Wimbledon 2023: ಮತ್ತೊಂದು ಗ್ರ್ಯಾನ್‌ಸ್ಲ್ಯಾಮ್ ಮೇಲೆ ಜೊಕೊವಿಕ್ ಕಣ್ಣು: ನಿವೃತ್ತಿ ಪ್ರಶ್ನೆಗೆ ಖಡಕ್ ಉತ್ತರ!
ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ವಿಂಬಲ್ಡನ್ ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು 24ನೇ ಗ್ರ್ಯಾನ್ ಸ್ಲಾಮ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಟ್ರೋಪಿ ಮುಡಿಗೇರಿಸಿಕೊಂಡಿರುವ ಜೊಕೊವಿಕ್ ರಾಫೆಲ್ ನಡಾಲ್ ದಾಖಲೆಯನ್ನು ಮುರಿದು ದಾಖಲೆ ಬರೆದಿದ್ದಾರೆ. ಈ ಮೂಲಕ ಜೊಕೊವಿಕ್ 36 ನೇ ವಯಸ್ಸಿನಲ್ಲಿಯೂ ಗೆಲುವಿನ ಓಟವನ್ನು ಮುಂದಿವರಿಸಿದ್ದು ಮತ್ತೊಂದು ಸಾಧನೆಯ ಮೇಲೆ ಚಿತ್ತನೆಟ್ಟಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್ ಪಟ್ಟಕ್ಕೇರುವ ಹಾದಿಯಲ್ಲಿ ಜೊಕೊವಿಕ್ ಯುವ ಪ್ರತಿಭಾವಂತ ಆಟಗಾರಾದ ಕಾರ್ಲೋಸ್ ಅಲ್ಕರಾಜ್ ಮತ್ತು ಕ್ಯಾಸ್ಪರ್ ರೂಡ್ ಅವರಂತಾ ಕಿರಿಯ ಆಟಗಾರರಿಗೆ ಸೋಲುಣಿಸಿದ್ದರು. ಇನ್ನು ಸೊಂಟದ ಗಾಯದಿಂದಾಗಿ ನಡಾಲ್ ಸ್ಪರ್ಧೆಯಿಂದ ಹೊರಗುಳಿದಿದ್ದರೆ ನಿಕ್ ಕಿರ್ಗಿಯೋಸ್ ಕೂಡ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ವಿಂಬಲ್ಡನ್ ಕಿರೀಟವನ್ನು ಕೂಡ ಮುಡಿಗೇರಿಸಿಕೊಳ್ಳುವಲ್ಲಿ ಜೊಕೊವಿಕ್ ನೆಚ್ಚಿನ ಆಟಗಾರನಾಗಿ ಕಂಡುಬರುತ್ತಿದ್ದಾರೆ.

"ಖಂಡಿತವಾಗಿಯೂ ನನ್ನ ಪ್ರಯಾಣ ಇನ್ನೂ ಅಂತ್ಯವಾಗಿಲ್ಲ. ನಾನು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಇನ್ನು ಕೂಡ ಗೆಲ್ಲುತ್ತಿದ್ದೇನೆ. ಹಾಗಿದ್ದಾಗ 20 ವರ್ಷಗಳನ್ನು ಪೂರೈಸಿರುವ ನನ್ನ ವೃತ್ತಿಜೀವನವನ್ನು ನಾನು ಈಗ ಯಾಕಾಗಿ ಅಂತ್ಯಗೋಳಿಸಲಿ ಎಂದು ನನಗೆ ಅನಿಸುತ್ತಿದೆ" ಎಂದಿದ್ದಾರೆ ಜೊಕೊವಿಕ್ ಪ್ರತಿಕ್ರಿಯೆ ನಿಡುವ ಮೂಲಕ ತಮ್ಮ ಟೆನಿಸ್ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನನ್ನಲ್ಲಿ ಇನ್ನು ಕೂಡ ಸ್ಪೂರ್ತಿಯಿದೆ. ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಗಳಲ್ಲಿ ಅತ್ಯುತ್ತಮ ಟೆನಿಸ್ ಅನ್ನು ಆಡಲು ಇನ್ನೂ ಹುರುಪು ಹೊಂದಿದ್ದೇನೆ. ಈ ಆಟದಲ್ಲಿ ನಾನು ಇನ್ನೂ ಕೂಡ ಹೆಚ್ಚಿನ ಸಾಧನೆ ಮಾಡುವದನ್ನು ಬಯಸುತ್ತಿದ್ದೇನೆ. ಹಾಗಾಗಿ ಈಗ ವಿಂಬಲ್ಡನ್‌ಗಾಗಿ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ ನೊವಾಕ್ ಜೊಕೊವಿಕ್.
ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಮೇಜರ್‌ಗಳನ್ನು ಗೆಲ್ಲುವ ಮೂಲಕ ಕ್ಯಾಲೆಂಡರ್ ಗ್ರ್ಯಾಂಡ್ ಸ್ಲಾಮ್ ಸಾಧನೆಯನ್ನು ಪೂರ್ಣಗೊಳಿಸುವ ಅವಕಾಶವನ್ನು ಜೊಕೊವಿಕ್ ಈ ಬಾರಿ ಹೊಂದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಈಗಾಗಲೇ ಗೆದ್ದಿರುವ ಜೊಕೊವಿಕ್ ವಿಂಬಲ್ಡನ್ ಗೆದ್ದರೆ ಈ ಸಾಧನೆಯ ಸನಿಹಕ್ಕೆ ತಲುಪಲಿದ್ದಾರೆ. 2021ರಲ್ಲಿಯೂ ಈ ಅವಕಾಶವನ್ನು ಜೊಕೊವಿಕ್ ಹೊಂದಿದ್ದು ವರ್ಷದ ಮೊದಲ ಮೂರು ಗ್ರ್ಯಾನ್‌ಸ್ಲ್ಯಾಮ್ ಮುಡಿಗೇರಿಸಿಕೊಂಡಿದ್ದರು. ಆದರೆ ಯುಎಸ್ ಓಪನ್ ಫೈನಲ್‌ನಲ್ಲಿ ಅವರು ಡೇನಿಯಲ್ ಮೆಡ್ವೆಡೆವ್‌ಗೆ ಸೋತ ಕಾರಣ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications