Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wimbledon 2023: 9ನೇ ಬಾರಿಗೆ ಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್

ಟೆನಿಸ್ ಲೋಕದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ ಓಟವನ್ನು ನಿಲ್ಲಿಸುವವರು ಯಾರೂ ಇಲ್ಲದಂತಾಗಿದೆ. ಈಗಾಗಲೇ ಈ ವರ್ಷದ ಮೊದಲ ಎರಡು ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದುಕೊಂಡಿರುವ ಜೊಕೊವಿಕ್ ವಿಂಬಲ್ಡನ್‌ನಲ್ಲಿಯೂ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿದ್ದಾರೆ. ಇಂದು ನಡೆದ ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನೊವಾಕ್ ಜೊಕೊವಿಕ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಜುಲೈ 14ಶುಕ್ರವಾರ ಲಂಡನ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ-ಫೈನಲ್‌ನಲ್ಲಿ ಕದನದಲ್ಲಿ ಜೊಕೊವಿಕ್ ಹಾಗೂ 21 ವರ್ಷದ ಜಾನಿಕ್ ಸಿನ್ನರ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಸಿನ್ನರ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಸರ್ಬಿಯಾದ ದಿಗ್ಗಜ ತನ್ನ 9ನೇ ವಿಂಬಲ್ಡನ್ ಫೈನಲ್‌ಗೆ ಹೆಜ್ಜೆ ಹಾಕಿದರು. 2 ಗಂಟೆ 47 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಸಿನ್ನರ್ ಅವರನ್ನು ಜೊಕೊವಿಕ್ 6-3, 6-4, 7-6 (4) ಸಿನ್ನರ್ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Wimbledon 2023: Novak Djokovic enter his 9th final after won semi final match against Jannik Sinner

2013ರಲ್ಲಿ ಫೈನಲ್‌ನಲ್ಲಿ ಸೋಲು ಕಂಡ ಬಳಿಕ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಜೊಕೊವಿಕ್ ಸೋಲೇ ಕಂಡಿಲ್ಲ. ಈ ಪಂದ್ಯದ ಮೂರು ಸೆಟ್‌ಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಜೊಕೊವಿಕ್ ಭರ್ಜರಿಯಾಗಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ವಿಂಬಲ್ಡನ್‌ನಲ್ಲಿ ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಪೀಟ್ ಸಾಂಪ್ರಾಸ್ ಮತ್ತು ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಅವಕಾಶ ಹೊಂದಿದ್ದಾರೆ.

ಜೊಕೊವಿಗ್‌ಗೆ ಇದು ದಾಖಲೆಯ 35ನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದ್ದು ಸತತವಾಗಿ 8ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ಪಂದ್ಯವನ್ನು ಗೆದ್ದುಕೊಂಡಂತಾಗಿದೆ. ಫೈನಲ್‌ನಲ್ಲಿ ಜೊಕೊವಿಕ್ ವಿಶ್ವ ನಂ. 1 ಕಾರ್ಲೋಸ್ ಅಲ್ಕರೇಜ್ ಮತ್ತು ವಿಶ್ವ ನಂ. 3 ಡೇನಿಯಲ್ ಮೆಡ್ವೆಡೆವ್ ನಡುವಿನ ಎರಡನೇ ಸೆಮಿಫೈನಲ್ ವಿಜೇತರನ್ನು ಎದುರಿಸಲಿದ್ದಾರೆ.

Story first published: Friday, July 14, 2023, 23:26 [IST]
Other articles published on Jul 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+