Wimbledon 2024: ಲೊರೆಂಜೊ ಮುಸೆಟ್ಟಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್; 8ನೇ ಪ್ರಶಸ್ತಿ ಮೇಲೆ ಕಣ್ಣು!
ಜುಲೈ 13 ಶನಿವಾರ, 2024ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್‌ಗೆ ಸರ್ಬಿಯಾದ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಸ್ಫೋಟಕ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಕ್ ಇಟಲಿಯ 25ನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಇದರೊಂದಿಗೆ ನೊವಾಕ್ ಜೊಕೊವಿಕ್ ತಮ್ಮ 8ನೇ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ. ಭಾನುವಾರ ನಡೆಯಲಿರುವ ವಿಂಬಲ್ಡನ್ ಫೈನಲ್‌ನಲ್ಲಿ ಜೊಕೊವಿಕ್, ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.

ಅಲ್ಕರಾಜ್ ಸೆಮಿ-ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ವಿಂಬಲ್ಡನ್ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಭಾನುವಾರ ಮತ್ತೊಂದು ರಣ ರೋಚಕ ಪಂದ್ಯ ನಡೆಯಲಿದ್ದು, ಜೊಕೊವಿಕ್ ಅವರು ಕಾರ್ಲೋಸ್ ವಿರುದ್ಧ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಸೆಮಿಫೈನಲ್ ಪಂದ್ಯ ಹೇಗಿತ್ತು?
2ನೇ ಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಕ್ ಅವರು ಸೆಮಿ-ಫೈನಲ್‌ನಲ್ಲಿ ಲೊರೆಂಜೊ ಮುಸೆಟ್ಟಿ ಅವರನ್ನು ಸೋಲಿಸಿದ್ದಾರೆ. ಜೊಕೊವಿಕ್ ಲೊರೆಂಜೊ ಮುಸೆಟ್ಟಿ ವಿರುದ್ಧ 6-4, 7-6(2), 6-4 ಸೆಟ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.
ಈ ಪಂದ್ಯವು 2 ಗಂಟೆ 48 ನಿಮಿಷಗಳ ಕಾಲ ನಡೆಯಿತು. ಇದಾದ ನಂತರ ಪ್ರಬಲ ಪೈಪೋಟಿಯಲ್ಲಿ ಗೆದ್ದ ಜೊಕೊವಿಕ್ ತಮ್ಮ 10ನೇ ವಿಂಬಲ್ಡನ್ ಫೈನಲ್ ತಲುಪಿದ್ದಾರೆ.
ಸೋಲಿನ ಸೇಡಿಗೆ ಜೊಕೊವಿಕ್ ರೆಡಿ
ಕಳೆದ ವರ್ಷ 2023ರ ವಿಂಬಲ್ಡನ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರು ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಐದು ಸೆಟ್‌ಗಳಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದರು. ಈ ವರ್ಷ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಗೆದ್ದರೆ, ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಿಸಿಲಿದ್ದಾರೆ.
37 ವರ್ಷದ ಆಟಗಾರನಿಗೆ ವಿಂಬಲ್ಡನ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಚಾಂಪಿಯನ್ ಆಗುವ ಉತ್ತಮ ಅವಕಾಶವಿದೆ. ಇದಲ್ಲದೆ, ಜೊಕೊವಿಕ್ ಅವರು ಫೈನಲ್ ಗೆಲ್ಲುವ ಮೂಲಕ ದಾಖಲೆಯ ಎಂಟು ವಿಂಬಲ್ಡನ್ ಪ್ರಶಸ್ತಿಗಳೊಂದಿಗೆ ರೋಜರ್ ಫೆಡರರ್ ಅವರನ್ನು ಸರಿಗಟ್ಟಲಿದ್ದಾರೆ.
ಇನ್ನೊಂದೆಡೆ ಕಾರ್ಲೋಸ್ ಅಲ್ಕರಾಜ್ ಅವರು ಸತತ ಎರಡನೇ ವಿಂಬಲ್ಡನ್ ಪ್ರಶಸ್ತಿ ಗೆಲ್ಲಲು ಸಜ್ಜಾಗಿದ್ದಾರೆ. ಈ ಬಾರಿ ನೊವಾಕ್ ಜೊಕೊವಿಕ್ ಅವರಿಗೆ ಸೋಲುಣಿಸಲು ತಯಾರಿ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications