Wimbledon 2023: ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ
ವಿಂಬಲ್ಡನ್ ಅಂಗಳದಲ್ಲಿ ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯ ಯಶಸ್ಸಿನ ಓಟ ಮುಂದುವರಿದಿದೆ. ಆರನೇ ಸೀಡ್‌ನ ಭಾರತ ಹಾಗೂ ಆಸ್ಟ್ರೇಲಿಯಾದ ಈ ಜೋಡಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ರೀಸ್ ಸ್ಟಾಲ್ಡರ್ ಮತ್ತು ನೆದರ್‌ಲ್ಯಾಂಡ್‌ನ ಡೇವಿಡ್ ಪೆಲ್ ಜೋಡಿಯ ವಿರುದ್ಧದ ರೋಮಾಂಚನಕಾರಿ ಪಂದ್ಯದಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಕಠಿಣ ಹೋರಾಟ ನಡೆಸಿ ಗೆಲುವು ದಕ್ಕಿಸಿಕೊಂಡಿದ್ದಾರೆ. ರೋಚಕವಾಗಿ ನಡೆದ ಕಾದಾಟದಲ್ಲಿ 7-5, 4-6, 7-6 (10-5) ಅಂತರದಿಂ ಗೆಲುವು ಸಾಧಿಸಿದ್ದು ಈ ಪ್ರೀ ಕ್ವಾರ್ಟರ್‌ಫೈನಲ್ ಮುಖಾಮುಖಿ ಎರಡು ಗಂಟೆ 19 ನಿಮಿಷಗಳ ಕಾಲ ತೀವ್ರ ಜಿದ್ದಾಜಿದ್ದಿನಿಂದ ನಡೆಯಿತು.

ಕ್ವಾರ್ಟರ್ ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಡಚ್ ಜೋಡಿಯಾದ ಟ್ಯಾಲನ್ ಗ್ರೀಕ್ಸ್‌ಪೂರ್ ಮತ್ತು ಬಾರ್ಟ್ ಸ್ಟೀವನ್ಸ್ ಸವಾಲನ್ನು ಎದುರಿಸಲಬೇಕಿದೆ. ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಈ ಮುಂದಿನ ಪಂದ್ಯದಲ್ಲಿಯೂ ಗೆಲುವಿನ ಲಯವನ್ನು ಉಳಿಸಿಕೊಂಡು ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಚಿತ್ತ ನೆಟ್ಟಿದ್ದಾರೆ.
ಇನ್ನು ಇದಕ್ಕೂ ಮುನ್ನ ಸೋಮವಾರ ಎರಡನೇ ಸುತ್ತಿನ ಸೆನೆಸಾಟದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಜಾಕೋಬ್ ಫಿಯರ್ನ್ಲಿ ಮತ್ತು ಜೊಹಾನಸ್ ಜೋಡಿಯನ್ನು ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಒಂದು ಗಂಟೆ ಒಂಬತ್ತು ನಿಮಿಷಗಳಲ್ಲಿ 7-5, 6-3 ಅಂತರದಿಂದ ಮಣಿಸಿದೆ.
ಮೊದಲ ಸೆಟ್‌ನಲ್ಲಿ ಆರಂಭದಲ್ಲಿ ಬ್ರಿಟಿಷ್ ಜೋಡಿ ಮುನ್ನಡೆ ಸಾಧಿಸಿದ್ದರು. ಆದರೆ ಬೋಪಣ್ಣ ಮತ್ತು ಎಬ್ಡೆನ್ ಅವರಲ್ಲಿ ನಂತರ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಬೋಪಣ್ಣ-ಎಬ್ಡೆನ್ ಜೋಡಿ ಎದುರಾಳಿಗೆ ತಮ್ಮ ಸರ್ವ್ ಮುರಿಯಲು ಒಂದೇ ಒಂದು ಅವಕಾಶವನ್ನು ನೀಡದ ಕಾರಣ ಮುನ್ನಡೆಯನ್ನು ಸಾಧಿಸುತ್ತಲೇ ಸಾಗಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications