Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wimbledon 2023, 4ನೇ ದಿನ: ಜ್ವರೇವ್, ರೆಬಾಕಿನ ಮೂರನೇ ಸುತ್ತಿಗೆ: ಪ್ರಿಡ್ಜ್, ರೂಡ್ ನಿರ್ಗಮನ

ವಿಂಬಲ್ಡನ್ 2023 ರ ಆವೃತ್ತಿಯಲ್ಲಿ 4ನೇ ದಿನ ಕೂಡ ಕೆಲ ಅದ್ಭುತ ಹೋರಾಟಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಪುರುಷರ ಸಿಂಗಲ್ಸ್ ವಿಭಾಗ ಸಾಕಷ್ಟು ಮನರಂಜನೆ ನೀಡಿದೆ. ಅಮೆರಿಕದ ಅಗ್ರ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಮತ್ತು ಫ್ರೆಂಚ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರೂಡ್ ಅವರು ಸ್ಪರ್ಧೆಯ 2ನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಇದು ವಿಶ್ವದ ಈ ಆಟಗಾರರ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟುಮಾಡಿದೆ.

ಹಾಲಿ ಚಾಂಪಿಯನ್ ಎಲೆನಾ ರೆಬಾಕಿನಾ ಅವರು ಫ್ರೆಂಚ್ ಆಟಗಾರ್ತಿ ಅಲೈಜ್ ಕಾರ್ನೆಟ್ ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ರೆಬಾಕಿನಾ ತನ್ನ ಮೊದಲ ಸೆಟ್‌ನಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ನಂತರ ಪಂದ್ಯದ ಎರಡನೇ ಸೆಟ್‌ನಲ್ಲಿ ಫ್ರೆಂಚ್ ಆಟಗಾರ್ತಿ ಕಾರ್ನೆಟ್ ಜಾರಿ ಬಿದ್ದು ಗಾಯಗೊಳ್ಳುವ ಮುನ್ನ ರೆಬಾಕಿನಾಗೆ ಕಠಿಣ ಸವಾಲೊಡ್ಡಿದರು. ಆದರೆ ಗಾಯದಿಂದಾಗಿ ಕಾರ್ನೆಟ್ ಹಿನ್ನಡೆ ಅನುಭವಿಸಿದ್ದು ರೆಬಾಕಿನಾ ನೇರ ಸೆಟ್‌ಗಳ ಗೆಲುವು ಸಾಧಿಸಿದ್ದಾರೆ.

Wimbledon 2023: Zverev, Rybakina won in second round: Day 4 highlights

ಮಿರ್ರಾ ಆಂಡ್ರೀವಾ ಅವರು ಗುರುವಾರ ಕ್ರೆಜ್‌ಸಿಕೋವಾ ಅವರನ್ನು ಸೋಲಿಸಿದ ನಂತರ ಓಪನ್ ಎರಾದಲ್ಲಿ ವಿಂಬಲ್ಡನ್‌ನ ಅರ್ಹತಾ ಸುತ್ತಿನ ಮೂರನೇ ಸ್ಥಾನವನ್ನು ತಲುಪಿದ ಮೂರನೇ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಿಮ್ ಕ್ಲಿಸ್ಟರ್ಸ್ ಮತ್ತು ಕೊಕೊ ಗೌಫ್ ಅವರು ಕ್ರೆಜ್‌ಸಿಕೋವಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಕಾರಣ ಆಂಡ್ರೀವಾ ಮೇಲುಗೈ ಸಾಧಿಸಿದರು.

ವಿಂಬಲ್ಡನ್‌ನಲ್ಲಿ ಇಂದು ಅಮೆರಿಕದ ತಾರೆಯರಿಗೆ ಮಿಶ್ರ ದಿನವಾಗಿತ್ತು. ಟೇಲರ್ ಫ್ರಿಟ್ಜ್ ಅವರನ್ನು ಸ್ವೀಡನ್‌ನ ಮೈಕೆಲ್ ಯೆಮರ್ ಮಣಿಸಿದರೆ 10 ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ 23 ಏಸ್‌ಗಳನ್ನು ಬಾರಿಸಿ 7-6 (11) 6-4 6-2 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು ಸ್ವಿಸ್ ಆಟಗಾರ ಡೊಮಿನಿಕ್ ಸ್ಟ್ರೈಕರ್ ವಿರುದ್ಧ ಎರಡನೇ ಸುತ್ತಿನಲ್ಲಿ ಈ ಅಮೋಘ ಗೆಲುವು ಸಾಧಿಸಿದ್ದಾರೆ. 10ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ ಸತತ ಮೂರನೇ ಬಾರಿಗೆ ಗ್ರಾಸ್‌ಕೋರ್ಟ್ ಪಂದ್ಯಾವಳಿಯ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಸ್ಥಿರ ಮತ್ತು ನಿಖರತೆಯಿಂದ ಸರ್ವ್ ಮಾಡಿದ ಅವರು ತಮ್ಮ ಮೊದಲ ಸರ್ವ್ 89% ಅಂಕಗಳನ್ನು ಗೆದ್ದುಕೊಂಡಿದ್ದಾರೆ.

ಮತ್ತೊಂದೆಡೆ ರಷ್ಯಾದ ತಾರೆ ಆಂಡ್ರೆ ರುಬ್ಲೆವ್ ತನ್ನ ಆರಂಭಿಕ ಸೆಟ್ ಕಳೆದುಕೊಂಡಿದ್ದರೂ ನಂತರ ಅಸ್ಲಾನ್ ಕರಾಟ್ಸೆವ್ ಅವರನ್ನು 6-7(4) 6-3 6-4 7-5 ಅಂತರದಿಂದ ಮಣಿಸಿದ್ದಾರೆ. ಇದು ರುಬ್ಲೆವ್ ಅವರ 50ನೇ ಗ್ರ್ಯಾಂಡ್ ಸ್ಲಾಮ್ ಗೆಲುವು ಎಂಬುದು ವಿಶೇಷ. ಈ ಮೂಲಕ ಮೂರನೇ ಸುತ್ತಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಇನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಮತ್ತು ಡಚ್ ಅರ್ಹತಾ ಆಟಗಾರ ಗಿಜ್ಸ್ ಬ್ರೌವರ್ ನಡುವಿನ ಮೊದಲ ಸರ್ವ್‌ಗಳ ಆಟವಾಗಿತ್ತು. ಈ ಮುಖಾಮುಖಿಯಲ್ಲಿ ಜ್ವೆರೆವ್ 6-4, 7-6(4), 7-6(5) ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. 19ನೇ ಸೀಡ್‌ನ ಆಟಗಾಋ ಜ್ವರೇವ್ ವಿಶ್ವದ 153ನೇ ಶ್ರೇಯಾಂಕದ ಆಟಗಾರನಿಂದ ಬಹಳ ಪೈಪೋಟಿಯನ್ನು ಎದುರಿಸಿದರು.

Story first published: Friday, July 7, 2023, 9:11 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+