಂದ ಈಗ ಅವಳು ಸ್ವಲ್ಪ ತಣ್ಣಗಾಗಬಹುದು," ಎಂದು ಲಿಯಾಮ್ ಬ್ರಾಡಿ ತಿಳಿಸಿದರು.

ಬ್ರಿಟಿಷ್ ಆಟಗಾರ ಲಿಯಾಮ್ ಬ್ರಾಡಿ ಅವರು ಮೂರನೇ ಸುತ್ತಿನಲ್ಲಿ ಕೆನಡಾದ 26ನೇ ಶ್ರೇಯಾಂಕದ ಡೆನಿಸ್ ಶಪೊವಾಲೊವ್ ಅವರನ್ನು ಎದುರಿಸಲಿದ್ದಾರೆ.

"ಡೆನಿಸ್ ಶಪೊವಾಲೊವ್ ಅತ್ಯುತ್ತಮ ಪ್ರತಿಭೆ, ಅವರು ಕ್ಯಾಸ್ಪರ್‌ ರುಡ್‌ನಂತೆ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಡೆನಿಸ್ ಜೂನಿಯರ್ ವಿಂಬಲ್ಡನ್ ಗೆದ್ದಿದ್ದಾರೆ. ಅವರು ಅದ್ಭುತ ಆಟಗಾರ. ಈ ರೀತಿಯ ಪ್ರೇಕ್ಷಕರ ಮಧ್ಯೆ ಆಡುವುದು ಅತ್ಯುತ್ತಮವಾಗಿದೆ," ಎಂದು ಅವರು ಹೇಳಿದರು.

ಇದೇ ವೇಳೆ ರಷ್ಯಾದ 16 ವರ್ಷದ ಮಿರ್ರಾ ಆಂಡ್ರೀವಾ ಗುರುವಾರ ವಿಂಬಲ್ಡನ್‌ನಲ್ಲಿ ಸತತ ಎರಡನೇ ಬಾರಿಗೆ ಗ್ರ್ಯಾನ್‌ಸ್ಲಾಮ್‌ನ ಮೂರನೇ ಸುತ್ತನ್ನು ತಲುಪಿದರು. ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಮಿರ್ರಾ ಆಂಡ್ರೀವಾ ಗಾಯಗೊಂಡು ನಿವೃತ್ತಿಯಾದಾಗ 6-3, 4-0 ಸೆಟ್‌ಗಳಿಂದ ಜೆಕ್ ಗಣರಾಜ್ಯದ 10ನೇ ಶ್ರೇಯಾಂಕದ ಬಾರ್ಬೊರಾ ಕ್ರೆಜ್ಸಿಕೋವಾ ಅವರನ್ನು ಸೋಲಿಸಿದರು.

Story first published: Thursday, July 6, 2023, 23:10 [IST]
Other articles published on Jul 6, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+