Wimbledon 2023: ಸೆಮಿಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್; 24ನೇ ಗ್ರ್ಯಾಂಡ್‌ಸ್ಲಾಮ್ ಮೇಲೆ ಕಣ್ಣು
ಮಂಗಳವಾರ, ಜುಲೈ 11ರಂದು ಲಂಡನ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆದ 2023ರ ವಿಂಬಲ್ಡನ್‌ನ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆಂಡ್ರೆ ರುಬ್ಲೆವ್ ವಿರುದ್ಧ ನೊವಾಕ್ ಜೊಕೊವಿಕ್ ರೋಚಕ ಗೆಲುವು ಸಾಧಿಸಿದರು.
ಇದೆ ವೇಳೆ ಮಾಜಿ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರು ತಮ್ಮ 46ನೇ ಗ್ರ್ಯಾಂಡ್‌ಸ್ಲಾಮ್ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದರು ಹಾಗೂ ಟೆನ್ನಿಸ್ ಓಪನ್ ಇತಿಹಾಸದಲ್ಲಿ ಲೆಜೆಂಡ್ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದರು.

ನೊವಾಕ್ ಜೊಕೊವಿಕ್ ಅವರು ಆಂಡ್ರೆ ರುಬ್ಲೆವ್ ಅವರನ್ನು 4-6, 6-1, 6-4, 6-3 ಸೆಟ್‌ಗಳಿಂದ ಸೋಲಿಸಿದರು. ಪರಾಭವಗೊಳಿಸಿದರು.
"ಕೆಲವು ರೋಮಾಂಚಕ ಹೊಡೆತಗಳು ಇದ್ದವು. ಆಂಡ್ರೆ ರುಬ್ಲೆವ್ ಬಹಳ ಗೌರವಾನ್ವಿತ ವ್ಯಕ್ತಿ. ನಿಸ್ಸಂಶಯವಾಗಿ ಅವರು ಅಂಗಳದಲ್ಲಿ ಸಾಕಷ್ಟು ಆಕ್ರಮಣಕಾರಿ ತರುತ್ತಾರೆ. ಅವರ ಹೊಡೆತಗಳ ನಂತರ ಅವರು ಗೊಣಗುತ್ತಿರುವ ರೀತಿಯಲ್ಲಿ ನೀವು ನೋಡಬಹುದು, ವಿಶೇಷವಾಗಿ ಫೋರ್‌ಹ್ಯಾಂಡ್‌ನಲ್ಲಿ. ಮೂಲೆಯಿಂದ ಬರುವ ಚೆಂಡು ಮತ್ತು ಧ್ವನಿ ಎರಡೂ ಕೂಡ ಒಂದು ರೀತಿಯ ಭಯಾನಕವಾಗಿರುತ್ತದೆ," ಎಂದು ಪಂದ್ಯದ ನಂತರ ನೊವಾಕ್ ಜೊಕೊವಿಕ್ ಹೇಳಿದರು.
ನೊವಾಕ್ ಜೊಕೊವಿಕ್ ಮುಂದಿನ ಸೆಮಿಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನರ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜಾನಿಕ್ ಸಿನ್ನರ್ ಅವರು ರಷ್ಯಾದ ರೋಮನ್ ಸಫಿಯುಲಿನ್ ಅವರನ್ನು 6-3, 3-6, 6-2, 6-2 ಸೆಟ್‌ಗಳಿಂದ ಸೋಲಿಸಿದರು.

ಸೆರ್ಬಿಯಾದ ಲೆಜೆಂಡ್ ನೊವಾಕ್ ಜೊಕೊವಿಕ್ ತನ್ನ 24ನೇ ಗ್ರ್ಯಾಂಡ್‌ಸ್ಲಾಮ್ ಮತ್ತು ತನ್ನ ಎಂಟನೇ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಇಗಾ ಸ್ವಿಯಾಟೆಕ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದ ಸ್ವಿಟೋಲಿನಾ
ಎಲಿನಾ ಸ್ವಿಟೋಲಿನಾ ಮತ್ತು ಮಾರ್ಕೆಟಾ ವೊಂಡ್ರೊಸೊವಾ ಅವರು ವಿಂಬಲ್ಡನ್ 2023ರ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಮುನ್ನಡೆದರು.
ಸೆಂಟರ್ ಕೋರ್ಟ್‌ನಲ್ಲಿ ಎಲಿನಾ ಸ್ವಿಟೋಲಿನಾ ಅವರು ವಿಶ್ವದ ನಂ.1 ಇಗಾ ಸ್ವಿಯಾಟೆಕ್ ವಿರುದ್ಧ 7-5, 6-7 (5-7), 6-2 ಸೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರು.
ಎಲಿನಾ ಸ್ವಿಟೋಲಿನಾ ಅವರು ಕಳೆದ 44 ವರ್ಷಗಳಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಾಯಿ ಎನಿಸಿಕೊಂಡರು. ಮಗುವಿಗೆ ಜನ್ಮ ನೀಡಿದ ನಂತರ ಅವರ ಮೊದಲ ಎರಡು ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.
1979ರಲ್ಲಿ ಇವೊನ್ನೆ ಗೂಲಾಗಾಂಗ್ ಈ ಸಾಧನೆ ಮಾಡಿದ್ದರು ಮತ್ತು ಇದೀಗ ಎಲಿನಾ ಸ್ವಿಟೋಲಿನಾ ಅವರು ಗಣ್ಯರ ಪಟ್ಟಿಯಲ್ಲಿ ಸೇರಿಕೊಂಡರು. ಕಳೆದ ಅಕ್ಟೋಬರ್‌ನಲ್ಲಿ ಸ್ವಿಟೋಲಿನಾ ತಾಯಿಯಾಗಿದ್ದರು.
ಎಲಿನಾ ಸ್ವಿಟೋಲಿನಾ ಮುಂದಿನ ಸುತ್ತಿನಲ್ಲಿ ಮಾರ್ಕೆಟಾ ವೊಂಡ್ರೊಸೊವಾ ಅವರನ್ನು ಎದುರಿಸಲಿದ್ದಾರೆ. ವೊಂಡ್ರೊಸೊವಾ ಅವರು ವಿಶ್ವ ನಂ.4 ಜೆಸ್ಸಿಕಾ ಪೆಗುಲಾ ಅವರನ್ನು 6-4, 2-6, 6-4 ಮೂರು ಸೆಟ್‌ಗಳಲ್ಲಿ ಸೋಲಿಸಿದರು. ಇದು ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ನಲ್ಲಿ ಅವರ ಮೊದಲ ಪ್ರದರ್ಶನವಾಗಿದೆ.
24 ವರ್ಷದ ಮಾರ್ಕೆಟಾ ವೊಂಡ್ರೊಸೊವಾ ತನ್ನ ಟೆನ್ನಿಸ್ ವೃತ್ತಿಜೀವನದಲ್ಲಿ ಎಲಿನಾ ಸ್ವಿಟೋಲಿನಾ ಅವರನ್ನು ಐದು ಬಾರಿ ಎದುರಿಸಿದ್ದಾರೆ ಮತ್ತು ಎರಡು ಬಾರಿ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications