ವಿಂಬಲ್ಡನ್ ನಲ್ಲಿ ವಿಕ್ರಮ : ಭಾರತದ ದಿವಿಜ್ ಡಬಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶ!

ಲಂಡನ್, ಜುಲೈ 10: ಭಾರತದ ಡಬಲ್ಸ್ ಆಟಗಾರ ದಿವಿಜ್ ಶರಣ್ ಅವರು ಇದೇ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಮೆಂಟಿನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ.
ಅಲ್ಲದೇ, ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಟೂರ್ನಮೆಂಟ್ ವೊಮ್ದರಲ್ಲಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿ, ವೃತ್ತಿಬದುಕಿನಲ್ಲಿ ಮಹತ್ವದ ಮೈಲಿಗಲ್ಲು ದಾಟಿದ್ದಾರೆ.
ನ್ಯೂಜಿಲೆಂಡಿನ ಅರ್ಟೆಂ ಸಿಟಾಕ್ ಹಾಗೂ ದಿವಿಜ್ ಶರಣ್ ಜೋಡಿ, ವಿಂಬಲ್ಡನ್ ಡಬಲ್ಸ್ ಟೂರ್ನಮೆಂಟ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಶರಣ್ ಹಾಗೂ ಸಿಟಾಕ್ ಜೋಡಿ 1-6, 6-7(3), 6-4, 6-4, 6-4 ಸೆಟ್‌ಗಳಲ್ಲಿ ಇಸ್ರೇಲ್-ಪೊಲೆಂಡ್‌ನ ಜೋನಾಥನ್ ಎಲ್ರಿಚ್ ಹಾಗೂ ಮರ್ಸಿನ್ ಮಟ್ಕೊಸ್ಕಿ ಅವರನ್ನು ಸೋಲಿಸಿತು.
ಈ ವರ್ಷದ ಆಸ್ಟ್ರೇಲಿಯನ್ ಓಪನ್, 2017ರ ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್‌ನಲ್ಲಿ (2013) ಮೂರನೇ ಸುತ್ತು ತಲುಪಿದ್ದು ಇಲ್ಲಿ ತನಕದ ಶರಣ್ ಸಾಧನೆಯಾಗಿತ್ತು.
ಆದರೆ, ವಿಂಬಲ್ಡನ್ ನಲ್ಲಿ ಸತತ ಮೂರು ಗಂಟೆ 50 ನಿಮಿಷಗಳ ಹೋರಾಟದಲ್ಲಿ 5 ಸೆಟ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದ್ದಾರೆ.
ಶರಣ್ ಹಾಗೂ ಸಿಟಾಕ್ ಅವರು ಕ್ವಾರ್ಟರ್ ಫೈನಲಿನಲ್ಲಿ ಏಳನೇ ಶ್ರೇಯಾಂಕದ ಅಮೆರಿಕದ ಜೋಡಿ ಮೈಕ್ ಬ್ರಿಯಾನ್ ಹಾಗೂ ಜಾಕ್ ಸಾಕ್ ವಿರುದ್ಧ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications