ವಿಟಿಎ ಫೈನಲ್ಸ್: ಕ್ವಿಟೋವಾ ಸೋಲಿಸಿ ಸೆಮಿಫೈನಲ್ ಗೆ ಪ್ರವೇಶಿಸಿದ ಪ್ಲಿಸ್ಕೋವಾ

ಸಿಂಗಾಪುರ್, ಅಕ್ಟೋಬರ್ 25: ಸಿಂಗಾಪುರ್ ನಲ್ಲಿ ನಡೆಯುತ್ತಿರುವ ವಿಮೆನ್ಸ್ ಟೆನಿಸ್ ಅಸೋಸಿಯೇಷನ್ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಜೆಕ್ ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಅವರು ಪೆಟ್ರಾ ಕ್ವಿಟೋವಾ ಅವರನ್ನು ಸೋಲಿಸುವ ಮೂಲಕ ಸೆಮಿ-ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ (ಅಕ್ಟೋಬರ್ 25) ನಡೆದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಪ್ಲಿಸ್ಕೋವಾ ಅವರು, ತಮ್ಮದೇ ದೇಶದ ಆಟಗಾರ್ತಿ ಕ್ವಿಟೋವಾ ಅವರನ್ನು 6-3, 6-4ರ ನೇರ ಸೆಟ್ ನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡರು. ಇಬ್ಬರ ನಡುವೆ 83 ನಿಮಿಷಗಳ ಕಾದಾಟ ನಡೆಯಿತು.
ಪ್ಲಿಸ್ಕೋವಾ ಗೆಲುವು ಒಂದರ್ಥದಲ್ಲಿ ಹಾಲಿ ಚಾಂಪಿಯನ್, ಡೆನ್ಮಾರ್ಕ್ ನ ಕ್ಯಾರೋಲಿನ್ ವೊಜ್ನಿಯಾಕಿಗೆ ಒತ್ತಡವನ್ನುಂಟು ಮಾಡಿದೆ. ಟೂರ್ನಿಯಲ್ಲಿ ಉಳಿದುಕೊಳ್ಳಬೇಕಾದರೆ ವೊಜ್ನಿಯಾಕಿ, ಟೂರ್ನಿಯ ಸೋಲಿಲ್ಲದ ಉಕ್ರೇನ್ ಆಟಗಾರ್ತಿ ಎಲೆನಾ ಸ್ವಿಟೊಲಿನಾ ಅವರನ್ನು ಸೋಲಿಸಬೇಕಿದೆ.
Story first published: Thursday, October 25, 2018, 17:24 [IST]
Other articles published on Oct 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications