Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wimbledon 2023: 3ನೇ ಸುತ್ತಿಗೆ ಕಾಲಿಟ್ಟ ಹೋಲ್ಗರ್ ರೂನ್, ಡೆನಿಲ್ ಮಡ್ವೆಡೇವ್

ವಿಂಬಲ್ಡನ್ ಅಂಗಳದಲ್ಲಿ ಐದನೇ ದಿನ ಹಲವು ರೋಚಕ ಸೆಣೆಸಾಟಗಳು ನಡೆದಿದೆ. ಡೆನ್ಮಾರ್ಕ್ ಸ್ಟಾರ್ ಹೋಲ್ಗರ್ ರೂನ್ ಅವರು ಸ್ಪೇನ್‌ನ ರಾಬರ್ಟೊ ಕಾರ್ಲೋಸ್ ಬೇನಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್ 2023ರ ಮೂರನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಪಂದ್ಯದ ಮೊದಲ ಮತ್ತು ಎರಡನೇ ಸೆಟ್‌ನಲ್ಲಿ ಬೇನಾ ಮೇಲೆ ಪ್ರಾಬಲ್ಯ ಸಾಧಿಸಿದ ರೂನ್ ವಿರುದ್ಧ ಬೇನಾ ಮಧ್ಯದಲ್ಲಿ ಪ್ರತಿರೋಧ ಎದುರಿಸಿದರು.

30ರ ಹರೆಯದ ಬೇನಾ ಪಂದ್ಯದ ಎರಡನೇ ಸೆಟ್‌ನಲ್ಲಿ ಪೈಪೋಟಿಯ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿದ ಕಾರಣ ರೂನ್ ಅವರನ್ನು ಟೈಬ್ರೇಕರ್‌ನಲ್ಲಿ ಆಡುವಂತೆ ಮಾಡಿದರು. ಆದರೆ ಇಲ್ಲಿ ಬೇನಾಸೋಲು ಕಂಡಿದ್ದಾರೆ. ವಿಂಬಲ್ಡನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತನ್ನು ತಲುಪಿದ ನಾಲ್ಕನೇ ಡನ್ಮಾರ್ಕ್ ಆಟಗಾರ ಮತ್ತು ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡಿದ್ದಾರೆ.

Wimbledon 2023: Holger Rune and Daniil Medvedev enter 3rd Round after perfect victory

ಇನ್ನು ಮತ್ತೊಂದೆಡೆ ಎರಡನೇ ಕೋರ್ಟ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರು ಫ್ರೆಂಚ್ ಆಟಗಾರ ಆಡ್ರಿಯನ್ ಮನ್ನಾರಿನೊ ವಿರುದ್ಧ ತಮ್ಮ ಪಂದ್ಯವನ್ನು ಪುನರಾರಂಭಿಸಿದರು. ಗುರುವಾರ ಮಂದಬೆಳಕಿನ ಕಾರಣ ಪಂದ್ಯ ನಡೆಯಲು ಸಾಧ್ಯವಾಗಿರಲಿಲ್ಲ, ಈ ಪಂದ್ಯವನ್ನು ಮುಂದುವರಿಸಲಾಗಿದೆ. ನಿನ್ನೆ ಈ ಪಂದ್ಯವನ್ನು ಸ್ಥಗಿತಗೊಳಿಸಿದಾಗ ಮೆಡ್ವೆಡೆವ್ 6-3, 6-3, 4-4 ಅಂತರದಿಂದ ಮುನ್ನಡೆಯಲ್ಲಿದ್ದರು. ಪಂದ್ಯದ ಮೂರನೇ ಮತ್ತು ಅಂತಿಮ ಸೆಟ್‌ನಲ್ಲಿ ಟೈ ಬ್ರೇಕರ್‌ಗೆ ವಿಸ್ತರಿಸಲಾಯಿತು. ಗುರುವಾರ ಸಂಜೆ ಮೂರನೇ ಶ್ರೇಯಾಂಕದ ಮೆಡ್ವೆಡೆವ್ ಗೆಲುವಿನ ಸನಿಹದಲ್ಲಿದ್ದರು. ಕೊನೆಯ ಹಂತದಲ್ಲಿ ಮನ್ನಾರಿನೊ ಭರ್ಜರಿ ಹೋರಾಟ ನಡೆಸಿದ ಕಾರಣ ಮೂರನೇ ಸೆಟ್ 4-4 ರಲ್ಲಿ ಸಮಬಲಗೊಂಡಾಗ ಇಂದಿಗೆ ಮುಂದೂಡಲಾಯಿತು.

ಮಿರ್ರಾ ಆಂಡ್ರೀವಾ ಅವರು ಗುರುವಾರ ಕ್ರೆಜ್‌ಸಿಕೋವಾ ಅವರನ್ನು ಸೋಲಿಸಿದ ನಂತರ ಓಪನ್ ಎರಾದಲ್ಲಿ ವಿಂಬಲ್ಡನ್‌ನ ಅರ್ಹತಾ ಸುತ್ತಿನ ಮೂರನೇ ಸ್ಥಾನವನ್ನು ತಲುಪಿದ ಮೂರನೇ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಿಮ್ ಕ್ಲಿಸ್ಟರ್ಸ್ ಮತ್ತು ಕೊಕೊ ಗೌಫ್ ಅವರು ಕ್ರೆಜ್‌ಸಿಕೋವಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಕಾರಣ ಆಂಡ್ರೀವಾ ಮೇಲುಗೈ ಸಾಧಿಸಿದರು.

ವಿಂಬಲ್ಡನ್‌ನಲ್ಲಿ ಇಂದು ಅಮೆರಿಕದ ತಾರೆಯರಿಗೆ ಮಿಶ್ರ ದಿನವಾಗಿತ್ತು. ಟೇಲರ್ ಫ್ರಿಟ್ಜ್ ಅವರನ್ನು ಸ್ವೀಡನ್‌ನ ಮೈಕೆಲ್ ಯೆಮರ್ ಮಣಿಸಿದರೆ 10 ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ 23 ಏಸ್‌ಗಳನ್ನು ಬಾರಿಸಿ 7-6 (11) 6-4 6-2 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಸ್ವಿಸ್ ಆಟಗಾರ ಡೊಮಿನಿಕ್ ಸ್ಟ್ರೈಕರ್ ವಿರುದ್ಧ ಎರಡನೇ ಸುತ್ತಿನಲ್ಲಿ ಈ ಅಮೋಘ ಗೆಲುವು ಸಾಧಿಸಿದ್ದಾರೆ. 10ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ ಸತತ ಮೂರನೇ ಬಾರಿಗೆ ಗ್ರಾಸ್‌ಕೋರ್ಟ್ ಪಂದ್ಯಾವಳಿಯ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಸ್ಥಿರ ಮತ್ತು ನಿಖರತೆಯಿಂದ ಸರ್ವ್ ಮಾಡಿದ ಅವರು ತಮ್ಮ ಮೊದಲ ಸರ್ವ್ 89% ಅಂಕಗಳನ್ನು ಗೆದ್ದುಕೊಂಡಿದ್ದಾರೆ.

ಮತ್ತೊಂದೆಡೆ ರಷ್ಯಾದ ತಾರೆ ಆಂಡ್ರೆ ರುಬ್ಲೆವ್ ತನ್ನ ಆರಂಭಿಕ ಸೆಟ್ ಕಳೆದುಕೊಂಡಿದ್ದರೂ ನಂತರ ಅಸ್ಲಾನ್ ಕರಾಟ್ಸೆವ್ ಅವರನ್ನು 6-7(4) 6-3 6-4 7-5 ಅಂತರದಿಂದ ಮಣಿಸಿದ್ದಾರೆ. ಇದು ರುಬ್ಲೆವ್ ಅವರ 50ನೇ ಗ್ರ್ಯಾಂಡ್ ಸ್ಲಾಮ್ ಗೆಲುವು ಎಂಬುದು ವಿಶೇಷ. ಈ ಮೂಲಕ ಮೂರನೇ ಸುತ್ತಗೆ ಪ್ರವೇಶ ಪಡೆದುಕೊಂಡಿದ್ದಾರೆ.

Story first published: Friday, July 7, 2023, 22:47 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+