For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್: ಕ್ವಾರ್ಟರ್ ಫೈನಲ್‌ಗೆ ಅಂತ್ಯವಾಯಿತು ಟೆನ್ನಿಸ್ ದಿಗ್ಗಜ ಫೆಡರರ್ ಹೋರಾಟ

ಲಿ

Wimbledon: Roger Federers Wimbledon 2021 campaign came to an end in the quarterfinals.

ಟೆನ್ನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ಈ ಬಾರಿಯ ವಿಂಬಲ್ಡನ್‌ನಲ್ಲಿ ತಮ್ಮ ಹೋರಾಟವನ್ನು ಕ್ವಾರ್ಟರ್‌ಫೈನಲ್‌ಗೆ ಅಂತ್ಯಗೊಳಿಸಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಫೆಡರರ್ ಪೋಲಾಂಡ್‌ನ 24ರ ಹರೆಯದ ಹ್ಯೂಬರ್ಟ್ ಹರ್ಕಜ್ ವಿರುದ್ಧ ಸೋಲನ್ನು ಕಂಡರು. ಈ ಮೂಲಕ ಪ್ರತಿಷ್ಟಿತ ಟೂರ್ನಿಯಿಂದ ಹೊರ ಬಿದ್ದರು.

20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ರೋಜರ್ ಫೆಡರರ್‌ವಿರುದ್ಧ ಹ್ಯೂಬರ್ಟ್ ಹರ್ಕಜ್ ಅವಿಸ್ಮರಣೀಯ ಗೆಲುವನ್ನು ಸಾಧಿಸಿದರು. ಆದರೆ ಫೆಡರರ್ ಅವರ ಈ ಸೋಲು ವಿಶ್ವಾದ್ಯಂತ ಇರುವ ಫೆಡರರ್ ಅವರ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿದೆ. 3-6, 6-7, 0-6 ಅಂತರದಿಂದ ನೇರ ಸೆಟ್‌ಗಳಲ್ಲಿ ಫೆಡರರ್ ಸೋಲು ಕಂಡಿದ್ದರು. ಎರಡು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಈ ಫಲಿತಾಂಶ ಹೊರಬಿದ್ದಿತ್ತು.

ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರ ನೆಚ್ಚಿನ ಗ್ರ್ಯಾಂಡ್‌ಸ್ಯಾಮ್‌ ಆದ ವಿಂಬಲ್ಡನ್‌ನಲ್ಲಿ ಇದು ಅವರ ಕೊನೆಯ ಪಂದ್ಯ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ. ಖ್ಯಾತ ಸೆಂಟರ್ ಕೋರ್ಟ್‌ನಲ್ಲಿ ಈ ಪಂದ್ಯ ನಡೆದಿದೆ.

ಈ ಪಂದ್ಯದಲ್ಲಿ ರೋಜನರ್ ಫೆಡರರ್ ಆರಂಭದಿಂದಲೇ ಫಾರ್ಮ್‌ನಲ್ಲಿ ಇಲ್ಲದಿರುವುದು ಸ್ಪಷ್ಟವಾಗಿತ್ತು. ಅಂತಿಮವಾಗಿ ಫೆಡರರ್ ಸೋಲಿನ ಮೂಲಕ ಈ ಹೋರಾಟ ಅಂತ್ಯವಾಯಿತು. ಕಳೆದ ವರ್ಷ ಕೊರೊನಾವೈರಸ್ ಕಾರಣದಿಂದಾಗಿ ವಿಂಬಲ್ಡನ್ ನಡೆದಿರಲಿಲ್ಲ. 2017ರಲ್ಲಿ ಫೆಡರರ್ ಕೊನೆಯ ಬಾರಿಗೆ ವಿಂಬಲ್ಡನ್ ಗ್ರ್ಯಾಂಡ್‌ ಸ್ಲ್ಯಾಮ್‌ಅನ್ನು ಮುಡಿಗೇರಿಸಿಕೊಂಡಿದ್ದರು.

ಇನ್ನು ಈ ಬಾರಿಯ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯುವ ಮೂಲಕ ಟೆನ್ನಿಸ್ ಓಪನ್ ಯುಗದಲ್ಲಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ ಹಿರಿಯ ಆಟಗಾರ ಎಎಂಬ ದಾಖಲೆಯನ್ನು ಫೆಡಡರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದರು. 1974ರಲ್ಲಿ ಕೆನ್ ರೋಸ್‌ವೆಲ್ ಹೆಸರಿನಲ್ಲಿ ಈ ಹಿಂದೆ ಈ ದಾಖಲೆಯಿತ್ತು. 39 ವರ್ಷ 224 ದಿನಗಳಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ರೋಜರ್ ಫೆಡರರ್ ಈ ಸಾಧನೆಯನ್ನು 39 ವರ್ಷ 337 ದಿನಗಳಲ್ಲಿ ಮಾಡಿದ್ದಾರೆ.

Story first published: Thursday, July 8, 2021, 9:15 [IST]
Other articles published on Jul 8, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+