ವಿಂಬಲ್ಡನ್ 2023: 6ನೇ ದಿನ ಗೆದ್ದವರು, ಸೋತವರು ಯಾರು? ಅಲ್ಕರೇಜ್, ರೆಬಕಿನಾ 4ನೇ ಸುತ್ತಿಗೆ: ಜ್ವರೇವ್ ಔಟ್
ವಿಂಬಲ್ಡನ್ 2023ರ 6ನೇ ದಿನ ಕೂಡ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕಷ್ಟಿಯಾಗಿತ್ತು. ಹೋಲ್ಗರ್ ರೂನ್ ಮತ್ತು ಅಲೆಜಾಂಡ್ರೊ ಡೇವಿಡೋವಿಚ್ ಫೋಕಿನಾ ನಡುವಿನ ಪಂದ್ಯ ಎಚ್ಚರು ಪೈಪೋಟಿಯಿಂದ ಕೂಡಿತ್ತು ಎಂದರೆ ಇಬ್ಬರು ಕೂಡ ಸೋಲೊಪ್ಪಿಕೊಳ್ಳಲು ಸಿದ್ದರಿಲ್ಲ ಎನ್ನುವಂತೆ ಸೆಣೆಸಾಟ ನಡೆಸಿದರು. ಆದರೆ ಅಂತಿಮವಾಗಿ ಈ ಪಂದ್ಯದಲ್ಲಿ ರೂನ್ 6-3, 4-6, 3-6, 6-4, 7-6, 10-8 ಅಂತರದಿಂದ ಗೆಲುವು ಸಾಧಿಸಿದರು. ಐದನೇ ಸೆಟ್ ಟೈ-ಬ್ರೇಕ್‌ನಲ್ಲಿ 5-8 ರಿಂದ ಹಿಂದಿದ್ದರೂ ರೂನ್ ಬಳೀಕ ಅಮೋಘ ಆಟವಾಡುವ ಮೂಲಕ ಸತತ ಐದು ಪಾಯಿಂಟ್‌ಗಳನ್ನು ಗೆದ್ದು ಅದ್ಭುತ ಪುನರಾಗಮನವನ್ನು ಬರೆದರು. ಈ ಮೂಲಕ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.
ಮತ್ತೊಂದೆಡೆ ಕಾರ್ಲೋಸ್ ಅಲ್ಕರೇಜ್ ಅವರು ಸೆಂಟರ್ ಕೋರ್ಟ್‌ನಲ್ಲಿ ನಿಜೋಕರ್ ಜೆರಿ ವಿರುದ್ಧ ಸೆಣೆಸಾಟ ನಡೆಸಿದ್ದು ತೀವ್ರ ಪೈಪೋಟಿ ಎದುರಿಸಿದರು. 6-3, 6-7 (6-8), 6-3, 7-5 ರಿಂದ ಪಂದ್ಯವನ್ನು ಗೆದ್ದುಕೊಂಡರು ಕೂಡ ಈ ಗೆಲುವಿಗಾಗಿ ಸಾಕಷ್ಟು ಪರಿಶ್ರಮಪಡಬೇಕಾಯಿತು. ಈ ಮೂಲಕ ನಾಲ್ಕನೇ ಸುತ್ತಿನಲ್ಲಿ ಅಲ್ಕರೇಜ್ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಎದುರಿಸಲಿದ್ದಾರೆ.

ಇನ್ನು ಡೇನಿಯಲ್ ಮೆಡ್ವೆಡೆವ್ ಅವರಿಗೆ ಹಂಗೇರಿಯ ಮಾರ್ಟನ್ ಫುಕ್ಸೊವಿಕ್ಸ್ ಆರಂಭದಲ್ಲಿ ಹಿನ್ನಡೆಯುಂಟು ಮಾಡಿದರು. ಮೂರನೇ ಸುತ್ತಿನ ಪಂದ್ಯದ ಮೊದಲ ಸೆಟ್ ಮಾರ್ಟನ್ ಫುಕ್ಸೊವಿಕ್ಸ್ ಗೆದ್ದುಕೊಂಡರು. ಆದರೆ ಬಳಿಕ ಮಡ್ವೆಡೇವ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿ 4-6, 6-3, 6-4, 6-4 ಅಂತರದಿಂದ ಗೆಲುವಿನೊಂದಿಗೆ ಪಂದ್ಯವನ್ನು ಅಂತ್ಯಗೊಳಿಸಿದರು.
ಗ್ರೀಕ್ ಸ್ಟಾರ್ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಅವರು ಸರ್ಬಿಯಾದ ಲಾಸ್ಲೋ ಡಿಜೆರೆ ಅವರನ್ನು ಎದುರಿಸಿದ್ದು ಈ ಸಂದರ್ಭದಲ್ಲಿ 6-4, 7-6 (7-5), 6-4 ಅಂತರದಿಂದ ಕೋರ್ಟ್ 2 ರಲ್ಲಿ ಸಿಟ್ಸಿಪಾಸ್ ಗೆಲುವು ಸಾಧಿಸಿದರು. ಇನ್ನು 21ರ ಹರೆಯದ ಜಿರಿ ಲೆಹೆಕಾ ಅವರು ನಂ.16 ಶ್ರೇಯಾಂಕದ ಟಾಮಿ ಪಾಲ್ ಅವರನ್ನು 6-2, 7-6 (7-2), 6-7 (5-7), 6-7 (9-11), 6-2 ಅಂತರದಿಂದ ಮಣಿಸಿದರು. ಇನ್ನು ಕ್ರಿಸ್ಟೋಫರ್ ಯುಬ್ಯಾಂಕ್ಸ್ ಅವರು ಕ್ರಿಸ್ಟೋಫರ್ ಓ'ಕಾನ್ನೆಲ್ ಅವರನ್ನು 7-6 (7-5), 7-6 (7-3), 7-6 (7-2) ಸೋಲಿಸಿ 16ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.2 ಅರೀನಾ ಸಬಲೆಂಕಾ 32ರ ಘಟ್ಟದ ಪಂದ್ಯದಲ್ಲಿ ರಷ್ಯಾದ ಅನ್ನಾ ಬ್ಲಿಂಕೋವಾ ವಿರುದ್ಧ ಗೆಲುವು ಸಾಧಿಸಿದರು. ಕೋರ್ಟ್ 1ರಲ್ಲಿ ನಡೆದ ಪಂದ್ಯದಲ್ಲಿ ಬೆಲರೂಸಿಯನ್ ತಾರೆ 6-2, 6-3 ಅಂತರದಲ್ಲಿ ಜಯ ಸಾಧಿಸಿದರು ಗೆಲುವು ಸಾಧಿಸಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರು ಸರ್ಬಿಯಾದ ನತಾಲಿಜಾ ಸ್ಟೀವನೊವಿಕ್ ಅವರನ್ನು ಮಣಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ ಕಳೆದ ವರ್ಷದ ಮಹಿಳಾ ಸಿಂಗಲ್ಸ್ ರನ್ನರ್-ಅಪ್ ಓನ್ಸ್ ಜಬೇರ್ ಅವರ ಸವಾಲನ್ನು ಎದುರಿಸಬೇಕಿದೆ. ಇನ್ನು ಜಬೀರ್ ಅವರು ಕೆನಡಾದ ಬಿಯಾಂಕಾ ಆಂಡ್ರೆಸ್ಕು ಅವರನ್ನು 3-6, 6-3, 6-4 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾಡ್ ಮಯಾ ಅವರು ಸೊರಾನಾ ಸಿರ್ಸ್ಟಿಯಾ ಅವರನ್ನು 6-2, 6-2 ಸೆಟ್‌ಗಳಿಂದ ಮಣಿಸಿ ಚೊಚ್ಚಲ ವಿಂಬಲ್ಡನ್ ಆವೃತ್ತಿಯಲ್ಲಿ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಉಕ್ರೇನ್‌ನ ಮಾರ್ಟಾ ಕೊಸ್ಟ್ಯುಕ್ ಅವರು ಮ್ಯಾಡಿಸನ್ ಕೀಸ್ ವಿರುದ್ಧ 4-6, 1-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಇನ್ನು ಎಲೆನಾ ರೈಬಾಕಿನಾ ಕೂಡ ಸೆಂಟರ್ ಕೋರ್ಟ್‌ನಲ್ಲಿ ಕೇಟೀ ಬೌಲ್ಟರ್‌ರನ್ನು 6-1, 6-1 ಸೆಟ್‌ಗಳಿಂದ ಸುಲಭವಾಗಿ ಮಣಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications