ಯುಎಸ್ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.2 ಸಿಮೋನಾ ಹಾಲೆಪ್

ಬುಚಾರೆಸ್ಟ್, ಆಗಸ್ಟ್ 17: ವಿಶ್ವ ನಂ.2 ಆಟಗಾರ್ತಿ, ರೊಮೇನಿಯಾದ ಸಿಮೋನಾ ಹಾಲೆಪ್ ಪ್ರತಿಷ್ಠಿತ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಕೊರೊನಾವೈರಸ್ ಭೀತಿಯಿಂದಾಗಿ ತಾನು ಟೂರ್ನಿಯಿಂದ ದೂರ ಇರಲು ನಿರ್ಧರಿಸಿರುವುದಾಗಿ ಹಾಲೆಪ್ ಸೋಮವಾರ (ಆಗಸ್ಟ್ 17) ತಿಳಿಸಿದ್ದಾರೆ.
'ಈಗಿನ ಈ ಕೊರೊನಾ ವೇಳೆಯ ವಿಭಿನ್ನ ಸಂದರ್ಭ, ವಾಸ್ತವತೆಯನ್ನು ಗಮನಿಸಿದ ಬಳಿಕ ನಾನು ಯುಎಸ್ ಓಪನ್ ಆಡಲು ನ್ಯೂಯಾರ್ಕ್‌ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇನೆ,' ಎಂದು ವಿಂಬಲ್ಡನ್ ಹಾಲಿ ಚಾಂಪಿಯನ್ ಹಾಲೆಪ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ ಪ್ರೇಗ್ ಓಪನ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತೆ, ಬೆಲ್ಜಿಯಂನ ಎಲೈಸ್ ಮೆರ್ಟೆನ್ಸ್ ಅವರನ್ನು 6-2, 7-5ರ ನೇರ ಸೆಟ್‌ನಿಂದ ಮಣಿಸಿದ ಸಿಮೋನಾ, 21ನೇ ವಿಮೆನ್ಸ್ ಟೂರ್ ಅಸೋಸಿಯೇಶನ್ (ಡಬ್ಲ್ಯೂಟಿಎ) ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.
2020ರ ಯುಎಸ್ ಗ್ರ್ಯಾಂಡ್‌ಸ್ಲ್ಯಾಮ್ ಟೆನಿಸ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ.
Story first published: Tuesday, August 18, 2020, 9:42 [IST]
Other articles published on Aug 18, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications