Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಗಾ ಸ್ವೆಟಿಕ್ ಹಲವು ಬಾರಿ ವಿಂಬಲ್ಡನ್ ಗೆಲ್ಲಲಿದ್ದಾರೆ: ಭವಿಷ್ಯ ನುಡಿದ ಮ್ಯಾಟ್ಸ್ ವಿಲಾಂಡರ್

ವಿಂಬಲ್ಡನ್ 2023ರ ಆವೃತ್ತಿಯ ಹಿನ್ನೆಲೆಯಲ್ಲಿ ಈ ಬಾರಿ ಯಾರು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಹಿಳೆಯರ ಸ್ಪರ್ಧೆಯಲ್ಲಿ ಟೈಟಲ್ ಗೆಲ್ಲುವನೆಚ್ಚಿನ ಆಟಗಾರ್ತಿಯರ ಪಟ್ಟಿಯಲ್ಲಿ ಪಾಲಿಶ್ ಆಟಗಾರ್ತಿ ಈಗಾ ಸ್ವೆಟಿಕ್ ಕೂಡ ಒಬ್ಬರಾಗಿದ್ದು ಈಕೆಯ ಬಗ್ಗೆ ಸ್ವೀಡನ್‌ನ ಟೆನಿಸ್ ದಿಗ್ಗಜ ಮ್ಯಾಟ್ಸ್ ವಿಲಾಂಡರ್ ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ಸಂಭಾವ್ಯ ಆಟಗಾರ್ತಿ ಎಂದಿದ್ದಾರೆ ವಿಲಾಂಡರ್.

ಸ್ವೆಟೆಕ್ ಅವರು ಕ್ಲೇಆವೆಯಂಗಳದಲ್ಲಿ ಮತ್ತು ಹಾರ್ಡ್ ಕೋರ್ಟ್‌ಗಳಲ್ಲಿ ಸಾಧಿಸಿದ ಯಶಸ್ಸನ್ನು ಹುಲ್ಲಿನ ಅಂಕಣಗಳಲ್ಲಿ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಅನೇಕ ವಿಂಬಲ್ಡನ್ ಪ್ರಶಸ್ತಿಗಳನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ ವಿಲಾಂಡರ್.

Wimbledon 2023: Mats Wilander predicts on Iga Swiatek said she can win Wimbledon multiple times

"ಆಕೆ ಹುಲ್ಲಿನ ಅಂಗಳದಲ್ಲಿ ಹೇಗೆ ಯಶಸ್ಸು ಸಾಧಿಬೇಕೆಂಬುದನ್ನು ಕಲಿತುಕೊಳ್ಳಲಿದ್ದಾರೆ. ಅವಳು ಕ್ಲೇ ಕೋರ್ಟ್‌ಗಿಂತ ಉತ್ತಮವಾದ ಗ್ರಾಸ್ ಕೋರ್ಟ್ ಆಟಗಾರ್ತಿಯಾಗಲಿದ್ದಾಳೆಯೇ ಎಂದರೆ ಇಲ್ಲ. ಆಕೆ ಹಾರ್ಡ್ ಕೋರ್ಟ್ ಆಟಗಾರ್ತಿಗಿಂತ ಉತ್ತಮ ಗ್ರಾಸ್ ಕೋರ್ಟ್ ಆಟಗಾರ್ತಿಯಾಗಲಿದ್ದಾಳೆಯೇ? ಹೆಚ್ಚಾಗಿ ಅಲ್ಲದೆ ಇರಬಹುದು. ಹಾಗಂತ ಆಕೆ ಇಲ್ಲಿ ಟೂರ್ನಿಯಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂದಿ ಅರ್ಥವಲ್ಲ" ಎಂದು ವಿಲಾಂಡರ್ ಸಂದರ್ಶನವೊಂದಲ್ಲಿ ಹೇಳಿಕೊಂಡಿದ್ದಾರೆ.

"ಹುಲ್ಲಿನ ಅಂಗಳ ತನ್ನ ಪಾಲಿಗೆ ಆರಾಮದಾಯಕ ಸರ್ಫೇಸ್ ಅಲ್ಲ ಎಂಬುದನ್ನು ಸ್ವೆಟಿಕ್ ಒಪ್ಪಿಕೊಂಡಿದ್ದಾರೆ. ಆದರೆ ಗ್ರಾಸ್ ಕೋರ್ಟ್ ಟೂರ್ನಿಯಲ್ಲಿ ಯಶಸ್ಸನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತನ್ನ ಆಟವನ್ನು ಅದಕ್ಕೆ ಹೊಂದಿಸಿಕೊಳ್ಳಲು ಆಕೆ ಕಲಿಯಬೇಕು" ಎಂದು ಮ್ಯಾಟ್ಸ್ ವಿಲಾಂಡರ್ ಅಭಿಪ್ರಾಯಪಟ್ಟಿದ್ದಾರೆ.

ಸ್ವತಃ ಇಗಾ ಸ್ವೆಟಿಕ್ ಹುಲ್ಲಿನ ಅಂಗಳದಲ್ಲಿ ಆಡುವಾಗ ಅನುಭವಿಸುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. 22ರ ಹರೆಯದ ಯುವ ಆಟಗಾರ್ತಿ ಹುಲ್ಲಿನ ಅಂಗಳದಲ್ಲಿ ಆಡುವುದು ತನ್ನ ಪಾಲಿಗೆ ಸುಲಭವಲ್ಲ ಎಂದಿದ್ದು ಪ್ರತಿಯೊಂದು ಹುಲ್ಲಿನ ಅಂಗಳದ ಪಂದ್ಯಾವಳಿಗೂ ಮುಕ್ತವಾದ ಮನಸ್ಸಿನೊಂದಿಗೆ ಕಣಕ್ಕಿಳಿಯುತ್ತೇನೆ ಎಂದಿದ್ದು ಅಲ್ಲಿ ಏನೆಲ್ಲಾ ಸಾಧ್ಯವೋ ಅದನ್ನು ಕಲಿತುಕೊಳ್ಳಲು ತಾನು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

Story first published: Wednesday, June 28, 2023, 23:27 [IST]
Other articles published on Jun 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+