ಚೀನಾ ಓಪನ್: ಫೈನಲ್ ನಲ್ಲಿ ಸೋತ ಸೈನಾ ನೆಹ್ವಾಲ್
ಫುಜುಹೊ(ಚೀನಾ), ನ.15: ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ಇನ್ನೊಂದು ಚೀನಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಚೀನಾದ ಎದುರಾಳಿ ವಿರುದ್ಧ 39 ನಿಮಿಷಗಳ ಆಟದಲ್ಲೇ ಶರಣಾಗಿದ್ದಾರೆ.
ಚೀನಾದ ಯಿಹಾನ್ ವಾಂಗ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಚೀನಾ ಓಪನ್ ಸೂಪರ್ ಸೀರಿಸ್ ನ ಫೈನಲ್ ಹಂತ ತಲುಪಿದ್ದರು. ['ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ]

ಅಗ್ರ ಶ್ರೇಯಾಂಕದ ಸೈನಾ ಪ್ರಶಸ್ತಿ ಸುತ್ತಿನಲ್ಲಿ ಒಲಿಂಪಿಕ್ ಚಾಂಪಿಯನ್ ಚೀನದ ಲೀ ಕ್ಸುರುಯಿ ಅವರ ವಿರುದ್ಧ 12-21, 15-21 ಅಂತರದಲ್ಲಿ ಸೋಲು ಕಂಡಿದ್ದಾರೆ. ಕ್ಸುರುಯಿ ವಿರುದ್ಧ 12 ಬಾರಿ ಎದುರಾಗಿರುವ ಸೈನಾ ಅವರು ಕೇವಲ ಎರಡು ಬಾರಿ ಗೆಲುವು ಕಂಡಿದ್ದಾರೆ. 2012ರ ಇಂಡೋನೇಷಿಯಾ ಓಪನ್ ಮತ್ತು 2010ರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಸರಣಿಯಲ್ಲಿ ಮಾತ್ರ ಸೈನಾ ಜಯ ಗಳಿಸಿದ್ದರು.
ಭಾರತದ ಅಗ್ರಗಣ್ಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮತ್ತೊಮ್ಮೆ ತಮ್ಮ ಮುಡಿಗೆ ಮತ್ತೊಮ್ಮೆ ವಿಶ್ವದ ನಂ.1 ಕಿರೀಟ ಧರಿಸಿದ್ದರು. ವಿಶ್ವ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತಲುಪಿದ ಭಾರತದ ಮೊದಲ ಬ್ಯಾಡ್ಮಿಂಟನ್ ತಾರೆ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications