ಪೋಲಿಷ್ ತಾರೆ ಇಗಾ ಸ್ವಿಟೆಕ್ ತನ್ನ ಚೊಚ್ಚಲ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಈವರೆಗೆ ಸ್ವೆಟೆಕ್ ಪಾಲಿಗೆ ಗಗನ ಕುಸುಮವಾಗಿದ್ದ ವಿಂಬಲ್ಡನ್ ಕ್ವಾರ್ಟರ್‌ಫೈನಲ್ಈ ಬಾರಿ ಈಡೇರಿದಂತಾಗಿದೆ. ಸೆಂಟರ್ ಕೋರ್ಟ್‌ನಲ್ಲಿ ಬೆಲಿಂಡಾ ಬೆನ್ಸಿಕ್ ವಿರುದ್ಧ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸೆಣೆಸಾಡಿದ ಸ್ವೇಟೆಕ್ 6-7 (4-7), 7-6 (7-2), 6-3 ಅಂತರದಿಂದ ಗೆದ್ದು ಎರಡು ಅಂಕಗಳನ್ನು ಖಾತೆಗೆ ಸೇರಿಸಿಕೊಂಡಿದ್ದಾರೆ.
ಸ್ವೆಟೆಕ್ ಕ್ವಾರ್ಟರ್‌ಫೈನಲ್‌ನಲ್ಲಿ ಯುಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಎರಡು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು 16 ರ ಸುತ್ತಿನಲ್ಲಿ ಸೋಲಿಸಿದರು. ಅದ್ಭುತ ಕಾದಾಟದಲ್ಲಿ ಉಕ್ರೇನಿಯನ್ ಸ್ಟಾರ್ ಒಂದು ಹಂತದಲ್ಲಿ ಒಂದು ಸೆಟ್ ಮತ್ತು 0-2 ಅಂಕಗಳಿಂದ ಹಿಂದಿದ್ದರು. ಅಲ್ಲಿಂದ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಪಂದ್ಯ ಗೆದ್ದುಕೊಂಡಿದ್ದಾರೆ.

ರಷ್ಯಾದ ಹದಿಹರೆಯದ ಸೆನ್ಸೇಶನ್ ಮಿರ್ರಾ ಆಂಡ್ರೀವಾ 2023 ರಲ್ಲಿ ತನ್ನ ಅದ್ಭುತ ಓಟವನ್ನು ಮುಂದುವರೆಸಿದ್ದಾರೆ. ಫ್ರೆಂಚ್ ಓಪನ್ ಮೂರನೇ ಸುತ್ತಿಗೆ ಮುನ್ನಡೆದ ನಂತರ 16 ವರ್ಷ ವಯಸ್ಸಿನ ಈ ಸ್ಟಾರ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈಗ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ರೌಂಡ್ ಆಫ್ 16 ಪಂದ್ಯವನ್ನು ಆಡುವ ಅವಕಾಶ ಪಡೆದುಕೊಂಡಿದ್ದಾರೆ. ರಷ್ಯಾದ ಅನಸ್ತಾಸಿಯಾ ಪೊಟಪೋವಾ ಅವರನ್ನು 6-2, 7-5 ಸೆಟ್‌ಗಳಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ. ಈ ವರ್ಷ ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದ ಮೂವರ ಪೈಕಿ ಆಂಡ್ರೀವಾ ಮಾತ್ರ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಆಂಡ್ರೆ ರುಬ್ಲೆವ್ ಅವರು ಸೆಂಟರ್ ಕೋರ್ಟ್‌ನಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿದರು. 7-5, 6-3, 6-7 (6-8), 6-7 (5-7), 6-4 ಸೆಟ್‌ಗಳಿಂದ ಆಂಡ್ರೆ ರುಬ್ಲೆವ್ ಈ ಪಂದ್ಯವನ್ನು ಗೆದ್ದಿದ್ದಾರೆ. ವಿಶ್ವ ನಂ.8 ಜಾನಿಕ್ ಸಿನ್ನರ್ ಅವರು ಡೇನಿಯಲ್ ಎಲಾಹಿ ಗಲಾನ್ ಅವರನ್ನು 7-6 (7-4), 6-4, 6-3 ಸೆಟ್‌ಗಳಿಂದ ಸೋಲಿಸಿ ಮಿಂಚಿದ್ದಾರೆ. ರಷ್ಯಾದ ರೋಮನ್ ಸಫಿಯುಲಿನ್ 3-6, 6-3, 6-1, 6-3ರಲ್ಲಿ 26ನೇ ಶ್ರೇಯಾಂಕದ ಡೆನಿಸ್ ಶಪೊವಾಲೊವ್ ಅವರನ್ನು ಮಣಿಸಿದರು.