Wimbledon Tennis: ಸೆಮಿಫೈನಲ್‌ನಲ್ಲಿ ಅರೀನಾ ಸಬಲೆಂಕಾಗೆ ಆಘಾತ: ಫೈನಲ್‌ನಲ್ಲಿ ಅಮಂಡಾ vs ಇಗಾ ಹೋರಾಟ
ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಹೋರಾಟದಲ್ಲಿ ಅಚ್ಚರಿಯ ಫಲಿತಾಂಶ ಒಂದು ಬಂದಿದೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ಅರೀನಾ ಸಬಲೆಂಕಾ ಅವರನ್ನು ಅಮೆರಿಕದ ಅಮಂಡಾ ಅನಿಸಿಮೊವಾ ಮಣಿಸಿ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಇಗಾ ಸ್ವಿಟೆಕ್ ಜಯ ಸಾಧಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ ಹೋರಾಟದಲ್ಲಿ ಅಮಂಡಾ ಅನಿಸಿಮೊವಾ ಹಾಗೂ ಇಗಾ ಸ್ವಿಟೆಕ್ ನಡುವೆ ಕಾದಾಟ ನಡೆಯಲಿದೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಅಮಂಡಾ ಅನಿಸಿಮೊವಾ 6-4, 4-6, 6-4 ರಿಂದ ಬೆಲಾರಸ್‌ನ ಅರೀನಾ ಸಬಲೆಂಕಾ ಅವರನ್ನು2 ಗಂಟೆ 37 ನಿಮಿಷದ ಹೋರಾಟದಲ್ಲಿ ಸೋಲಿಸಿದರು. ಈ ಮೂಲಕ ಅಮೆರಿದಕದ ಅಮಂಡಾ ಅನಿಸಿಮೊವಾ ಅವರು ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಗ್ರ್ಯಾಂನ್ ಸ್ಲ್ಯಾಮ್ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅರೀನಾ ಸಬಲೆಂಕಾ ಆಸ್ಟ್ರೇಲಿಯಾ ಓಪನ್‌ನಲ್ಲಿ 2023, 2024ರಲ್ಲಿ, ಯುಎಸ್ ಓಪನ್ 2024ರಲ್ಲಿ ಚಾಂಪಿಯನ್ ಆಗಿದ್ದರು. ಇವರು ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್‌ನಿಂದ ಮೂರನೇ ಬಾರಿಗೆ ನಿರ್ಗಮಿಸುತ್ತಿದ್ದಾರೆ.

ಈ ಮೂಲಕ ಮಹಿಳಾ ಸಿಂಗಲ್ಸ್‌ಗೆ ನೂತನ ಚಾಂಪಿಯನ್ ಸಿಗಲಿದ್ದಾರೆ. ಅಮಂಡಾ ಅನಿಸಿಮೊವಾ ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು. ಆದರೆ ವಿಶ್ವದ ನಂಬರ್ ಒನ್ ಆಟಗಾರ್ತಿ ಸಬಲೆಂಕಾ ಅವರು ಜಯ ಸಾಧಿಸಿದರು. ಮೂರನೇ ಹಾಗೂ ಅಂತಿಮ ಸೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ವೇಳೆ ಅಮಂಡಾ ಅನಿಸಿಮೊವಾ ಅಮೋಘ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದರು.
ಮೊದಲ ಪ್ರಶಸ್ತಿ ಕನಸು
ಪೋಲೆಂಡ್‌ನ ಇಗಾ ಸ್ವಿಟೆಕ್ 6-2, 6-0ಯಿಂದ ಸ್ವಿಟ್ಜರ್‌ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಅವರನ್ನು 1 ಗಂಟೆ 12 ನಿಮಿಷದ ಹೋರಾಟದಲ್ಲಿ ಮಣಿಸಿದರು. ಇಗಾ ಸ್ವಿಟೆಕ್ ಆರನೇ ಗ್ರ್ಯಾನ್ ಸ್ಲ್ಯಾಮ್ ಹತ್ತಿರ ಬಂದು ನಿಂತಿದ್ದಾರೆ. ಅಲ್ಲದೆ ಮೊದಲ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದಾರೆ. ಇನ್ನು ಸ್ವಿಟೆಕ್ ಫ್ರೆಂಚ್ ಓಪನ್‌ನಲ್ಲಿ 2020, 2022, 2023, 2024ರಲ್ಲಿ, ಯುಎಸ್ ಓಪನ್‌ನಲ್ಲಿ 2022ರಲ್ಲಿ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಪಡೆದಿದ್ದರು.
ಪುರುಷರ ಸಿಂಗಲ್ಸ್ ಸೆಮೀಸ್ ಹೋರಾಟ
ಇಂದು ನಡೆಯಲಿರುವ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಕಾರ್ಲೋಸ್ ಅಲ್ಕರಾಜ್, ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಕಾದಾಟ ನಡೆಸಲಿದ್ದಾರೆ. 22 ವರ್ಷದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ತಮ್ಮ ಮೂರನೇ ವಿಂಬಲ್ಡನ್ ಹಾಗೂ ಆರನೇ ಗ್ರ್ಯಾನ್ ಸ್ಲ್ಯಾಮ್ ಕನಸಿನಲ್ಲಿದ್ದಾರೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ 1 ಆಟಗಾರ ನೋವಾಕ್ ಜೋಕೊವಿಚ್, ಮೂರು ಗ್ರ್ಯಾನ್ ಸ್ಲ್ಯಾಮ್ ವಿಜೇತ ಇಟಲಿಯ ಜಾನಿಕ್ ದಿ ಸಿನ್ನರ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications