All England: ಭಾರತದ ಪ್ರಶಸ್ತಿಯಾಸೆ ಜೀವಂತವಾಗಿರಿಸಿದ ಸೈನಾ, ಶ್ರೀಕಾಂತ್

ಬರ್ಮಿಂಗ್‌ಹ್ಯಾಮ್, ಮಾರ್ಚ್ 7: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಇದೇ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಪಿವಿ ಸಿಂಧು ನಿರ್ಗಮಿಸಿದ್ದಾರೆ.
ಗುರುವಾರ (ಮಾರ್ಚ್ 7) ನಡೆದ ಮಹಿಳಾ ವಿಭಾಗದ ಮೊದಲ ಸುತ್ತಿನ ಸಿಂಗಲ್ಸ್ ಸ್ಪರ್ಧೆಯಲ್ಲಿ ಸೈನಾ, ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೊರ್ ಅವರನ್ನು 21-17 21-18ರ ಅಂತರದಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು. ಇಬ್ಬರ ಮಧ್ಯೆ 35 ನಿಮಿಷಗಳ ಸೆಣಸಾಟ ನಡೆಯಿತು.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಭರವಸೆಯ ಆಟಗಾರ ಶ್ರೀಕಾಂತ್ ಅವರು ಫ್ರಾನ್ಸ್ ಆಟಗಾರ ಬ್ರೈಸ್ ಲಿವರ್ಡೆಜ್ ಅವರನ್ನು 21-13 21-11ರ ಅಂತರದಿಂದ ಹಿಮ್ಮೆಟ್ಟಿಸಿದರು. ಅಂತಿಮ ಸುತ್ತಿನಲ್ಲಿ ಭಾರತದ ಯಾರೇ ಆಟಗಾರರು ಗೆದ್ದರೆ 18 ವರ್ಷಗಳ ಪ್ರಶಸ್ತಿ ಬರ ಕೊನೆಗೊಳ್ಳಲಿದೆ.ಈ ಟೂರ್ನಿಯಲ್ಲಿ 2001ರಲ್ಲಿ ಪುಲ್ಲೇಲ ಗೋಪಿಚಂದ್ ಅವರು ಭಾರತ ಪರ ಕಡೆಯ ಸಾರಿ ಪ್ರಶಸ್ತಿ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications