Wimbledon 2023: ಸೆಂಟರ್ ಕೋರ್ಟ್‌ನಲ್ಲಿ ರೋಜರ್ ಫೆಡರರ್ ವೃತ್ತಿಜೀವನ ಸಂಭ್ರಮಿಸಲಿದೆ ವಿಂಬಲ್ಡನ್
2023ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಎರಡನೇ ದಿನವಾದ ಮಂಗಳವಾರ, ಜುಲೈ 4ರಂದು ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಅದ್ಧೂರಿ ಸಮಾರಂಭದೊಂದಿಗೆ ಖ್ಯಾತ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರ ಸಾಧನೆಗಳನ್ನು ಆಚರಿಸಲಾಗುತ್ತಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ ಸ್ವಿಟ್ಜರ್ಲ್ಯಾಂಡ್ ತಾರೆ ರೋಜರ್ ಫೆಡರರ್ ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಇದೇ ವೇಳೆ ಕೆಲವು ಶ್ರೇಷ್ಠ ವಿಜಯಗಳ ದೃಶ್ಯಗಳನ್ನು ಮೆಲುಕು ಹಾಕಲಿದ್ದಾರೆ ಮತ್ತು ಆಟದ ಪ್ರಾರಂಭದ ಮೊದಲು ಫೆಡರರ್ ಅವರನ್ನು ವಿಂಬಲ್ಡನ್ ಗೌರವಿಸಲಾಗುತ್ತದೆ.
"ನಾಳೆ (ಮಂಗಳವಾರ) ರೋಜರ್ ಫೆಡರರ್ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಲು ನನಗೆ ಅತೀವ ಸಂತೋಷವಾಗಿದೆ. ವಿಂಬಲ್ಡನ್‌ನಲ್ಲಿ ಅತ್ಯಂತ ಹೆಚ್ಚು ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ವ್ಯಕ್ತಿಯನ್ನು ಆಟ ಪ್ರಾರಂಭವಾಗುವ ಮೊದಲು ಸೆಂಟರ್ ಕೋರ್ಟ್‌ನಲ್ಲಿ ಗೌರವಿಸಲು ನಾವು ವಿಶೇಷ ಸಂಭ್ರಮಾಚರಣೆಯನ್ನು ಹೊಂದಿದ್ದೇವೆ," ಎಂದು ಆಲ್ ಇಂಗ್ಲೆಂಡ್ ಕ್ಲಬ್ ಮುಖ್ಯಸ್ಥ ಕಾರ್ಯನಿರ್ವಾಹಕಿ ಸ್ಯಾಲಿ ಬೋಲ್ಟನ್ ಸೋಮವಾರ ಹೇಳಿದರು.

ರೋಜರ್ ಫೆಡರರ್ ಅವರ ಸಾಧನೆಗಳನ್ನು ಆಚರಿಸಲು ಮತ್ತು ಎಲ್ಲಾ ನೆನಪುಗಳಿಗೆ ಧನ್ಯವಾದ ಹೇಳಲು ನಮಗೆ ಒಂದು ಸಮಯ ಸಿಕ್ಕಿದೆ ಎಂದು ಸ್ಯಾಲಿ ಬೋಲ್ಟನ್ ತಿಳಿಸಿದರು.
41 ವರ್ಷದ ರೋಜರ್ ಫೆಡರರ್ ಲಂಡನ್‌ನಲ್ಲಿ ನಡೆದ ಲೇವರ್ ಕಪ್‌ನಲ್ಲಿ ಭಾವನಾತ್ಮಕವಾಗಿ ತಲೆಬಾಗಿದ ನಂತರ, ಹೆಚ್ಚಾಗಿ ಟೆನಿಸ್‌ನಿಂದ ದೂರವಿದ್ದರು. ಆದರೆ ಕಳೆದ ತಿಂಗಳ ಹಿಂದೆ ಜರ್ಮನಿಯ ಹಾಲೆಯಲ್ಲಿ ನಡೆದ ಗ್ರಾಸ್-ಕೋರ್ಟ್ ಟೂರ್ನಿಯಲ್ಲಿ ಇದೇ ರೀತಿ ಗೌರವಿಸಲಾಗಿತ್ತು.
ಇನ್ನು ಕೆಲವು ತಿಂಗಳ ಹಿಂದೆ ಯುಎಸ್ ಓಪನ್‌ನಲ್ಲಿ ನಿವೃತ್ತಿ ಘೋಷಿಸಿದ 41 ವರ್ಷದ ಸೆರೆನಾ ವಿಲಿಯಮ್ಸ್ ಅವರನ್ನು ಕೂಡ ವಿಂಬಲ್ಡನ್‌ಗೆ ಆಹ್ವಾನಿಸಲಾಗಿತ್ತು. ಆದರೆ ಅವರಿಗೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಬರುವುದಿಲ್ಲ ಎಂದು ಸ್ಯಾಲಿ ಬೋಲ್ಟನ್ ಬಹಿರಂಗಪಡಿಸಿದರು.
"ಈ ವರ್ಷ ನಾವು ಸೆರೆನಾ ವಿಲಿಯಮ್ಸ್ ಅವರನ್ನು ಆಹ್ವಾನಿಸಿದ್ದೇವು. ಆದರೆ ಅವರು ಗರ್ಭಿಣಿಯಾಗಿರುವ ಕಾರಣ, ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಅವರು ಮುಂದಿನ ವರ್ಷ ಪಾಲ್ಗೊಳ್ಳುವುದನ್ನು ನಾವು ನೋಡಬಹುದು ಎಂದು ನಾವು ಭಾವಿಸುತ್ತೇವೆ," ಎಂದು ಸ್ಯಾಲಿ ಬೋಲ್ಟನ್ ಹೇಳಿದರು.
ಈ ಬಾರಿಯ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಎಂಟು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್ ಫೆಡರರ್ ಅವರ ಪುರುಷರ ದಾಖಲೆಯನ್ನು ಸರಿಗಟ್ಟಲು ಮತ್ತು ತಮ್ಮ 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಲು ಸರ್ಬಿಯಾದ ನೊವಾಕ್ ಜೊಕೊವಿಕ್ ಅತ್ಯಂತ ನೆಚ್ಚಿನ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications