Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೀಕ್ಷಕರಿಲ್ಲದಿದ್ದರೂ ವಿಂಬಲ್ಡನ್ ಚಾಂಪಿಯನ್‌ಷಿಪ್‌ ನಡೆಸಲು ಸಿದ್ಧತೆ

Wimbledon set to return in 2021 even no spectators

ಲಂಡನ್: ಕೊರೊನಾವೈರಸ್‌ನಿಂದಾಗಿ ಏರುಪೇರಾಗಿದ್ದ ಟೆನಿಸ್ ಟೂರ್ನಿಗಳು ಮತ್ತೆ ಸರಿದಾರಿಗೆ ಬರುವುದರಲ್ಲಿದೆ. ವಿಂಬಲ್ಡನ್ ಟೆನಿಸ್ ಟೂರ್ನಿ ಕೂಡ ಮುಂದಿನ ವರ್ಷ ಆರಂಭಗೊಳ್ಳುವುದರಲ್ಲಿದೆ. ಒಂದು ವೇಳೆ ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿ ನಡೆದರೆ ವೀಕ್ಷಕರಿಲ್ಲದ ಸ್ಟೇಡಿಯಂನಲ್ಲಿ ನಡೆಸಲು ಯೋಚಿಸುತ್ತಿದ್ದೇವೆ ಎಂದು ಆಯೋಜಕರು ಶುಕ್ರವಾರ (ಅಕ್ಟೋಬರ್ 16) ತಿಳಿಸಿದ್ದಾರೆ.

ಎರಡನೇ ಮಹಾಯುದ್ಧದ ವೇಳೆ ವಿಂಬಲ್ಡನ್ ರದ್ದಾಗಿತ್ತು. ಅದಾಗಿ ವಿಂಬಲ್ಡನ್ ಇತಿಹಾಸದಲ್ಲಿ ಟೂರ್ನಿ ರದ್ದಾಗಿದ್ದೇ ಇಲ್ಲ. ಆದರೆ ಕೊರನಾವೈರಸ್ ಕಾರಣದಿಂದಾಗಿ ಈ ವರ್ಷ ನಡೆಯಬೇಕಿದ್ದ ವಿಂಬಲ್ಡನ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಹುಲ್ಲು ಹಾಸಿನ ಕೋರ್ಟ್‌ನಲ್ಲಿ ನಡೆಯುವ ಈ ಚಾಂಪಿಯನ್ಸ್‌ಶಿಪ್ ಅನ್ನು ಮುಂದಿನ ವರ್ಷ ಆರಂಭದಲ್ಲಿ ನಡೆಸುವ ಸಾಧ್ಯತೆಯಿದೆ.

ಕೋವಿಡ್-19ನಿಂದಾಗಿ ಬಹುತೇಕ ಕ್ರೀಡಾಸ್ಪರ್ಧೆಗಳಿಗೆ ತೊಂದರೆಯಾಗಿತ್ತು. ಅದರಲ್ಲೂ ಟೆನಿಸ್ ಟೂರ್ನಿಗೆ ಕೊರೊನಾ ಇನ್ನೂ ಸಮಸ್ಯೆ ತಂದಿತ್ತು. ಕೊರೊನಾ ಕಾರಣದಿಂದಾಗಿ ಯುಎಸ್ ಓಪನ್ ಖಾಲಿ ಮೈದಾನದಲ್ಲಿ ನಡೆದರೆ, ಫ್ರೆಂಚ್ ಓಪನ್‌ ಟೂರ್ನಿ ಕೇವಲ 1000 ವೀಕ್ಷಕರ ಸಮ್ಮುಖದಲ್ಲಿ ನಡೆದಿತ್ತು.

ಅದೂ ಫ್ರೆಂಚ್ ಟೂರ್ನಿಯನ್ನು ಮೇನಿಂದ ಸೆಪ್ಟೆಂಬರ್ ನಂತರ ಮುಂದೂಡಿದ್ದರಿಂದ ಸ್ವಲ್ಪ ಸಂಖ್ಯೆಯ ವೀಕ್ಷಕರಾದರೂ ಆಟಗಾರರಿಗೆ ಸ್ಫೂರ್ತಿ ತುಂಬಲು ಸಾಧ್ಯವಾಯಿತು. ವಿಂಬಲ್ಡನ್ ಕೂಡ ಒಂದೋ ವೀಕ್ಷಕರಿಲ್ಲದೆ ಅಥವಾ ಕಡಿಮೆ ಸಂಖ್ಯೆಯ ವೀಕ್ಷಕರ ಉಪಸ್ಥಿತಿಯಲ್ಲಿ ನಡೆಯಲಿದೆ.

Story first published: Saturday, October 17, 2020, 10:45 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+