Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್‌ ಇಂಗ್ಲೆಂಡ್ ಚಾಂಪಿಯನ್‌ಶಿಪ್‌: ಟೂರ್ನಿಯಿಂದ ಹೊರಬಿದ್ದ ಸೈನಾ, ಸಿಂಧು

PV Sindhu and saina

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಸೋತು ನಿರಾಸೆ ಮೂಡಿಸಿದ್ದಾರೆ. ಇಬ್ಬರೂ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಮನೆಯತ್ತ ಮುಖಮಾಡಿದ್ದಾರೆ.

ವಿಶ್ವದ ಆರನೇ ಶ್ರೇಯಾಂಕದ ಸಿಂಧು 19-21, 21-16, 17-21ರಲ್ಲಿ ಜಪಾನ್‌ನ ಸಯಾಕಾ ತಕಹಾಶಿ ವಿರುದ್ಧ ಸೋತರು. ಮೊದಲ ಸೆಟ್ ಕಳೆದುಕೊಂಡ ಸಿಂಧು ಬೇಗನೇ ಚೇತರಿಸಿಕೊಂಡು ಎರಡನೇ ಸೆಟ್ ಗೆದ್ದುಕೊಂಡರು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸಯಾಕಾ ತಕಹಶಿ ಮೇಲುಗೈ ಸಾಧಿಸಿದರು. ಇದರೊಂದಿಗೆ ಸಿಂಧು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಮನೆಗೆ ತೆರಳಿದರು. ಸೈನಾ ನೆಹ್ವಾಲ್ 14-21, 21-17, 17-21 ರಲ್ಲಿ ಎರಡನೇ ಶ್ರೇಯಾಂಕದ ಜಪಾನ್‌ನ ಯಮಗುಚಿ ವಿರುದ್ಧ ಸೋತರು. ಮೊದಲ ಸೆಟ್ ಸೋತರೂ, ಎರಡನೇ ಸೆಟ್ ಗೆದ್ದ ಸೈನಾ, ನಿರ್ಣಾಯಕ ಮೂರನೇ ಸೆಟ್ ಕಳೆದುಕೊಂಡು ಟೂರ್ನಿಯಿಂದ ನಿರ್ಗಮಿಸಿದರು.

ಆದ್ರೆ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಮಿಂಚಿತು. ಪ್ರೀ ಕ್ವಾರ್ಟರ್‌ನಲ್ಲಿ ಪುಲ್ಲೇಲ ಗಾಯತ್ರಿ-ತೆರೇಸಾ ಜಾಲಿ ಜೋಡಿ ಮೊದಲ ಸೆಟ್‌ನಲ್ಲಿ ಸೋತು 18-21, 19-14ರಲ್ಲಿ ಎರಡನೇ ಸೆಟ್‌ಗೆ ಮುನ್ನಡೆದರು. ಈ ಮೂಲಕ ಭಾರತದ ಜೋಡಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ 21-7, 21-7ರಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫುಜ್-ಮಾರ್ವಿನ್ ಸೀಡೆಲ್ ವಿರುದ್ಧ ಜಯಗಳಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ಪಂದ್ಯ ಕೇವಲ 27 ನಿಮಿಷಗಳಲ್ಲಿ ಮುಕ್ತಾಯವಾಯಿತು.

Story first published: Friday, March 18, 2022, 10:04 [IST]
Other articles published on Mar 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+