ವಿಶ್ವ ನಂ.2 ಸಿಮೋನಾ ಹಾಲೆಪ್‌ಗೆ ಕೊರೊನಾವೈರಸ್ ಪಾಸಿಟಿವ್

ರೋಮ್: ವಿಶ್ವ ನಂ.2 ಟೆನಿಸ್ ಆಟಗಾರ್ತಿ ಸಿಮೋನಾ ಹಾಲೆಪ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸೋಂಕಿಗೀಡಾಗಿರುವ ಸಿಮೋನಾ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಕೋವಿಡ್ 19 ಸೋಂಕಿಗೆ ಸಂಬಂಧಿಸಿ ಕೆಲವೇ ರೋಗ ಲಕ್ಷಣಗಳಿದ್ದವು.
ತನಗೆ ಕೊರೊನಾ ಸೋಂಕು ತಗುಲಿರುವ ವಿಚಾರವನ್ನು ಸಿಮೋನಾ ಟ್ವೀಟ್ ಮೂಲಕ ತಿಳಿಸಿದ್ದಾರೆ. 'ಎಲ್ಲರಿಗೂ ಹಾಯ್, ನನಗೆ ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ತಿಳಿಸಲು ಬಯಸುತ್ತೇನೆ. ನಾನು ಮನೆಯಲ್ಲಿ ಸೆಲ್ಫ್ ಐಸೊಲೇಶನ್‌ನಲ್ಲಿದ್ದೇನೆ. ಚೇತರಿಸಿಕೊಳ್ಳುತ್ತಿದ್ದೇನೆ. ರೋಗದ ಕೆಲ ಲಕ್ಷಣಗಳಷ್ಟೇ ಇತ್ತು,' ಎಂದು ಸಿಮೋನಾ ಬರೆದುಕೊಂಡಿದ್ದಾರೆ.
29ರ ಹರೆಯದ ಸಿಮೋನಾ ಮಾಜಿ ವಿಶ್ವ ನಂ.1 ಆಟಗಾರ್ತಿ. ಕೊರೊನಾ ಪಿಡುಗಿನ ಕಾರಣ ಆರೋಗ್ಯ ಮುನ್ನೆಚ್ಚರಿಕಾ ಕ್ರಮವಾಗಿ ನ್ಯೂಯಾರ್ಕ್‌ನಲ್ಲಿ ನಡೆದಿದ್ದ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಪಾಲ್ಗೊಂಡಿರಲಿಲ್ಲ.
2018ರಲ್ಲಿ ಹಾಲೆಪ್ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು. ವಿಮೆನ್ಸ್ ಟೂರ್ ಅಸೋಸಿಯೇಶನ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನವೆಂಬರ್ 9ರಿಂದ ಆರಂಭಗೊಳ್ಳಲಿದೆ. ಆದರೆ ಹಾಲೆಪ್ ಇದರಲ್ಲಿ ಭಾಗವಹಿಸೋ ಸಾಧ್ಯತೆ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications