ವಿಂಬಲ್ಡನ್ 2023: 3ನೇ ಸುತ್ತಿಗೆ ಕಾಲಿಟ್ಟ ರೋಹನ್ ಬೋಪಣ್ಣ, ಮ್ಯಾಥ್ಯೂ ಎಬ್ಡೆನ್ ಜೋಡಿ
ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದೆ. ಸೋಮವಾರ ಎರಡನೇ ಸುತ್ತಿನ ಸೆನೆಸಾಟದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಜಾಕೋಬ್ ಫಿಯರ್ನ್ಲಿ ಮತ್ತು ಜೊಹಾನಸ್ ಜೋಡಿಯನ್ನು ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಒಂದು ಗಂಟೆ ಒಂಬತ್ತು ನಿಮಿಷಗಳಲ್ಲಿ 7-5, 6-3 ಅಂತರದಿಂದ ಮಣಿಸಿದೆ.
ಮೊದಲ ಸೆಟ್‌ನಲ್ಲಿ ಆರಂಭದಲ್ಲಿ ಬ್ರಿಟಿಷ್ ಜೋಡಿ ಮುನ್ನಡೆ ಸಾಧಿಸಿದ್ದರು. ಆದರೆ ಬೋಪಣ್ಣ ಮತ್ತು ಎಬ್ಡೆನ್ ಅವರಲ್ಲಿ ನಂತರ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಬೋಪಣ್ಣ-ಎಬ್ಡೆನ್ ಜೋಡಿ ಎದುರಾಳಿಗೆ ತಮ್ಮ ಸರ್ವ್ ಮುರಿಯಲು ಒಂದೇ ಒಂದು ಅವಕಾಶವನ್ನು ನೀಡದ ಕಾರಣ ಮುನ್ನಡೆಯನ್ನು ಸಾಧಿಸುತ್ತಲೇ ಸಾಗಿದರು.

ಅರ್ಜೆಂಟೀನಾದ ಜೋಡಿಯಾದ ಗಿಲ್ಲೆರ್ಮೊ ಡುರಾನ್ ಮತ್ತು ತೋಮಸ್ ಮಾರ್ಟಿನ್ ಎಟ್ಚೆವೆರಿ ವಿರುದ್ಧದ ಭಾರತ ನತ್ತು ಆಸಿಸ್ ಆಟಗಾರರ ಈ ಜೋಡಿ ಮೊದಲ ಸುತ್ತಿನ ಪಂದ್ಯವನ್ನು ಎದುರಿಸಿದ್ದರು. ಈ ಪಂದ್ಯದಲ್ಲೊ ಬೋಪಣ್ಣ ಮತ್ತು ಎಬ್ಡೆನ್ 6-2, 6-7 (5-7), 7-6 (10-8) ಅಂತರದಿಂದ ಗೆಲುವು ಸಾಧಿಸಿದ್ದರು. ಬೋಪಣ್ಣ ಮತ್ತು ಎಬ್ಡೆನ್ ಅವರು ಡಚ್-ಅಮೆರಿಕನ್ ಜೋಡಿಯಾದ ಡೇವಿಡ್ ಪೆಲ್ ಮತ್ತು ರೀಸ್ ಸ್ಟಾಲ್ಡರ್ ಅವರೊಂದಿಗೆ 16ರ ಘಟ್ಟದ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದ್ದಾರೆ.
ಇನ್ನು ಸಿಂಗಲ್ಸ್ ವಿಭಾಗದಲ್ಲಿ ರಷ್ಯಾದ ಹದಿಹರೆಯದ ಸೆನ್ಸೇಶನ್ ಮಿರ್ರಾ ಆಂಡ್ರೀವಾ 2023 ರಲ್ಲಿ ತನ್ನ ಅದ್ಭುತ ಓಟವನ್ನು ಮುಂದುವರೆಸಿದ್ದಾರೆ. ಫ್ರೆಂಚ್ ಓಪನ್ ಮೂರನೇ ಸುತ್ತಿಗೆ ಮುನ್ನಡೆದ ನಂತರ 16 ವರ್ಷ ವಯಸ್ಸಿನ ಈ ಸ್ಟಾರ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈಗ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ರೌಂಡ್ ಆಫ್ 16 ಪಂದ್ಯವನ್ನು ಆಡುವ ಅವಕಾಶ ಪಡೆದುಕೊಂಡಿದ್ದಾರೆ.
ರಷ್ಯಾದ ಅನಸ್ತಾಸಿಯಾ ಪೊಟಪೋವಾ ಅವರನ್ನು 6-2, 7-5 ಸೆಟ್‌ಗಳಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ. ಈ ವರ್ಷ ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದ ಮೂವರ ಪೈಕಿ ಆಂಡ್ರೀವಾ ಮಾತ್ರ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಆಂಡ್ರೆ ರುಬ್ಲೆವ್ ಅವರು ಸೆಂಟರ್ ಕೋರ್ಟ್‌ನಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿದರು. 7-5, 6-3, 6-7 (6-8), 6-7 (5-7), 6-4 ಸೆಟ್‌ಗಳಿಂದ ಆಂಡ್ರೆ ರುಬ್ಲೆವ್ ಈ ಪಂದ್ಯವನ್ನು ಗೆದ್ದಿದ್ದಾರೆ. ವಿಶ್ವ ನಂ.8 ಜಾನಿಕ್ ಸಿನ್ನರ್ ಅವರು ಡೇನಿಯಲ್ ಎಲಾಹಿ ಗಲಾನ್ ಅವರನ್ನು 7-6 (7-4), 6-4, 6-3 ಸೆಟ್‌ಗಳಿಂದ ಸೋಲಿಸಿ ಮಿಂಚಿದ್ದಾರೆ. ರಷ್ಯಾದ ರೋಮನ್ ಸಫಿಯುಲಿನ್ 3-6, 6-3, 6-1, 6-3ರಲ್ಲಿ 26ನೇ ಶ್ರೇಯಾಂಕದ ಡೆನಿಸ್ ಶಪೊವಾಲೊವ್ ಅವರನ್ನು ಮಣಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications