Wimbledon 2023: ಸೆಮಿಫೈನಲ್‌ಗೆ ಪ್ರವೇಶಿಸಿದ ಇಟೆಲಿಯ ಜಾನಿಕ್ ಸಿನ್ನರ್
ವಿಂಬಲ್ಡನ್ 2023 ಕುತೂಹಲಕಾರಿ ಘಟ್ಟವನ್ನು ತಲುಪುತ್ತಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಜನ್ನಿಕ್ ಸಿನ್ನರ್ ವಿಂಬಲ್ಡನ್ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ರಷ್ಯಾದ ಪ್ರಬಲ ರೋಮನ್ ಸಫಿಯುಲಿನ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಷ್ಯಾದ ಆಟಗಾರನನ್ನು 6-4, 3-6, 6-2, 6-2 ಸೆಟ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್‌ನ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
21 ವರ್ಷ ವಯಸ್ಸಿನ ಸಿನ್ನರ್ ಈ ವರ್ಷ ಗ್ರಾಸ್‌ಕೋರ್ಟ್‌ನ ಈ ಪ್ರಮುಖ ಪಂದ್ಯಾವಳಿಯಲ್ಲಿ ಸುಲಭ ಡ್ರಾವನ್ನು ಗಳಿಸಿಕೊಂಡಿದ್ದರು. 1995ರಲ್ಲಿ ಬೋರಿಸ್ ಬೆಕರ್ ಮತ್ತು ಪೀಟ್ ಸಾಂಪ್ರಾಸ್ ನಂತರ ಅಗ್ರ 50 ರ ಶ್ರೇಯಾಂಕದ ಯಾವುದೇ ಎದುರಾಳಿಗಳನ್ನು ಎದುರಿಸದೆ ಸಿನ್ನರ್ ಅಂತಿಮ ನಾಲ್ಕರ ಘಟ್ಟದವರೆಗೆ ತಲುಪಿದ ಮೊದಲ ಪುರುಷ ಆಟಗಾರ ಎನಿಸಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಸಿನ್ನರ್ ವಿಂಬಲ್ಡನ್ ಸೆಮಿ-ಫೈನಲ್ ತಲುಪಲು ನಿಕೋಲಾ ಪಿಯೆಟ್ರಾಂಗೆಲಿ ಮತ್ತು ಮ್ಯಾಟಿಯೊ ಬೆರೆಟ್ಟಿನಿಯ ನಂತರ ಮೂರನೇ ಇಟಾಲಿಯನ್ ಆಟಗಾರ ಎನಿಸಕೊಂಡಿದ್ದಾರೆ. ಆದರೆ ಅವರು ಪಂದ್ಯದ ಮಧ್ಯದಲ್ಲಿ ಸಫಿಯುಲಿನ್ ವಿರುದ್ಧ ಕಠಿಣ ಸವಾಲನ್ನು ಎದುರಸಿಬೇಕಾಯಿತು. ಕೊನೆಯ ಗೆಲುವಿನ ನಗೆ ಬೀರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಮತ್ತೊಂದೆಡೆ ಡಬಲ್ಸ್‌ನಲ್ಲಿ ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಆರನೇ ಸೀಡ್‌ನ ಭಾರತ ಹಾಗೂ ಆಸ್ಟ್ರೇಲಿಯಾದ ಈ ಜೋಡಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ರೀಸ್ ಸ್ಟಾಲ್ಡರ್ ಮತ್ತು ನೆದರ್‌ಲ್ಯಾಂಡ್‌ನ ಡೇವಿಡ್ ಪೆಲ್ ಜೋಡಿಯ ವಿರುದ್ಧದ ರೋಮಾಂಚನಕಾರಿ ಪಂದ್ಯದಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಕಠಿಣ ಹೋರಾಟ ನಡೆಸಿ ಗೆಲುವು ದಕ್ಕಿಸಿಕೊಂಡಿದ್ದಾರೆ. ರೋಚಕವಾಗಿ ನಡೆದ ಕಾದಾಟದಲ್ಲಿ 7-5, 4-6, 7-6 (10-5) ಅಂತರದಿಂ ಗೆಲುವು ಸಾಧಿಸಿದ್ದು ಈ ಪ್ರೀ ಕ್ವಾರ್ಟರ್‌ಫೈನಲ್ ಮುಖಾಮುಖಿ ಎರಡು ಗಂಟೆ 19 ನಿಮಿಷಗಳ ಕಾಲ ತೀವ್ರ ಜಿದ್ದಾಜಿದ್ದಿನಿಂದ ನಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications