For Quick Alerts
ALLOW NOTIFICATIONS  
For Daily Alerts

Wimbledon 2023: ಸೆಂಟರ್ ಕೋರ್ಟ್‌ಗೆ ಬಂದ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ಎದ್ದು ನಿಂತು ಚಪ್ಪಾಳೆ

2023ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಎರಡನೇ ದಿನವಾದ ಮಂಗಳವಾರ, ಜುಲೈ 4ರಂದು ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರನ್ನು ಸಂಭ್ರಮಿಸಿದ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ ಸ್ವಿಟ್ಜರ್ಲ್ಯಾಂಡ್ ತಾರೆ ರೋಜರ್ ಫೆಡರರ್ ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಇದೇ ವೇಳೆ ಕೆಲವು ಶ್ರೇಷ್ಠ ವಿಜಯಗಳ ದೃಶ್ಯಗಳನ್ನು ಮೆಲುಕು ಹಾಕಲಾಯಿತು ಮತ್ತು ಆಟದ ಪ್ರಾರಂಭದ ಮೊದಲು ರೋಜರ್ ಫೆಡರರ್ ಅವರನ್ನು ವಿಂಬಲ್ಡನ್ ಗೌರವಿಸಿತು.

ಬೀಜ್-ಬಣ್ಣದ ಸೂಟ್‌ನಲ್ಲಿ ಮಿಂಚಿದ ಸ್ವಿಟ್ಜರ್ಲ್ಯಾಂಡ್ ಟೆನ್ನಿಸ್ ತಾರೆ ವಿಂಬಲ್ಡನ್‌ಗೆ ಎಂಟ್ರಿ ಕೊಟ್ಟರು. ಸೆಂಟರ್ ಕೋರ್ಟ್‌ನಲ್ಲಿ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರು ಅವರ ದಾಖಲೆಯ ಸಾಧನೆಗಳಿಗಾಗಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಗೆ ರೋಜರ್ ಫೆಡರರ್ ಅವರು ರೋಮಾಂಚನಗೊಂಡರು.

Wimbledon 2023

24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಚಾಂಪಿಯನ್ ರೋಜರ್ ಫೆಡರರ್ ವಿಶ್ವದ ಅತ್ಯಂತ ಹಳೆಯ ಟೆನಿಸ್ ಪಂದ್ಯಾವಳಿಯಾದ ವಿಂಬಲ್ಡನ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪುರುಷ ಟೆನಿಸ್ ಆಟಗಾರರಾಗಿದ್ದಾರೆ.

ಎಂಟು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆಲ್ಲುವುದರ ಹೊರತಾಗಿ, ರೋಜರ್ ಫೆಡರರ್ ತನ್ನ ನಮ್ರತೆ ಮತ್ತು ಸಮರ್ಪಣಾ ಮನೋಭಾವದಿಂದ ಲಕ್ಷಾಂತರ ಟೆನಿಸ್ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅವರು ನಿವೃತ್ತರಾದ 41 ವರ್ಷದ ರೋಜರ್ ಫೆಡರರ್ ತಮ್ಮ ಎಂಟು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದ ದೃಶ್ಯಗಳನ್ನು ಮರಳಿ ಪಡೆದರು. ಆಗ ಫೆಡರರ್ ಮುಖದಲ್ಲಿ ವಿನಮ್ರ ನಗು ಕಂಡುಬಂತು. ರೋಜರ್ ಫೆಡರರ್ ಪ್ರತಿಷ್ಠಿತ ವಿಂಬಲ್ಡನ್ ಪಂದ್ಯಾವಳಿಯ ಎರಡನೇ ದಿನದ ಆಟದ ಆರಂಭಕ್ಕೆ ಮುನ್ನ ರಾಯಲ್ ಬಾಕ್ಸ್‌ಗೆ ಪ್ರವೇಶಿಸಿದರು.

Wimbledon 2023

ರೋಜರ್ ಫೆಡರರ್ ಅವರ ಪ್ರವೇಶಿಸುತ್ತಿದ್ದಂತೆಯೇ ಟೆನಿಸ್ ಅಭಿಮಾನಿಗಳಿಗೆ ಗೂಸ್‌ಬಂಪ್ಸ್ ಕ್ಷಣವನ್ನು ಸೃಷ್ಟಿಸಿತು. ಈ ವಾರಾಂತ್ಯದಲ್ಲಿ ಜ್ಯೂರಿಚ್‌ನಲ್ಲಿ ಕೋಲ್ಡ್‌ಪ್ಲೇಯೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ವೇಲ್ಸ್‌ನ ರಾಜಕುಮಾರಿ ಕೇಟ್ ಮಿಡಲ್‌ಟನ್‌ನ ಪಕ್ಕದಲ್ಲಿ ಆಸನ ನೀಡುವ ಮೊದಲು ಮಾಜಿ ಟೆನಿಸ್ ಶ್ರೇಷ್ಠ ಆಟಗಾರನನ್ನು ಬ್ರಿಟಿಷ್ ರಾಜಮರ್ಯಾದೆಯಿಂದ ಗೌರವಿಸಲಾಯಿತು.

ಇದಕ್ಕೂ ಮುನ್ನ "ಮಂಗಳವಾರದಂದು ರೋಜರ್ ಫೆಡರರ್ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಲು ನನಗೆ ಅತೀವ ಸಂತೋಷವಾಗಿದೆ. ವಿಂಬಲ್ಡನ್‌ನಲ್ಲಿ ಅತ್ಯಂತ ಹೆಚ್ಚು ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ವ್ಯಕ್ತಿಯನ್ನು ಆಟ ಪ್ರಾರಂಭವಾಗುವ ಮೊದಲು ಸೆಂಟರ್ ಕೋರ್ಟ್‌ನಲ್ಲಿ ಗೌರವಿಸಲು ನಾವು ವಿಶೇಷ ಸಂಭ್ರಮಾಚರಣೆಯನ್ನು ಹೊಂದಿದ್ದೇವೆ" ಎಂದು ಆಲ್ ಇಂಗ್ಲೆಂಡ್ ಕ್ಲಬ್ ಮುಖ್ಯಸ್ಥ ಕಾರ್ಯನಿರ್ವಾಹಕಿ ಸ್ಯಾಲಿ ಬೋಲ್ಟನ್ ಸೋಮವಾರ ಹೇಳಿದ್ದರು.

ರೋಜರ್ ಫೆಡರರ್ ಅವರ ಸಾಧನೆಗಳನ್ನು ಆಚರಿಸಲು ಮತ್ತು ಎಲ್ಲಾ ನೆನಪುಗಳಿಗೆ ಧನ್ಯವಾದ ಹೇಳಲು ನಮಗೆ ಒಂದು ಸಮಯ ಸಿಕ್ಕಿದೆ ಎಂದು ಸ್ಯಾಲಿ ಬೋಲ್ಟನ್ ತಿಳಿಸಿದ್ದರು.

41 ವರ್ಷದ ರೋಜರ್ ಫೆಡರರ್ ಲಂಡನ್‌ನಲ್ಲಿ ನಡೆದ ಲೇವರ್ ಕಪ್‌ನಲ್ಲಿ ಭಾವನಾತ್ಮಕವಾಗಿ ತಲೆಬಾಗಿದ ನಂತರ, ಹೆಚ್ಚಾಗಿ ಟೆನಿಸ್‌ನಿಂದ ದೂರವಿದ್ದರು. ಆದರೆ ಕಳೆದ ತಿಂಗಳ ಹಿಂದೆ ಜರ್ಮನಿಯ ಹಾಲೆಯಲ್ಲಿ ನಡೆದ ಗ್ರಾಸ್-ಕೋರ್ಟ್ ಟೂರ್ನಿಯಲ್ಲಿ ಇದೇ ರೀತಿ ಗೌರವಿಸಲಾಗಿತ್ತು.

ಇನ್ನು ಕೆಲವು ತಿಂಗಳ ಹಿಂದೆ ಯುಎಸ್ ಓಪನ್‌ನಲ್ಲಿ ನಿವೃತ್ತಿ ಘೋಷಿಸಿದ 41 ವರ್ಷದ ಸೆರೆನಾ ವಿಲಿಯಮ್ಸ್ ಅವರನ್ನು ಕೂಡ ವಿಂಬಲ್ಡನ್‌ಗೆ ಆಹ್ವಾನಿಸಲಾಗಿತ್ತು. ಆದರೆ ಅವರಿಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಬರುವುದಿಲ್ಲ ಎಂದು ಸ್ಯಾಲಿ ಬೋಲ್ಟನ್ ಬಹಿರಂಗಪಡಿಸಿದರು.

Story first published: Tuesday, July 4, 2023, 21:12 [IST]
Other articles published on Jul 4, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+