Wimbledon 2023: ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸಿದ ಜೊಕೊವಿಕ್, ಸ್ವೆಟೆಕ್
ವಿಂಬಲ್ಡನ್ 2023ರ ಎರಡನೇ ಸುತ್ತಿನಲ್ಲಿ ಇಗಾ ಸ್ವೆಟೆಕ್ ಮತ್ತು ನೊವಾಕ್ ಜೊಕೊವಿಕ್ ಭರ್ಜರಿ ಗೆಲುವು ಸಾಧಿಸಿ ಮುನ್ನುಗ್ಗಿದ್ದಾರೆ. ಸ್ವೆಟೆಕ್ ಅವರು ಸ್ಪೇನ್‌ನ ಸಾರಾ ಸೊರಿಬ್ಸ್ ಟೊರ್ಮೊ ಅವರನ್ನು ಎದುರಿಸಿದ್ದು ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ 6-2, 6-0 ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗ್ರಾಸ್‌ಕೋರ್ಟ್‌ನಲ್ಲಿ ಭರ್ಜರಿಯಾಗಿ ಮುನ್ನಡೆ ಸಾಧಿಸಿದ್ದಾರೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರಿಗೆ ಆಸ್ಟ್ರೇಲಿಯಾದ ಜೋರ್ಡಾನ್ ಥಾಂಪ್ಸನ್ ಎದುರಾಳಿಯಾಗಿದ್ದು ಈ ಪಂದ್ಯದಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಯಿತು. ಆದರೆ ಜೊಕೊವಿಕ್ ಈ ಪಂದ್ಯದಲ್ಲಿ 6-3, 7-6 (7-4), 7-5 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಮೇಜರ್ ಟೆನಿಸ್ ಮುಖಾಮುಖಿಯಲ್ಲಿ 350 ಗೆಲುವುಗಳೊಂದಿಗೆ ಜೊಕೊವಿಕ್ ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಅವರನ್ನು ಒಳಗೊಂಡ ವಿಶೇಷ ಸಾಧಕರ ಪಟ್ಟಿಗೆ ಸೇರಿಕೊಂಡಿದ್ದಾರೆ.

ಮತ್ತೋರ್ವ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಅವರು ಮೊದಲನೇ ಸುತ್ತಿನ ಸೆಣೆಸಾಟ ನಡೆಸಿದ್ದು ಈ ಪಂದ್ಯ ಟೈ-ಬ್ರೇಕ್‌ಗೆ ಹೋದ ನಂತರ ಡೊಮಿನಿಕ್ ಥೀಮ್ ವಿರುದ್ಧ ಸೋಲಿನ ಆತಂಕಕ್ಕೆ ಒಳಗಾದರು. ಆದರೆ ಕೊನೆಯಲ್ಲಿ ಸಿಟ್ಸಿಪಾಸ್ ಐದನೇ ಸೆಟ್ ಟೈ-ಬ್ರೇಕ್ನಲ್ಲಿ ಮೇಲುಗೈ ಸಾಧಿಸಯವಲ್ಲಿ ಯಶಸ್ವಿಯಾಗಿದ್ದು 3-6, 7-6 (7-1), 6-2, 6-7 (5-7), 7-6 ( 10-8) ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮತ್ತೊಂದೆಡೆ ಕಳೆದ ಆರು ತಿಂಗಳಿನಿಮದ ವಿಶೇಷವಾಗಿ ಗಮನಸೆಳೆಯುತ್ತಿರುವ 16 ವರ್ಷದ ಮಿರ್ರಾ ಆಂಡ್ರೀವಾ ವಿಂಬಲ್ಡನ್‌ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಚೀನಾದ ವಾಂಗ್ ಕ್ಸಿಯು ಅವರನ್ನು 6-4, 3-6, 7-5 ಸೆಟ್‌ಗಳಿಂದ ಸೋಲಿಸಿ ಗಮನಸೆಳೆದಿದ್ದಾರೆ. ಇನ್ನು ಸ್ಪೇನ್‌ನ ಪೌಲಾ ಬಡೋಸಾ ಅವರು ಅಮೆರಿಕದ ಅಲಿಸನ್ ರಿಸ್ಕೆ-ಅಮೃತರಾಜ್ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲೇ ಪರಾಭವಗೊಂಡು ಮುಖಭಂಗ ಅನುಭವಿಸಿದ್ದ ಡೇನಿಯಲ್ ಮೆಡ್ವೆಡೆವ್ ಯುಕೆಯ ಆರ್ಥರ್ ಫೆರ್ರಿ ಅವರನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ. 7-5, 6-4, 6-3 ನೇರ ಸೆಟ್‌ಗಳ ಅಂತರದಿಂದ ಗೆದ್ದು ಮೆರೆದಿದ್ದಾರೆ. ಇತ್ತ ಇಟಲಿಯ ಜಾನಿಕ್ ಸಿನ್ನರ್ ಅವರು ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್ಜ್‌ಮನ್ ಅವರನ್ನು 7-5, 6-1, 6-2 ಸೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಕಾಲಿಟ್ಟಿದ್ದಾರೆ.
ವಿಂಬಲ್ಡನ್‌ನ ಮೂರನೇ ದಿನದ ದೊಡ್ಡ ಅಚ್ಚರಿಯೆಂದರೆ ಮಾರಿಯಾ ಸಕ್ಕರಿ ಅವರ ನಿರ್ಗಮನ. ಎರಡು ತಿಂಗಳ ಹಿಂದೆ ಕರೋಲಿನಾ ಮುಚೋವಾ ವಿರುದ್ಧ ಸೋತು ಸಕ್ಕರಿ ಫ್ರೆಂಚ್ ಓಪನ್ ಎರಡನೇ ಸುತ್ತಿಗೆ ಮುನ್ನಡೆಯಲು ವಿಫಲವಾಗಿದ್ದ ಸಕ್ಕರಿ ವಿಂಬಲ್ಡನ್‌ನಲ್ಲಿಯೂ ಕಳಪೆ ಆಟ ಪ್ರದರ್ಶಿಸಿದ್ದಾರೆ. ಈ ಬಾರಿ ಯುಕ್ರೇನ್‌ನ ಮಾರ್ಟಾ ಕೊಸ್ಟ್ಯುಕ್ ವಿರುದ್ಧ 6-0, 5-7, 2-6 ಸೆಟ್‌ಗಳ ಅಂತರದಿಂದ ಭಾರೀ ಸೋಲು ಅನುಭವಿಸಿ ಹೋರಾಟ ಅಂತ್ಯಗೊಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications