For Quick Alerts
ALLOW NOTIFICATIONS  
For Daily Alerts

BWF ವಿಶ್ವ ಚಾಂಪಿಯನ್‌ಶಿಪ್: ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಶ್ರೀಕಾಂತ್: ಫೈನಲ್ ಪಂದ್ಯದ ಸಂಪೂರ್ಣ ಮಾಹಿತಿ

BWF World Championships: Kidambi Srikanth Historical Achievement: Final match Schedule, Date

ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ BWF ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದು ಭಾರತದ ಪರವಾಗಿ ಐತಿಹಾಸಿಕ ಸಾಧನೆ ಮಾಡಿ ಬೀಗಿದ್ದಾರೆ.

28ರ ಹರೆಯದ ಭಾರತದ ಆಟಗಾರ ಕಿದಂಬಿ ಶ್ರೀಕಾಂತ್ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಂಗಪೂರ್‌ನ ಲೋಹ್ ಕಿಯಾನ್ ಯೂ ಅವರನ್ನು ಎದುರಿಸುತ್ತಿದ್ದಾರೆ. ಸ್ಪೈನ್‌ನ ಹುಯೆಲ್ವಾದಲ್ಲಿ ಈ ಪಂದ್ಯ ನಡೆಯಲಿದ್ದು ಈ ಇಬ್ಬರು ಆಟಗಾರರ ಮೂಖಾಮುಖಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಪಂದ್ಯವೂ ಇದೇ ಆಗಿದೆ.

ಪುರುಷರ ಸಿಂಗಲ್ಸ್‌ನ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಲಕ್ಷ್ಯಸೇನ್ ಅವರನ್ನು ಎದುರಿಸಿದರು. ಒಂದು ಗಂಟೆ 9 ನಿಮಿಷಗಳ ಕಾಲ ನಡೆದ ಪೈಪೋಟಿಯ ಪಂದ್ಯದಲ್ಲಿ 17-21, 21-14, 21-17 ರಿಂದ ಶ್ರೀಕಾಂತ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಫೈನಲ್‌ಗೆ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಎರಡನೇ ಸೆಮಿ ಫೈನಲ್ ಹಣಾಹಣಿಯಲ್ಲಿ ಸಿಂಗಪೂರ್ ಶಟ್ಲರ್ ಡೆನ್ಮಾರ್ಕ್‌ನ ಮೂರನೇ ಶ್ರೇಯಾಂಕದ ಆಂಡರ್ಸ್ ಆಂಟನ್‌ಸೆನ್ ಅವರನ್ನು ಸೇಲಿಸಿದರು. ಈ ಪಂದ್ಯದಲ್ಲಿ 23-21, 21-14 ನೇರ ಗೇಮ್‌ಗಳಲ್ಲಿ ಸೋಲಿಸಿ ತನ್ನ ಎರಡನೇ BWF ವಿಶ್ವ ಚಾಂಪಿಯನ್‌ಶಿಪ್ ಈವೆಂಟ್‌ನಲ್ಲಿ ಫೈನಲ್‌ ಪ್ರವೇಶ ಪಡೆದುಕೊಂಡಿದ್ದಾರೆ.

ಇನ್ನು ಈ ಪ್ರತಿಷ್ಠಿತ ಟೂರ್ನಿಯ ಆರಂಭದಲ್ಲಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೋ ಅಬಿಯಾನ್ ವಿರುದ್ಧ 21-12, 21-1 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. ನಂತರ ಅವರು ಚೀನಾದ ಲಿ ಶಿಫೆಂಗ್ ಅವರನ್ನು ಎರಡನೇ ಸುತ್ತಿನಲ್ಲಿ 15-21, 21-18, 21-17 ಸೆಟ್‌ಗಳಿಂದ ಮಣಿಸಿದ್ದರು. ನಂತರ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಮತ್ತೊಬ್ಬ ಎದುರಾಳಿ ಲು ಗುವಾನ್ ಜು ವಿರುದ್ಧ 21-10, 21-5 ರಲ್ಲಿ ನೇರ ಗೇಮ್‌ಗಳ ಜಯ ಸಾಧಿಸಿದರು.

ನಂತರ ಕ್ವಾರ್ಟರ್ ಫೈನಲ್ ಪಂದ್ಯ ಶ್ರೀಕಾಂತ್ ಪಾಲಿಗೆ ಸುಲಭ ಸವಾಲಿನೊಂದ ಕೂಡಿತ್ತು. 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಕ್ತಾಯವಾದ ಪಂದ್ಯದಲ್ಲಿ 21-8, 21-7 ನೇರ ಗೇಮ್‌ಗಳಿಂದ ನೆದರ್‌ಲ್ಯಾಂಡ್‌ನ ಮಾರ್ಕ್ ಕ್ಯಾಲ್ಜೋವ್ ಅವರನ್ನು ಸೋಲಿಸಿದ ಶ್ರೀಕಾಂತ್‌ ಸೆಮಿಫೈನಲ್‌ಗೆ ಪ್ರವೇಶ ಪಡೆದರು.

BWF ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2021 ರ ಆವೃತ್ತಿಗೂ ಮುನ್ನ 2017 ರ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದು ಶ್ರೀಕಾಂತ್ ಅವರ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಲೋಹ್ 2019 ರಲ್ಲಿ ಪ್ರೀ ಕ್ವಾರ್ಟರ್‌ನ ನಿರ್ಗಮಿಸಿದ್ದು ಅವರ ಇದಕ್ಕೂ ಹಿಂದಿನ ಅತ್ಯುತ್ತಮ ಸಾಧನೆಯಾಗಿದೆ.

ಫೈನಲ್ ಪಂದ್ಯದ ಮಾಹಿತಿ:
ದಿನಾಂಕ: ಡಿಸೆಂಬರ್ 19, ಭಾನುವಾರ
ಸಮಯ: ಭಾರತೀಯ ಕಾಲಮಾನ ಸಂಜೆ 6:30ರ ವೇಳೆಗೆ ಆರಂಭವಾಗುವ ಸಾಧ್ಯತೆಯಿದೆ.
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಸ್ಟಾರ್‌ ಸ್ಪೋರ್ಟ್ಸ್ 3
Live ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್

Story first published: Sunday, December 19, 2021, 11:34 [IST]
Other articles published on Dec 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+