Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ 2023: ಚೀನಾದ ಝು ಲಿನ್ ಮಣಿಸಿದ ಈಗಾ ಸ್ವಿಟೆಕ್ ಎರಡನೇ ಸುತ್ತಿಗೆ ಲಗ್ಗೆ

ವಿಶ್ವದ ನಂಬರ್ ಒನ್ ಆಟಗಾರ್ತಿ ಇಗಾ ಸ್ವಿಟೆಕ್ ತನ್ನ 2023ರ ವಿಂಬಲ್ಡನ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಚೀನಾದ ಝು ಲಿನ್ ವಿರುದ್ಧ ಕಣಕ್ಕಿಳಿದಿದ್ದ ಸ್ವಿಯಾಟಿಕ್ ಅದ್ಭುತ ಜಯ ಸಾಧಿಸಿದರು. ಲಿನ್ ಅವರನ್ನು 6-1, 6-3 ನೇರ ಸೆಟ್‌ಗಳಿಂದ ಸೋಲಿಸಿ ವಿಂಬಲ್ಡನ್‌ನ 2ನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

22 ವರ್ಷದ ಪೋಲಿಷ್ ಆಟಗಾರ್ತಿ ಇತ್ತೀಚೆಗೆ ತನ್ನ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ಈಗ ಹುಲ್ಲಿನ ಅಂಗಳದಲ್ಲಿ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅದ್ಭಿತ ಪ್ರದರ್ಶನದ ಹೊರತಾಗಿಯೂ ಸ್ವಿಟೆಕ್ ಹಿಂದಿನ ವರ್ಷಗಳಲ್ಲಿ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿಲ್ಲ.

Wimbledon: Iga Swiatek win against Chinas Zhu Lin in straight sets enter round 2

ವಿಂಬಲ್ಡನ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಸ್ವಿಟೆಕ್ ಹುಲ್ಲಿನ ಅಂಗಳದಲ್ಲಿ ಅತ್ಯುತ್ತಮ ಚಲನೆಯನ್ನು ಪ್ರದರ್ಶಿಸಿದರು. ಕಳೆದ ಶುಕ್ರವಾರ ಬ್ಯಾಡ್ ಹಾಂಬರ್ಗ್ ಸೆಮಿಫೈನಲ್‌ನಲ್ಲಿ ಅನಾರೋಗ್ಯದಿಂದ ಸ್ವಿಟೆಕ್ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡಿತ್ತು. ಆದರೆ ಸಂಪೂರ್ಣ ಚೆತರಿಕೆ ಕಂಡಿರುವ ಸ್ವಿಟೆಕ್ ವಿಂಬಲ್ಡನ್‌ನಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ.

ತನ್ನ ಅದ್ಭುತ ಗೆಲುವಿನ ನಂತರ ಸ್ವಿಟೆಕ್ ತನ್ನ ಪ್ರದರ್ಶನದ ಬಗ್ಗೆ ತನ್ನ ಆತ್ಮವಿಶ್ವಾಸ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. 2023ರ ರೋಲ್ಯಾಂಡ್ ಗ್ಯಾರೋಸ್ ಗೆದ್ದ ನಂತರ ಇದೀಗ ವಿಂಬಲ್ಡನ್ ಎತ್ತಲು ಸಿದ್ದತೆ ನಡೆಸಬಹುದು ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

"ನಾನು ನಿಜವಾಗಿಯೂ ಆತ್ಮವಿಶ್ವಾಸವನ್ನು ಹೊಂದಿದ್ದೇನೆ. ನಾನು ತುಂಬಾ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬ ಭಾವನೆ ಮೂಡಿಸಿತು ಈ ಗೆಲುವು. ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ನನ್ನ ಎರಡನೇ ಗ್ರ್ಯಾಂಡ್‌ಸ್ಲಾಮ್ ಆಗಿತ್ತು ಅದು ಬಹಳ ದೊಡ್ಡ ಸಂಭ್ರಮವಾಗಿತ್ತು. ಈ ಸಂದರ್ಭದಲ್ಲಿ ನಾನು ಗೆಲುವನ್ನು ಅನುಭವಿಸಬಹುದು ಮತ್ತು ಶಾಂತವಾಗಿ ಮತ್ತೆ ಕಾರ್ಯದತ್ತ ಮರಳಬಹುದು" ಎಂದಿದ್ದಾರೆ ಸ್ವಿಟೆಕ್.

Story first published: Monday, July 3, 2023, 20:55 [IST]
Other articles published on Jul 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+